ಸೋಮವಾರಪೇಟೆ,ಜ.7: ಕರ್ನಾಟಕ ಟೈಲರ್ಸ್ ಅಸೋಸಿ ಯೇಷನ್‍ನ ಸೋಮವಾರಪೇಟೆ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ ಹೊಸೊಕ್ಲು ಲಿಂಗಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಸ್ಮಭಾನು ಆಯ್ಕೆಯಾದರು.

ಕೊಡಗು ಜಿಲ್ಲಾ ಟೈಲರ್ಸ್ ಅಸೋಸಿಯೇಷನ್‍ನ ಗೌರವಾಧ್ಯಕ್ಷರಾದ ಬಿ.ಎನ್. ಮಂಜುನಾಥ್‍ರವರ ಅಧ್ಯಕ್ಷತೆಯಲ್ಲಿ ಪತ್ರಿಕಾಭವನದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಜಾನಕಿ, ಸಹ ಕಾರ್ಯದರ್ಶಿಯಾಗಿ ಜಿ.ಎನ್. ನಾಗರಾಜು, ಖಜಾಂಚಿಯಾಗಿ ಬಿ.ಎಸ್. ಕುಮಾರ್ ಆಯ್ಕೆಯಾದರು.

ಎಸ್.ಪಿ. ನಂದೀಶ್, ಆರ್ಮುಗಂ, ಟಿ.ಎಸ್. ಪ್ರಮೀಳ, ಕೆ.ಬಿ. ಗಿರೀಶ್, ಬಿ.ವೈ. ಗಂಗಾಧರ್, ಬಿ.ಎನ್. ಮಂಜುನಾಥ್, ಎಂ.ಎ. ಪ್ರಸನ್ನ, ಬಿ.ಟಿ. ಕುಮಾರ ಹಾಗೂ ಪುಷ್ಪಾ ಜಯರಾಂ ನಿರ್ದೇಶಕರುಗಳಾಗಿ ನೇಮಕಗೊಂಡರು.