ಸಂಪಾಜೆ, ಜ. 7: ಯಾವದೇ ಭಾಷೆಯ ಬೆಳವಣಿಗೆಗೆ ಆ ಭಾಷೆಯ ಸಾಹಿತ್ಯ ಪ್ರೇರಣೆ. ಅರೆಭಾಷೆಯಲ್ಲೂ ಸಮೃದ್ಧ ಸಾಹಿತ್ಯವಿದ್ದು, ಇದರ ಪ್ರೇರಣೆಯ ಮೂಲಕ ಅರೆಭಾಷೆ ಇನ್ನಷ್ಟು ವಿಸ್ತಾರಗೊಂಡು ಬೆಳೆಯಬೇಕು ಎಂದು ಕುಕ್ಕೆಶ್ರೀ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಗೌಡರ ಯುವ ಸೇವಾ ಸಂಘ ಸುಳ್ಯ, ಗ್ರಾಮ ಗೌಡ ಸಮಿತಿ ಜಾಲ್ಸೂರು, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಇವುಗಳ ಸಂಯುಕ್ತ ಸಂಪಾಜೆ, ಜ. 7: ಯಾವದೇ ಭಾಷೆಯ ಬೆಳವಣಿಗೆಗೆ ಆ ಭಾಷೆಯ ಸಾಹಿತ್ಯ ಪ್ರೇರಣೆ. ಅರೆಭಾಷೆಯಲ್ಲೂ ಸಮೃದ್ಧ ಸಾಹಿತ್ಯವಿದ್ದು, ಇದರ ಪ್ರೇರಣೆಯ ಮೂಲಕ ಅರೆಭಾಷೆ ಇನ್ನಷ್ಟು ವಿಸ್ತಾರಗೊಂಡು ಬೆಳೆಯಬೇಕು ಎಂದು ಕುಕ್ಕೆಶ್ರೀ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಗೌಡರ ಯುವ ಸೇವಾ ಸಂಘ ಸುಳ್ಯ, ಗ್ರಾಮ ಗೌಡ ಸಮಿತಿ ಜಾಲ್ಸೂರು, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಇವುಗಳ ಸಂಯುಕ್ತ ಯಶಸ್ವಿಗೊಳಿಸುವಂತಾಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ್, ಅರೆಭಾಷೆಯು ಜಾತಿ, ಮತ, ಧರ್ಮ, ಜನಾಂಗ ಮೀರಿ ಹೋಗಬೇಕು. ಆಗ ಭಾಷಾ ಸಾಮರಸ್ಯ ಸಾಧ್ಯವಾಗುತ್ತದೆ. ಇದು ನಮ್ಮ ಉದ್ಧೇಶ. ಈಗಾಗಲೇ ಅಕಾಡೆಮಿಯಿಂದ ಭಾಷೆಯ ಉಳಿವಿಗೆ ಅನೇಕ ಮಹತ್ವದ ಯೋಜನೆಗಳು ಜಾರಿಯಾಗಿವೆ. ಮುಂದೆ ಸುಳ್ಯ ಹಾಗೂ ಮಡಿಕೇರಿಗಳಲ್ಲಿ ಅರೆಭಾಷೆ ಸಾಹಿತ್ಯ ಸಮ್ಮೇಳನಗಳನ್ನು ನಡೆಸಲು ಅಕಾಡೆಮಿ ಚಿಂತನೆ ನಡೆಸಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾವತಿ ಬಾಳಿಲ, ತಾಲೂಕು ಪಂಚಾಯಿತಿ ಸದಸ್ಯ ತೀರ್ಥರಾಮ ಜಾಲ್ಸೂರು, ಜಾಲ್ಸೂರು ಗೌಡ ಗ್ರಾಮ ಸಮಿತಿ ಅಧ್ಯಕ್ಷ ಉಮಾನಾಥ ಗೌಡ ಹಾಗೂ ಜಾಲ್ಸೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಯಶ್ವಿತ್ ಕಾಳಂಮನೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದ ಸಂಚಾಲಕಿ ಹಾಗೂ ಅಕಾಡೆಮಿ ಸದಸ್ಯೆ ತಿರುಮಲೇಶ್ವರಿ ಅಡ್ಕಾರು, ಅಕಾಡೆಮಿ ಸದಸ್ಯರುಗಳಾದ ಚಿದಾನಂದ ಬೈಲಾಡಿ, ಪರಶುರಾಮ ಚಿಲ್ತಡ್ಕ, ಬೇಕಲ್ ದೇವರಾಜ್, ಕಡ್ಲೇರ ತುಳಸೀ ಮೋಹನ್, ಎ.ಕೆ.ಹಿಮಕರ, ದಿನೇಶ್ ಹಾಲೆಮಜಲು, ಕಾನೆಹಿತ್ಲು ಮೊಣ್ಣಪ್ಪ, ಯತೀಶ್ ಕುಮಾರ್ ಬಾನಡ್ಕ, ಕೆ.ಟಿ. ವಿಶ್ವನಾಥ್, ಬಾರಿಯಂಡ ಜೋಯಪ್ಪ, ಸುರೇಶ್ ಎಂ.ಎಚ್., ಕುಂಬುಗೌಡನ ಪ್ರಸನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಸ್ವಾಗತಿಸಿ ಪ್ರಸ್ತಾವನೆಗೈದರು. ಸ್ವಾಗತ ಸಮಿತಿ ಪದಾಧಿಕಾರಿ ಚೆನ್ನಕೇಶವ ಜಾಲ್ಸೂರು ವಂದಿಸಿದರು. ಶಿಕ್ಷಕಿ ಹೇಮಲತಾ ಗಣೇಶ್ ಕಜೆಗದ್ದೆ ಕಾರ್ಯಕ್ರಮ ನಿರೂಪಿಸಿದರು.