ಸಿದ್ದಾಪುರ, ಜ.7: ಸಿದ್ದಾಪುರದ ಕೊಡವ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಕೊಡವ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್-2019 ಪಂದ್ಯಾಟವು 2 ದಿನಗಳ ಕಾಲ ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ಮೇಜರ್ ಜನರಲ್ ಕಾಳೇಂಗಡ ಚಂಗಪ್ಪ ಕಾರ್ಯಪ್ಪ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕ್ರೀಡೆಯಿಂದ ಪರಸ್ಪರ ಬಾಂಧವ್ಯವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 2 ದಿನಗಳ ಕಾಲ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ 75ಕ್ಕೂ ಅಧಿಕ ಕ್ರೀಡಾ ಪಟುಗಳು ಪಾಲ್ಗೊಂಡಿದ್ದರು.
ಪಂದ್ಯಾವಳಿಯಲ್ಲಿ ಪುರುಷರ ವಿಭಾಗ ಸಿಂಗಲ್ಸ್‍ನಲ್ಲಿ ಪ್ರಥಮ ಐತಿಚಂಡ ಕಿಶಾಲ್ ಗಣಪತಿ, ದ್ವಿತೀಯ ಮಂಡಂಗಡ ಲೋಚನ್ ಚಂಗಪ್ಪ; ಸ್ತ್ರೀಯರ ವಿಭಾಗ ಸಿಂಗಲ್ಸ್‍ನಲ್ಲಿ ಪ್ರಥಮ ಬೊಪ್ಪಂಡ ದಿಯಾಭೀಮಯ್ಯ, ದ್ವಿತೀಯ ಬೊಪ್ಪಂಡ ಕುಸುಮ್‍ಭೀಮಯ್ಯ; ಪುರುಷರ ಡಬಲ್ಸ್‍ನಲ್ಲಿ ಪ್ರಥಮ ಕೀಕಿರ ಧನ್ಯ ಹಾಗೂ ಕಳ್ಳಂಗಡ ಮಂದಣ್ಣ ತಂಡ, ದ್ವಿತೀಯ ಕುಪ್ಪಂಡ ರಜತ್ ಹಾಗೂ ಕೋಳಿಮಾಡ ನಂಜಪ್ಪ; ಸ್ತ್ರೀಯರ ಡಬಲ್ಸ್‍ನಲ್ಲಿ ಪ್ರಥಮ ಬೊಪ್ಪಂಡ ದಿಯಾ ಹಾಗೂ ಬೊಪ್ಪಂಡ ಕುಸುಮ್, ದ್ವಿತೀಯ ತಾತಪಂಡ ಜ್ಯೋತಿ ಹಾಗೂ ಪೆಮ್ಮುದಿಯಾಂಡ ಇಂದಿರಾ; ವೆಟೆರನ್ಸ್ ಡಬಲ್ಸ್ ಪ್ರಥಮ ಪೆಮ್ಮುದಿಯಾಂಡ ಅಪ್ಪಣ್ಣ ಹಾಗೂ ಬೊಪ್ಪೆರ ಜಯಉತ್ತಪ್ಪ, ದ್ವಿತೀಯ ದೇವಣಿರ ಸುಜಯ್ ಹಾಗೂ ಕಳ್ಳೆಂಗಡ ರವಿ ಪ್ರಶಸ್ತಿಯನ್ನು ಪಡೆದುಕೊಂಡರು. ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ದೇವಣಿರ ಸುಜಯ್, ಉಪಾಧ್ಯಕ್ಷರುಗಳಾದ ವೀಣಾ ಚುಬ್ರು, ಪುಟ್ಟಿಚ್ಚಂಡ ಡಯಾನ ಸೋಮಯ್ಯ ಹಾಗೂ ಪದಾಧಿಕಾರಿಗಳು ಹಾಜರಿದ್ದರು.