ಕೂಡಿಗೆ, ಜ. 7: ಇಲ್ಲಿಗೆ ಸಮೀಪದ ಚಿಕ್ಕ ಅಳುವಾರ ಗ್ರಾಮದ ಎ.ಅರ್. ರಮೇಶ್ ಎಂಬಾತನ ಮನೆಯ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಧಾಳಿ ಮಾಡಿ ಮನೆಯಲ್ಲಿ ಅನಧಿಕೃತವಾಗಿ ಸಂಗ್ರಹ ಮಾಡಿದ್ದ ಬೀಟೆ ಸೇರಿದಂತೆ ಕಾಡು ಜಾತಿಯ ಮರದ ತುಂಡುಗಳು ಸೇರಿದಂತೆ 1 ಲಕ್ಷ ರೂ. ಮೌಲ್ಯದ ಮರಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ರಮೇಶ ಕಳೆದ ತಿಂಗಳು ಬೀಟೆ ಮರ ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದು, ಇದೀಗ ಆತನ ವಿರುದ್ಧ ಎರಡನೇ ಮೊಕದ್ದಮೆ ದಾಖಲಾಗಿದೆ. ಕಾರ್ಯಾಚರಣೆ ವೇಳೆ ಸೋಮವಾರಪೇಟೆ ವಲಯ ಅರಣ್ಯ ಅಧಿಕಾರ ಲಕ್ಷ್ಮಿಕಾಂತ್ ಮಾರ್ಗದರ್ಶನದಲ್ಲಿ ಬಾಣಾವರ ಉಪ ಅರಣ್ಯಾಧಿಕಾರಿ ಮಹಾದೇವ ನಾಯಕ, ಡಿಅರ್ ಎಫ್, ಸತೀಶ್, ಕುಮಾರ, ರಾಜಣ್ಣ, ಈಶ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.