ವೀರಾಜಪೇಟೆ, ಜ.6: ವೀರಾಜಪೇಟೆ ಪಟ್ಟಣ ಪಂಚಾ ಯಿತಿಗೆ ನಡೆದ ಚುನಾವu Éಯಲ್ಲಿ ಹದಿನೈದನೇ ಬ್ಲಾಕ್‍ನಲ್ಲಿ ಚುನಾವಣೆ ಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇರೆ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿ ಪಿ.ಎ.ಮಂಜುನಾಥ್ ಅವರು ಸಲ್ಲಿಸಿರುವ ಚುನಾವಣೆ ತಕರಾರು ಅರ್ಜಿಯ ವಿಚಾರಣೆಯನ್ನು ಇಲ್ಲಿನ ಸಿವಿಲ್ ಜಡ್ಜ್ ನ್ಯಾಯಾಲಯದ ನ್ಯಾಯಾಧೀಶರು ತಾ. 18ಕ್ಕೆ ಮುಂದೂಡಿದರು.

ಚುನಾವಣಾ ತಕರಾರು ಅರ್ಜಿಯ ವಿವಾದದ ಪ್ರಕರಣ ನಿನ್ನೆ ದಿನ ನ್ಯಾಯಾಲಯದ ಮುಂದೆ ಬಂದಿದ್ದು ವಾದಿ ಪ್ರತಿವಾದಿಗಳ ವಕೀಲರು, ಸಹಾಯಕ ಚುನಾ ವಣಾಧಿಕಾರಿಗಳು ಹಾಜರಿದ್ದರು. ಚುನಾವಣಾ ತಕರಾರು ವಿವಾದದ ಪ್ರಕರಣಕ್ಕೆ ಸಂಭಂಧಿಸಿ ದಂತೆ ಅಭ್ಯರ್ಥಿ ನ್ಯಾಯಾಲಯಕ್ಕೆ ನೀಡಿದ ದೂರಿನ ಮೇರೆ 15ನೇ ಬ್ಲಾಕ್‍ನ ವಜೇತ ಅಭ್ಯರ್ಥಿ ತಾಲೂಕು ಸಹಾಯಕ ಚುನಾವಣಾಧಿಕಾರಿ ಸೇರಿದಂತೆ ಒಟ್ಟು 7 ಮಂದಿಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು. ಸರ್ಕಾರಿ ಅಧಿಕಾರಿಗಳ ಪರವಾಗಿ ಸರಕಾರಿ ಸಹಾಯಕ ಅಭಿಯೋಜಕರು ವಕಾಲತು ವಹಿಸಿದ್ದಾರೆ.