ಕುಶಾಲನಗರ, ಜ. 6: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕುಶಾಲನಗರ ಒಕ್ಕೂಟ ವತಿಯಿಂದ ಪಟ್ಟಣದ ಸೋಮೇಶ್ವರ ದೇವಾಲಯ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.
ಶ್ರೀ ಆಂಜನೇಯ ದೇವಾಲಯ ಸಮಿತಿ ಪ್ರಮುಖರು, ಉದ್ಯಮಿಗಳಾದ ವಿ.ಡಿ. ಪುಂಡರೀಕಾಕ್ಷ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪರಿಸರವನ್ನು ಸ್ವಚ್ಚವಾಗಿಟು ್ಟಕೊಳ್ಳುವದು ಪ್ರಜ್ಞಾವಂತ ನಾಗರೀಕರ ಕರ್ತವ್ಯವಾಗಿದೆ ಎಂದರು.
ದೇವಸ್ಥಾನ ಅರ್ಚಕರಾದ ಮಂಜುನಾಥ್, ಒಕ್ಕೂಟದ ಅಧ್ಯಕ್ಷರಾದ ಪದ್ಮಾವತಿ, ಕುಶಾಲನಗರ ವಲಯ ಮೇಲ್ವಿಚಾರಕ ಕೆ.ಹರೀಶ್, ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘಗಳ ಸದಸ್ಯರುಗಳು, ಸೇವಾ ಪ್ರತಿನಿಧಿಗಳಾದ ಯಶೋದ, ಜಯಲಕ್ಷ್ಮಿ, ಡಾಟಿಯವರು ಇದ್ದ್ದರು.
ನಂತರ ಎಲ್ಲರೂ ದೇವಸ್ಥಾನದ ಸುತ್ತಮುತ್ತಲ ಆವರಣದಲ್ಲಿ ಬೆಳೆದಿದ್ದ ಕಾಡು ಗಿಡಗಂಟಿಗಳನ್ನು ಕಡಿದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿಗೊಳಿಸುವ ಮೂಲಕ ಸ್ವಚ್ಛತೆ ಕೈಗೊಂಡರು.