ಮಡಿಕೇರಿ, ಜ. 6 : ವಿಶ್ವದ ಸೂP್ಷÀ ್ಮ ಬುಡಕಟ್ಟು ಜನಾಂಗಗಳಲ್ಲಿ ಒಂದಾದ ಕೊಡವ ಸಮುದಾಯದ ರಕ್ಷಣೆಗಾಗಿ ಕೊಡವ ಕುಲಶಾಸ್ತ್ರ ಅಧ್ಯಯನ ಕಾರ್ಯ ಅನಿವಾರ್ಯವಾಗಿದ್ದು, ರಾಜ್ಯ ಸರ್ಕಾರ ಈ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಭದ್ರ ಹಿತಾಸಕ್ತಿಗಳ ಷಡ್ಯಂತ್ರದಿಂದ ಸ್ಥಗಿತಗೊಂಡಿದ್ದ ಕುಲಶಾಸ್ತ್ರ ಅಧ್ಯಯನಕ್ಕೆ ಮತ್ತೆ ಚಾಲನೆ ನೀಡಿರುವದು ಸ್ವಾಗತಾರ್ಹ. ಆದರೆ ಸರ್ವೆ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಿ ಸಂವಿಧಾನ ತಿದ್ದುಪಡಿಗಾಗಿ ಕೇಂದ್ರಕ್ಕೆ ಕಳುಹಿಸಿದಾಗ ಮಾತ್ರ ಕೊಡವರು ಮುಖ್ಯಮಮತ್ರಿಗಳ ರಕ್ಷಿತಾ ವಲಯದಲ್ಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿಶ್ವದ ಸೂP್ಷÀ ್ಮ ಬುಡಕಟ್ಟು ಜನಾಂಗಗಳು ಈಗಾಗಲೇ ನಶಿಸಿ ಹೋಗುತ್ತಿದ್ದು, ಕೊಡವ ಸಮುದಾಯದ ಉಳಿವಿಗೆ ಕುಲಶಾಸ್ತ್ರ ಅಧ್ಯಯನ ಸಹಕಾರಿಯಾಗಲಿದೆ. ಇದೀಗ ಮತ್ತೆ ಅಧ್ಯಯನ ಆರಂಭಗೊಡಿರುವುದರಿಂದ ಜನಾಂಗದ ಅಭಿವೃದ್ಧಿ ಮತ್ತು ರP್ಷÀಣೆಯ ಬಗ್ಗೆ ಕೊಡವರಲ್ಲಿ ವಿಶ್ವಾಸ ಮೂಡಿದೆ ಎಂದು ನಾಚಪ್ಪ ಹೇಳಿದರು.
ಕೊಡವ ನ್ಯಾಷನಲ್ ಕೌನ್ಸಿಲ್‍ನ ನಿರಂತರ ಹೋರಾಟಕ್ಕೆ ಸಿಕ್ಕ ಪ್ರತಿಫಲ ಇದಾಗಿದ್ದು, ಅಧ್ಯಯನಕ್ಕೆ ಅಡ್ಡಿಯಾ ಗಿದ್ದ ಕುತಂತ್ರಿಗಳಿಗೆ ಹಿನ್ನಡೆಯಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ರಾಜಕೀಯ ಹಿತಾಸಕ್ತಿಯನ್ನು ಬದಿಗಿರಿಸಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವದು ಈಗಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ. ರಾಜ್ಯ ರ್ಸಕಾರ ಸಿದ್ಧಪಡಿಸಿದ ವರದಿಯನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದ್ದು, ಮುಂದಿನ ಪೀಳಿಗೆಯ ರP್ಷÀಣೆಗಾಗಿ ಈ ಕಾರ್ಯ ಯಶಸ್ವಿಯಾಗಬೇಕಿದೆ ಎಂದರು.
ಕೊಡವ ಬುಡಕಟ್ಟು ಕುಲವನ್ನು ರಾಜ್ಯಾಂಗದ ಶೆಡ್ಯುಲ್ ಪಟ್ಟಿಯಲ್ಲಿ ಸೇರಿಸಿ ಅಧಿಕೃತಗೊಳಿಸಿದಾಗ ಮಾತ್ರ ಅತ್ಯಂತ ಅಲ್ಪ ಸಂಖ್ಯಾತ ಕೊಡವರ ಧಾರ್ಮಿಕ, ಸಾಂಸ್ಕøತಿಕ ಮತ್ತು ಪಾರಂಪರಿಕ ಹಕ್ಕುಗಳ ಸಂರಕ್ಷಣೆ, ಅವರ ಔದ್ಯೋಗಿಕ ಹಕ್ಕಿಗೆ ಪ್ರೋತ್ಸಾಹ ದೊರೆತಂತ್ತಾಗುತ್ತದೆ. ಪರಂಪರೆಯ ಭೂ-ಹಕ್ಕು ಮಾತ್ತು ಕೊಡವರ ಸಾಂಪ್ರದಾಯಿಕ ಆವಾಸಸ್ಥಾನದ ನಿರಂತರತೆಯ ಸ್ಥಿರೀಕರಣ ಹಾಗೂ ಆರ್ಥಿಕ ಅಭ್ಯುದಯಗಳಿಗಾಗಿ ಇದೊಂದು ಮಹತ್ವಪೂರ್ಣ ಹೆಬ್ಬಾಗಿಲಾಗಿದೆ. ಕೊಡವ ಜನಾಂಗದ ಉಳಿವು ಮತ್ತು ಪರಂಪರೆಯ ಬೆಳವಣಿಗೆಗೆ ಕುಲಶಾಸ್ತ್ರ ಅಧ್ಯಯನ ಪೂರಕವಾಗಿದ್ದು, ಈ ಪ್ರಕ್ರಿಯೆಗೆ ಮರುಜೀವ ನೀಡಿದ ಪ್ರಧಾನಮಂತ್ರಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕೇಂದ್ರ ಬುಡಕಟ್ಟು ಸಚಿವ ಜ್ಯುವೆಲ್ ಓರಮ್, ಹಿರಿಯ ಮುತ್ಸದ್ದಿ ಡಾ. ಸುಬ್ರಮಣ್ಯ ಸ್ವಾಮಿ, ಬಿ.ಕೆ. ಹರಿಪ್ರಸಾದ್, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ, ಅಭಿನಂದನಾರ್ಹರಾಗಿದ್ದಾರೆ ಎಂದು ತಿಳಿಸಿದ ನಾಚಪ್ಪ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಆದಷ್ಟು ಶೀಘ್ರ ಅಧ್ಯಯನ ಪ್ರಕ್ರಿಯೆ ಪೂರ್ಣ ಗೊಳಿಸುವ ಮೂಲಕ ಕೊಡವ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು
ಸುದ್ದಿಗೋಷ್ಠಿಯಲ್ಲಿ ಸಿಎನ್‍ಸಿ ಪ್ರಮುಖ ಚಂಬಂಡ ಜನತ್ ಉಪಸ್ಥಿತರಿದ್ದರು.