ಮಡಿಕೇರಿ, ಜ. 6: ಚೆಂಬೆಬೆಳ್ಳೂರು ತೋಟವೊಂದರ ಕಾರ್ಮಿಕನಾಗಿದ್ದ ಚಂದ್ರ (38) ಎಂಬಾತ ಕಳೆದ ಆಗಸ್ಟ್ 21 ರಂದು ದೇವಣಗೇರಿಯ ತನ್ನ ಸಂಬಂಧಿ ಮನೆಗೆ ಹೋಗಿ ಬರುವದಾಗಿ ತೆರಳಿದ್ದು, ಅನಂತರ ಇದುವರೆಗೆ ಹಿಂತಿರುಗದೆ ಕಾಣೆಯಾಗಿದ್ದಾಗಿ ಕಾರ್ಮಿಕನ ಪತ್ನಿ ರಾಧ ವೀರಾಜಪೇಟೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಾರ್ಮಿಕನ ಸುಳಿವು ಲಭಿಸಿದರೆ 08274- 257462 ಅಥವಾ 229000ಗೆ ತಿಳಿಸಲು ಸಲಹೆ ನೀಡಿದ್ದಾರೆ.