ಕುಶಾಲನಗರ, ಜ. 6: ಮೈಸೂರು ಜಿಲ್ಲೆ ಸುತ್ತೂರಿನಲ್ಲಿ ಫೆ 1 ರಿಂದ 6 ರವರೆಗೆ ಜಾತ್ರಾ ಮಹೋತ್ಸವಕ್ಕೆ ರಾಜ್ಯಾದ್ಯಂತ ಪ್ರಚುರಪಡಿಸಲು ಸುತ್ತೂರಿನಿಂದ ಹೊರಟ ವಿಶೇಷ ರಥ ಕುಶಾಲನಗರಕ್ಕೆ ಆಗಮಿಸಿದ ಸಂದರ್ಭ ಸಾಂಪ್ರದಾಯಿಕವಾಗಿ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು.

ಕಾರು ನಿಲ್ದಾಣದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ.ಶಶಿಧರ್ ಮತ್ತಿತರರು ರಥದಲ್ಲಿದ್ದ ಶ್ರೀಗಳ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು. ನಂತರ ಮಾತನಾಡಿದ ವಿ.ಪಿ.ಶಶಿಧರ್, ವಿಶ್ವಪ್ರಸಿದ್ದ ಸುತ್ತೂರು ಜಾತ್ರೆ ಜಾತ್ಯಾತೀತವಾಗಿ ಎಲ್ಲಾ ಧರ್ಮೀಯರನ್ನು ತನ್ನತ್ತ ಆಕರ್ಷಿಸುವ ಹಾಗೂ ಭಾವೈಕ್ಯತೆಯನ್ನು ಸಾರುವ ಈ ನಾಡಿನ ಸಂಸ್ಕøತಿ ಜನಪದ ಕಲೆಯನ್ನು ಒಳಗೊಂಡಿದೆ ಎಂದರು.

ಕಾವೇರಿ ನದಿ ಸಂರಕ್ಷಣೆ ಅಭಿಯಾನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್, ವಚನ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ಆರ್ಯವೈಶ್ಯ ಮಂಡಳಿಯ ರಾಜ್ಯ ಪದಾಧಿಕಾರಿ ಎಸ್.ಎನ್.ನರಸಿಂಹಮೂರ್ತಿ, ಕುಶಾಲನಗರದ ವೀರಶೈವ ಸಮಾಜದ ಅಧ್ಯಕ್ಷ ಎಂ.ಎಸ್.ಶಿವಾನಂದ, ಪರಮೇಶ್, ಐಗೂರು ಪಂಚಾಯಿತಿ ಸದಸ್ಯ ಕೆ.ಪಿ.ದಿನೇಶ್, ಜಾತ್ರಾ ಪ್ರಚಾರ ಸಮಿತಿ ಪ್ರಮುಖರಾದ ಗುರುಲಿಂಗಪ್ಪ, ಪ್ರದೀಪ್, ವಿಜಯಕುಮಾರ್, ಕುಮಾರ್, ರಾಜಶೇಖರ್, ಮಹದೇವಸ್ವಾಮಿ, ಕೆ.ಬಿ.ರಾಜು ಇದ್ದರು.

ಪ್ರಚಾರ ಸಮಿತಿ ಸಂಚಾಲಕ ಪಂಚಾಕ್ಷರಿ ಜಾತ್ರಾ ಪ್ರಚಾರ ರಥದ ಸಂಚಾಲಕ ಯಾತ್ರೆಯ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿ, ರಾಜ್ಯದ 8 ಜಿಲ್ಲೆಗಳಲ್ಲಿ 25 ದಿನಗಳ ಕಾಲ ಸಂಚರಿಸಲಿರುವ ರಥ ಜಾತ್ರೆಯ ಬಗ್ಗೆ ನಾಡಿನ ಜನತೆಗೆ ಮಾಹಿತಿ ನೀಡಲಿದೆ. ಸುತ್ತೂರು ಜಾತ್ರೆ ಫೆ.1 ರಿಂದ ಪ್ರಾರಂಭವಾಗಲಿದ್ದು ಫೆ.2 ರಂದು ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ. ಫೆ.3 ರಂದು ರಥೋತ್ಸವ, 4 ರಂದು ಲಕ್ಷ ದೀಪೋತ್ಸವ, 5 ರಂದು ತೆಪ್ಪೋತ್ಸವ, 6 ರಂದು ಅನ್ನಬ್ರಹ್ಮೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.