ಮಡಿಕೇರಿ, ಜ. 4: ವಿಶ್ವ ಶೌಚಾಲಯ ದಿನವಾದ ಕಳೆದ ನ.19 ರ ಮುನ್ನ ನ.9 ರಿಂದ 10 ದಿನಗಳ ಕಾಲ ರಾಷ್ಟ್ರ ಮಟ್ಟದಲ್ಲಿ ಕೇಂದ್ರÀ ಸರಕಾರ ಸ್ವಚ್ಛತಾ ಜನಾಂದೋಲನ ಕಾರ್ಯಕ್ರಮ ಏರ್ಪಡಿಸಿ ಈ ಸಂಬಂಧ ಜಿಲ್ಲಾ ಮಟ್ಟದ ಸ್ಪರ್ಧೆಗೂ ಜಿಲ್ಲಾಡಳಿತಕ್ಕೆ ಅವಕಾಶ ಕಲ್ಪಿಸಿತ್ತು. ಕೇಂದ್ರ ಕುಡಿಯುವ ನೀರು, ಶೌಚಾಲಯ ಮಾಹಿತಿ (ಎಂಡಿಡಬ್ಲ್ಯುಎಸ್) ಸಚಿವಾಲಯದ ಶಿಕ್ಷಣ ಮತ್ತು ಸಂಪರ್ಕ ವಿಭಾಗ (ಐಇಸಿ) ರಾಷ್ಟ್ರಮಟ್ಟದಲ್ಲಿ ಸ್ವಛ್ಛ ಭಾರತ್ ಜನಾಂದೋಲನ ಕಾರ್ಯಾಚರಣೆಯ ಕುರಿತಾಗಿ ಸ್ಪರ್ಧೆ ಏರ್ಪಡಿಸಿತ್ತು. ಭಾರತದ 25 ರಾಜ್ಯಗಳ 412 ಜಿಲ್ಲೆಗಳ ಪೈಕಿ ಕೊಡಗು ಜಿಲ್ಲೆಯು ಕಳೆÀದ ನವೆಂಬರ್‍ನಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ರಾಷ್ಟ್ರ ಮಟ್ಟದಲ್ಲಿ 10 ಉನ್ನತ ಸ್ಥಾನ ಪಡೆದ ಜಿಲ್ಲೆಗಳ ಪೈಕಿ ಒಂದಾಗಿ ಮಿಂಚಿದೆ.

ಈ ಕುರಿತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ. ಕೆ. ಲಕ್ಷ್ಮಿಪ್ರಿಯ ಅವರನ್ನು “ಶಕ್ತಿ” ಪ್ರಶ್ನಿಸಿದಾಗ ಜಿಲ್ಲಾ ಪಂಚಾಯ್ತಿ ವತಿಯಿಂದ ಗ್ರೀನ್ ಸಿಟಿ ಮತ್ತಿತರ ಪ್ರಮುಖ ಸಂಘ ಸಂಸ್ಥೆಗಳ ಸಹಯೋಗದಿಂದ 10 ದಿನಗಳ ಕಾಲ ಕೈಗೊಂಡ ವಿವಿಧ ಶುಚಿತ್ವ ಜಾಗೃತಿ ಹಾಗೂ ಸ್ವಚ್ಛತಾ ಕಾರ್ಯಗಳ ಬಗ್ಗೆ ಚಿತ್ರ ಸಹಿತ ವರದಿಯನ್ನು ಕೇಂದ್ರ ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿತ್ತು ಈ ಆಧಾರದಲ್ಲಿ ಕೇಂದ್ರವು ಪರಿಗಣನೆ ಮಾಡಿ ಕೊಡಗನ್ನು 10 ಜಿಲ್ಲೆಗಳ ಅಗ್ರಪಟ್ಟಿಯಲ್ಲಿ ಬಹುಮಾನಿತ ಜಿಲ್ಲೆಯೆಂದು ಘೋಷಿಸಿದೆ ಎಂದು ಲಕ್ಷ್ಮಿಪ್ರಿಯ ಮಾಹಿತಿಯಿತ್ತರು.

ಸ್ವಚ್ಛ ಭಾರತ ಆಂದೋಲನದಲ್ಲಿ ಇಡೀ ದೇಶದಲ್ಲಿ ಜಾಗೃತಿ ಮೂಡಿಸಿ ಕೋಟ್ಯಂತರ ಜನರನ್ನು ಸ್ವಚ್ಛತಾ ಪಾಲನೆಗೋಸ್ಕರ ತೊಡಗಿಸುವ ಕಾರ್ಯಕ್ರಮ ಇದಾಗಿತ್ತು. ಕೊಡಗಿನ ಮುಖ್ಯಪಟ್ಟಣ ಮಡಿಕೇರಿಯಲ್ಲಿ ವಿಶ್ವ ಶೌಚಾಲಯ ದಿನವಾದ ಕಳೆದ ನ. 19 ರಂದು ಕೊಡಗಿನ ಖ್ಯಾತ ಕ್ರಿಕೆಟ್ ಪಟು ರಾಬಿನ್ ಉತ್ತಪ್ಪ್ಪ ಅವರನ್ನು ಆಹ್ವಾನಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.

(ಮೊದಲ ಪುಟದಿಂದ) ರಾಷ್ಟ್ರದ ವಿವಿಧ ರಾಜ್ಯಗಳ 10 ಜಿಲ್ಲೆಗಳು ಈ ಕಾರ್ಯಕ್ರಮಗಳ ಯಶಸ್ವೀ ಸಾಧನೆsÉಗಾಗಿ ಅಗ್ರ ಪಟ್ಟಿಯಲ್ಲ್ಲಿ ಸೇರ್ಪಡೆಗೊಂಡಿದ್ದು, ಈ ಪೈಕಿ ಕೊಡಗು ಜಿಲ್ಲೆಯೂ ಒಂದು ಎನ್ನುವದು ವಿಶೇಷವೆನಿಸಿದೆ. ಕರ್ನಾಟಕದಲ್ಲಿ ಮತ್ತೊಂದು ಜಿಲ್ಲೆ ಗದಗ್ ಈ ಅಗ್ರಪಟ್ಟಿಯಲ್ಲಿಲ್ಲದಿದ್ದರೂ 42 ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಉಳಿದಂತೆ ರಾಜ್ಯದಲ್ಲಿ ಯಾವ ಜಿಲ್ಲೆಗಳಿಗೂ ಈ ಅವಕಾಶ ದೊರಕಿಲ್ಲ.