ಮಡಿಕೇರಿ, ಡಿ. 4: ಮಂಗಳೂರು ವಿಶ್ವವಿದ್ಯಾನಿಲಯದ ಎಪ್ರಿಲ್-ಮೇ 2018ರಲ್ಲಿ ನಡೆದ ವಿವಿಧ ಪದವಿ ಕೋರ್ಸುಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ವಿಶ್ವವಿದ್ಯಾನಿಲಯದಲ್ಲಿ ನಡೆಯಲಿರುವ 37ನೇ ಘಟಿಕೋತ್ಸವದಲ್ಲಿ ಈ ವಿದ್ಯಾರ್ಥಿಗಳು ರ್ಯಾಂಕ್ ಪ್ರಮಾಣ ಪತ್ರ ಪಡೆಯಲು ಅರ್ಹರಾಗಿರುತ್ತಾರೆ. ವಿವಿಧ ಪದವಿ ಕೋರ್ಸುಗಳ ಒಟ್ಟು 94 ರ್ಯಾಂಕ್‍ಗಳಲ್ಲಿ (ಕಲೆ-22, ವಿಜ್ಞಾನ ಮತ್ತು ತಂತ್ರಜ್ಞಾನ-38, ವಾಣಿಜ್ಯ-23, ಶಿಕ್ಷಣ-11) 18 ವಿದ್ಯಾರ್ಥಿಗಳು ಪ್ರಥಮ ರ್ಯಾಂಕ್ ಪಡೆದಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪ್ರಮಾಣಪತ್ರ ನೀಡಲಾಗುವದು.
ಮಂಗಳೂರು ವಿಶ್ವವಿದ್ಯಾನಿಲಯದ ನವೆಂಬರ್-ಡಿಸೆಂಬರ್ 2018ರಲ್ಲಿ ನಡೆಸಿದ ಎಲ್ಲಾ ಪದವಿ ಕೋರ್ಸುಗಳ ಪ್ರಥಮ, ತೃತೀಯ ಮತ್ತು ಪಂಚಮ ಸೆಮಿಸ್ಟರ್‍ನ ಪರೀಕ್ಷೆಗಳು ದಿನಾಂಕ 02.11.2018ರಂದು ಪ್ರಾರಂಭಗೊಂಡು ದಿನಾಂಕ 10.12.2018ಕ್ಕೆ ಮುಕ್ತಾಯಗೊಂಡಿರುತ್ತವೆ ಹಾಗೂ ಈ ಪರೀಕ್ಷೆಗಳ ವಿವಿಧ ವಿಷಯಗಳ ಮೌಲ್ಯಮಾಪನವು ದಿನಾಂಕ 27.11.2018 ರಂದು ಪ್ರಾರಂಭಗೊಂಡು ದಿನಾಂಕ 29.12.2018 ಮುಕ್ತಾಯಗೊಂಡಿದೆ. ಮೌಲ್ಯಮಾಪನ ಪೂರ್ಣಗೊಳಿಸಿದ ಕೋರ್ಸ್‍ಗಳಾದ ಬಿ.ಎಸ್.ಡಬ್ಲ್ಯೂ. ಬಿಬಿಎಂ. ಬಿಎ. ಹೆಚ್.ಆರ್.ಡಿ. ಕೋರ್ಸ್‍ಗಳ ಫಲಿತಾಂಶವನ್ನು ದಿನಾಂಕ 22.12.2018ರಂದು, ಬಿ.ಸಿ.ಎ. ಕೋರ್ಸಿನ ಫಲಿತಾಂಶವು ದಿನಾಂಕ 24.12.2018ರಂದು ಮತ್ತು ಬಿ.ಕಾಂ. ಬಿ.ಎಸ್ಸಿ. ಬಿ.ಎ ಕೋರ್ಸುಗಳ ಫಲಿತಾಂಶವನ್ನು ಕ್ರಮವಾಗಿ 26.12.2018, 29.12.2018 ಮತ್ತು 31.12.2018ರಂದು ಮಂಗಳೂರು ವಿಶ್ವವಿದ್ಯಾನಿಲಯದ ಅಧೀಕೃತ ವೆಬ್‍ಸೈಟ್‍ನಲ್ಲಿ (ತಿತಿತಿ.mಚಿಟಿgಚಿಟoಡಿeuಟಿiveಡಿsiಣಥಿ.ಚಿಛಿ.iಟಿ) ಪ್ರಕಟಿಸಲಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯವು ಈ ಬಾರಿ ಮೌಲ್ಯಮಾಪನ ಕೇಂದ್ರದಲ್ಲಿಯೇ ಅಂಕತ:ಕ್ತೀಕರಣ ದಾಖಲಿಸುವ ಪ್ರಕ್ರಿಯೆಯನ್ನು ಆನ್‍ಲೈನ್ ವ್ಯವಸ್ಥೆ ಮೂಲಕ ಸಂಪೂರ್ಣವಾಗಿ ಗಣಕೀಕರಣಗೊಳಿಸಿದ್ದರಿಂದ ಕ್ಷಿಪ್ರವಾಗಿ ಫಲಿತಾಂಶಗಳನ್ನು ಪ್ರಕಟಿಸಲು ಸಾಧ್ಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.