ವೀರಾಜಪೇಟೆ, ಜ. 4: ಕಲ್ಕಿ ಧರ್ಮದ ಮುಖ್ಯ ಉದ್ದೇಶ ಸತ್ಯಯುಗದ ಸ್ಥಾಪನೆಯಾಗಿದೆ ಎಂದು ಕಲ್ಕಿ ಭಕ್ತವೃಂದದ ಲತಾ ಪೂಣಚ್ಚ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು. ಗೋಣಿಕೊಪ್ಪದ ಉಮಾ ಮಹೇಶ್ವರಿ ದೇವಾಲಯ ದಲ್ಲಿ ನಡೆದ ಕಲ್ಕಿ ಭಕ್ತ ವೃಂದ ವತಿಯಿಂದ ಮುಕ್ತಿ ಸಾದನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು. ಇದೇ ಸಂದರ್ಭ ಕೊಡಗಿನ ಕಲ್ಕಿ ಭಕ್ತರು ಸಂಗ್ರಹಿಸಿದ ರೂ. 1.10 ಲಕ್ಷಗಳನ್ನು ಕೊಡಗಿನ ಸಂತ್ರಸ್ತರ ಸುಮಾರು 11 ಕುಟುಂಬಗಳಿಗೆ ವಿತರಿಸಲಾಯಿತು. ಜೊತೆಗೆ ಈ ಕುಟುಂಬಗಳಿಗೆ ಅಗತ್ಯ ಆಹಾರ ಕಿಟ್‍ಗಳನ್ನು ಸಹ ವಿತರಿಸಲಾಯಿತು.