ನಾಪೋಕ್ಲು, ಜ. 5: ಇದು ಭತ್ತದ ಕಟಾವಿನ ಸಮಯ.ಇನ್ನೇನು ಬೆಳೆ ಕೈಸೇರಬೇಕು ಎನ್ನುವಷ್ಟರಲ್ಲಿ ರೈತರಲ್ಲಿ ಆತಂಕ ಮನೆಮಾಡಿದೆ.ಇದಕ್ಕೆ ಕಾರಣ ಕಾಡುಹಂದಿಗಳ ಕಾಟ. ಇದು ಇಲ್ಲಿಗೆ ಸಮೀಪದ ಕಕ್ಕಬ್ಬೆ ಯವಕಪಾಡಿ ಗ್ರಾಮದ ರೈತರ ಸಮಸ್ಯೆ.

ಹತ್ತಾರು ಕಾರಣಗಳಿಂದ ಭತ್ತದ ಬೇಸಾಯವನ್ನು ರೈತರು ಕೈಬಿಟ್ಟಿದ್ದರೂ ಕೆಲವು ರೈತರು ಅತಿವೃಷ್ಟಿ ಅನಾವೃಷ್ಟಿ ಗಳ ನಡುವೆ ಅಲ್ಲಲ್ಲಿ ಭತ್ತ ಬೆಳೆಯುತ್ತಿ ದ್ದಾರೆ. ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬಂದರೂ ಬಾಯಿಗೆ ಬರದಂತಾಗಿದೆ. ಕಕ್ಕಬ್ಬೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಮತ್ತು ಮರಂದೋಡ ಗ್ರಾಮಗಳ ಕೆಲವು ರೈತರು ಹಿರಿಯರ ಕಾಲದಿಂದಲೇ ಭೂಮಿಯನ್ನು ಬಂಜರು ಬಿಡದೆ ಭತ್ತದ ಕೃಷಿ ಮಾಡುತ್ತಾ ಬಂದಿದ್ದರು. ಆದರೆ ಇದೀಗ ನಿರಂತರ ಕಾಡುಹಂದಿಗಳ ಧಾಳಿಯಿಂದ ಭತ್ತದ ಫಸಲು ನಾಶವಾಗುತ್ತಿದೆ. ಭತ್ತ ಕಟಾವಿಗೆ ಬಂದಿರುವ ಅವಧಿಯಲ್ಲಿ ಗ್ರಾಮದ ಮುಂಜಂಡ್ರ ಸು¨್ಬ ಯ್ಯ, ಬಡಕಡ ದೀನಾಪೂವಯ್ಯ, ಬಡಕಡ ಸುರೇಶ್ ಸೇರಿದಂತೆ ಹಲವರ ಗದ್ದೆಗಳಿಗೆ ಕತ್ತಲಾವರಿಸುತ್ತಿದ್ದಂತೆ ಕಾಡುಹಂದಿಗಳು ಹಿಂಡುಹಿಂಡಾಗಿ ನುಗ್ಗಿ ಫಸಲನ್ನು ನಾಶಪಡಿಸುತ್ತಿವೆ. ನಿರಂತರ ಧಾಳಿಯಿಂದ ಅಪಾರ ನಷ್ಟವಾಗುತ್ತಿದ್ದು. ಸರ್ಕಾರ ಈ ಬಗ್ಗೆ ನಷ್ಟಕ್ಕೊಳಗಾದ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.