*ಗೋಣಿಕೊಪ್ಪಲು, ಜ. 4: ಕೊಡಗಿನ ಸುಂದರ ಪರಿಸರ ತಾಣ ಮಾಂದಲ್ ಪಟ್ಟಿಯಲ್ಲಿ ಈಚಿಗೆ ಯಜ್ಡಿ ಮತ್ತು ಜಾವಾ ಕಂಪನಿ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿದರು. ಮಾಂದಲ್‍ಪಟ್ಟಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಬಾಟಲ್, ಪೇಪರ್ ಚೂರು ಮೊದಲಾದವಗಳನ್ನು ತೆಗೆದು ಸ್ವಚ್ಛಗೊಳಿಸಿದರು. ಜತೆಗೆ ಪ್ರವಾಸಿಗರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು.
ಜಾವ ಮೋಟಾರ್ ನೌಕರರ ಸಂಘದ ಅಧ್ಯಕ್ಷ ಕ್ಯಾಪ್ಟನ್ ಅಲ್ಲಾರಂಡ ಅಚಲ್ ಬೋಪಣ್ಣ ಅಲ್ಲಾರಂಡ ಕುಟುಂಬಸ್ಥರಿಗೆ ರೂ. 51 ಸಾವಿರ ಧನ ಸಹಾಯ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಅಜ್ಜಿಕುಟ್ಟೀರ ನಿರನ್ ತಿಮ್ಮಯ್ಯ, ಮಲ್ಲೇಂಗಡ ಸೋಮಣ್ಣ, ತೀತರಮಾಡ ಸುಕೇಶ್ ಮಾದಯ್ಯ, ಕೊಕ್ಕಲೇರ ಶಾಮ್, ನಂದಿನೆರವಂಡ ಪ್ರವೀಣ್, ಕಾಂಡೇರ ಕಿರಣ್, ಚೆಟ್ಟಿಮಾಡ ಶಿವು ಹಾಜರಿದ್ದರು.