ಮಡಿಕೇರಿ, ಜ. 4: ಶಿಕ್ಷಣ ಸಂಸ್ಥೆಗಳಲ್ಲಿ ಜರುಗಿದ ವಿವಿಧ ಕಾರ್ಯಕ್ರಮಗಳೊಂದಿಗೆ, ಕೊಡಗಿನ ವಿದ್ಯಾರ್ಥಿಗಳು ತಮ್ಮ ಸಾಧನೆ ತೋರಿದ್ದಾರೆ. ವಿದ್ಯಾಲಯಗಳ ವಾರ್ಷಿಕೋತ್ಸವ, ಕ್ರೀಡಾ ಚಟುವಟಿಕೆ ಇತ್ಯಾದಿಯಲ್ಲಿ ಮಕ್ಕಳು ತೊಡಗಿಸಿಕೊಂಡಿದ್ದರು.ಭಾಗಮಂಡಲ: ತಂದೆ ತಾಯಿಗಳು ತಮ್ಮ ಮಕ್ಕಳ ಮೇಲೆ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ. ವಿದ್ಯಾರ್ಥಿಗಳು ಅವರ ಭರವಸೆ ಹುಸಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ ಎಂದು ಶನಿವಾರಸಂತೆಯ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಯಕುಮಾರ್ ಹೇಳಿದರು.
ಭಾಗಮಂಡಲ ಕಾವೇರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಹೊಸೂರು ಸತೀಶ್‍ಕುಮಾರ್ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಹ್ಯಾರೀಸ್, ನಿರ್ದೇಶಕ ರವಿ ಹೆಬ್ಬಾರ್, ಕಾರ್ಯದರ್ಶಿ ಪಾಂಡಿ ತಿಮ್ಮಯ್ಯ, ಪ್ರಾಂಶುಪಾಲೆ ಜಾನಕಿ, ಪ್ರೌಢಶಾಲಾ ಮುಖ್ಯಶಿಕ್ಷಕ ಶ್ರೀಕೃಷ್ಣ ಉಪಸ್ಥಿತರಿದ್ದರು. ಉಪನ್ಯಾಸಕ ಹೇಮಂತ್ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.ಕುಶಾಲನಗರ: ಸಮೀಪದ ಗಂಧದಕೋಟಿಯ ಕೆಎಂಟಿ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕೋತ್ಸವ ನಡೆಯಿತು. ಸಂಸ್ಥೆಯ ಅಧ್ಯಕ್ಷೆ ಕವಿತಾ ಮೋಹನ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಕಾರ್ಯದರ್ಶಿ ಪೊನ್ನಚ್ಚನ ಮೋಹನ್, ಪ್ರಾಂಶುಪಾಲೆ ಸುಮಿತ, ಮುಖ್ಯ ಶಿಕ್ಷಕ ಕಾಮೇಶ್ ಇದ್ದರು.
ಕ್ರೀಡೆ ಹಾಗೂ ಸಾಂಸ್ಕ್ರತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಸುಂಟಿಕೊಪ್ಪ: ನಾವು ಸ್ವಾಸ್ಥ್ಯ ಆರೋಗ್ಯವನ್ನು ಹೊಂದಬೇಕಾದರೆ ದುಶ್ಚಟಗಳಿಂದ ದೂರವಿದ್ದರೆ ಸಂಪೂರ್ಣ ಆರೋಗ್ಯವನ್ನು ಹೊಂದಲು ಸಾಧ್ಯವೆಂದು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ತರಬೇತುದಾರರಾದ ಡೆನ್ನೀಸ್ ಡಿಸೋಜ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಲಾಗಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾಲೇಜು ಉಪನ್ಯಾಸಕ ಸೋಮಚಂದ್ರ ಮಾತನಾಡಿ, ಯುವಜನತೆಯು ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಸ್ವಾಸ್ಥ್ಯ ನಿರ್ಮಿಸಲು ಮುಂದಾಗಬೇಕೆಂದರು.
ಸಮಾರಂಭದ ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಆರೋಗ್ಯ ಸಹಾಯಕಿ ಸುಧಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಕಾಂತಿಕಾಮಣಿ, ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ, ಉಪನ್ಯಾಸಕಿ ಪದ್ಮಾವತಿ ಇದ್ದರು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಲಾಯಿತು.ಸಿದ್ದಾಪುರ: ಸಿದ್ದಾಪುರದ ಮುನವ್ವಿರು ಇಸ್ಲಾಂ ಸಭಾಂಗಣದಲ್ಲಿ ಸಮಸ್ತ ಕೇಂದ್ರ ಜಂಇಯ್ಯತುಲ್ ಮುಅಲ್ಲಿಮಿನ್ 15 ನೇ ಕಲಾ ಸಾಹಿತ್ಯ ಪ್ರತಿಭೋತ್ಸವ ಸ್ಪರ್ಧೆ ನಡೆಯಿತು. ಇವರಲ್ಲಿ ನೆಲ್ಲಿಹುದಿಕೇರಿಯ ದದಾರುಸ್ಸಲಾಂ ಮದ್ರಸ ಹೆಚ್ಚಿನ ಬಹುಮಾನವನ್ನು ಪಡೆದುಕೊಂಡಿತು.ವೀರಾಜಪೇಟೆ: ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಉಡುಪಿಯಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ರೋವರ್ಸ್ ರೇಂಜರ್ಸ್ ಕ್ಯಾಂಪ್‍ನಲ್ಲಿ 11 ವಿದ್ಯಾರ್ಥಿಗಳು ಭಾಗವಹಿಸಿ ಹಲವು ಸ್ಪರ್ಧೆಗಳಲ್ಲಿ ಬಹುಮಾನಗಳಿಸಿದ್ದಾರೆ.
ಡಾ. ಜಿ. ಶಂಕರ್ ಮಹಿಳಾ ಕಾಲೇಜಿನಲ್ಲಿ ನಡೆದ ವಿ.ವಿ. ಮಟ್ಟದ ಸ್ಪರ್ಧೆಯಲ್ಲಿ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್‍ಗಳಾದ ತಮ್ಮಯ್ಯ ಎ.ಪಿ. ದ್ವಿತೀಯ ಬಿ.ಕಾಂ, ಶಿವಾಜಿ. ದ್ವಿತೀಯ ಬಿ.ಬಿ.ಎ, ಭರತ್ ದ್ವಿತೀಯ ಬಿ.ಕಾಂ, ಶಿವು ಸಿ. ಪ್ರಥಮ ಬಿ.ಕಾಂ, ನಿತಿನ್ ಪ್ರಥಮ ಬಿಕಾಂ, ಉತ್ತರ ಬೈರಾಗಿ ದ್ವಿತೀಯ ಬಿ.ಬಿ.ಎ, ಸುಚಿತ್ರ ಬೈರಾಗಿ ಪ್ರಥಮ ಬಿಕಾಂ, ಸುಮ ಪ್ರಥಮ ಬಿಕಾಂ, ಶೋಬಿತ ಪ್ರಥಮ ಬಿಕಾಂ, ಸಂಗೀತ ಪ್ರಥಮ ಬಿಕಾಂ, ಕಾವ್ಯ ಪ್ರಥಮ ಬಿಕಾಂ ಇವರು ರೋವರ್ ಲೀಡರ್ ವನಿತ್‍ಕುಮಾರ್ ಮಾರ್ಗದರ್ಶನದಲ್ಲಿ ಮೂಟ್ ಕ್ಯಾಂಪ್‍ನಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.