ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದಿಂದ ಸಂತ್ರಸ್ತರಾದ ಹಲವು ಮಕ್ಕಳಿಗೆ ಪೊನ್ನಂಪೇಟೆಯ ಸಾಯಿಶಂಕರ ವಿದ್ಯಾಸಂಸ್ಥೆ ವಿದ್ಯಾಶ್ರಯ ನೀಡಿದೆ. ಸಂತ್ರಸ್ತರಾದವರಿಗೆ ನೆರವು ನೀಡಲು ಟಿ.ವಿ. 9 ವಾಹಿನಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದ್ದು ಈ ಹಣದಲ್ಲಿ 62 ಬಾಲಕಿಯರನ್ನು ಶೈಕ್ಷಣಿಕವಾಗಿ ಈ ಸಂಸ್ಥೆ ದತ್ತು ತೆಗೆದುಕೊಂಡಿದೆ. ಈ ನೆರವನ್ನು ಹಸ್ತಾಂತರಿಸಲು ಇತ್ತೀಚೆಗೆ ಸಂಸ್ಥೆ ಸಾಯಿಶಂಕರ ವಿದ್ಯಾಸಂಸ್ಥೆಯಲ್ಲಿ ಮುಂದೆ ಸಾಗು ಮಗಳೇ... ಎಂಬ ಕೊಡಗು ಹಬ್ಬ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಜಿಲ್ಲೆಯಲ್ಲಿ ಹುಟ್ಟಿ ಬೆಳೆದು ಸಾಧನೆಗೈದ 9 ಮಹಿಳಾ ಸಾಧಕರನ್ನು ಇಲ್ಲಿಗೆ ಕೆರೆಸಿ ಸನ್ಮಾನಿಸಿ ಅವರಿಂದ ಮಕ್ಕಳಿಗೆ ಪ್ರೇರಣಾತ್ಮಕವಾದ ಮಾತುಗಳನ್ನು ಆಡಿಸಿ ಉತ್ತೇಜನ ನೀಡುವದರೊಂದಿಗೆ ರಂಗುರಂಗಿನ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸುವ ಮೂಲಕ ವೈವಿಧ್ಯಮಯವಾಗಿ ನಡೆದ ಚಟುವಟಿಕೆಗಳ ಚಿತ್ರಣಗಳಿವು.... ಸನ್ಮಾನಿತ ಸಾಧಕರು.ಐಚೆಟ್ಟಿರ ಈಶ್ವರಿ ಮಂದಪ್ಪ:- ಭಾರತೀಯ ಸೇನೆಯಲ್ಲಿ ಅದೂ ಫೀಲ್ಡ್‍ನಲ್ಲಿ ಇವರು ಮೇಜರ್ ಹುದ್ದೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ.ಶೋಭಾ ಸುಬ್ಬಯ್ಯ :- ತ್ರಿಭಾಷಾ ಸಾಹಿತಿಯಾಗಿ ಗುರುತಿಸಿಕೊಂಡಿರುವವರುಮಂಡೇಪಂಡ ಗೀತಾ ಮಂದಣ್ಣ :- ಇವರು ಕೂಡ ಸಾಹಿತಿಕವಾಗಿ ಗುರುತಿಸಿಕೊಂಡವರು.ಮುಂಡಂಡ ಅನುಪಮಾ:- ಹಾಕಿ ತೀರ್ಪುಗಾರಿಕೆಯಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಮಹಿಳಾ ಸಾಧಕರು.ಶಿಲ್ಪಾ ಗಣೇಶ್ :- ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿ ಕರ್ತವ್ಯ ನಿಭಾಯಿಸುತ್ತಿರುವವರು.ಪ್ರೀತ್ ಗಣಪತಿ:- ಐಪಿಎಸ್ ಉತ್ತೀರ್ಣರಾಗುವದರೊಂದಿಗೆ ಪ್ರಸ್ತುತ ಇಂಡಿಯನ್ ರೆವಿನ್ಯೂ ಸರ್ವೀಸ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು.ಫ್ಯಾನ್ಸಿ ಗಣಪತಿ :- ಮಹಿಳಾ ಉದ್ಯಮಿಯಾಗಿ, ಇತರರಿಗೂ ಮಾದರಿಯಾಗಿ ಚಟುವಟಿಕೆ ನಡೆಸುತ್ತಿರುವವರು.ಪುದಿಯನೆರವನ ರೇವತಿ ರಮೇಶ್:- ಶಿಕ್ಷಕಿಯಾಗಿ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡವರು.ರಶ್ಮಿಕಾ ಮಂದಣ್ಣ :- ಸಿನಿಮಾರಂಗದಲ್ಲಿ ಸಾಧನೆ ತೋರುತ್ತಿರುವ ತಾರೆ.

ಕೂರ್ಗ್ ಸೈಕ್ಲೋನ್ ತಂಡದಿಂದ ನೃತ್ಯನಟಿ ರಾಗಿಣಿ ದ್ವಿವೇದಿ ಅವರಿಂದ ನೃತ್ಯನಿಧಿ ಸುಬ್ಬಯ್ಯ ನೇತೃತ್ವದಲ್ಲಿ ರಂಜನೆಕಾಮಿಡಿ ಕಿಲಾಡಿ ಖ್ಯಾತಿಯ ನಯನಾ- ಗೋವಿಂದೇಗೌಡರಿಂದ ಹಾಸ್ಯ ಚಟಾಕಿ ರಂಜಿಸಿತು.

ಇದರೊಂದಿಗೆ ಹುದಿಕೇರಿಯ ಸೂರಜ್ ತಂಡದಿಂದ ಕತ್ತಿಯಾಟ್-ಉಮ್ಮತ್ತಾಟ್ ಪ್ರದರ್ಶನವಿತ್ತು.ಹಾಸ್ಯ ಕಲಾವಿದರಾದ ಪ್ರೋ. ಕೃಷ್ಣೇಗೌಡ, ತಬಲಾನಾಣಿ-ಪ್ರಿಯಾಹರ್ಷಿಕಾ ಪೂಣಚ್ಚ ತಂಡದ ಪ್ರದರ್ಶನ