ನಾಪೆÉÇೀಕ್ಲು, ಜ. 2: ನಾಪೆÉÇೀಕ್ಲು ಡೆಕ್ಕನ್ ಯೂತ್ ಕ್ಲಬ್ ಮತ್ತು ಸ್ಪಾರ್ಟ ಎಫ್‍ಸಿ ಕ್ಲಬ್‍ನ ಸಂಯುಕ್ತ ಆಶ್ರಯದಲ್ಲಿ ಚೆರಿಯಪರಂಬು ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಹೊಸ ವರ್ಷದ ಪ್ರಯುಕ್ತ ನಡೆದ ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾಟದಲ್ಲಿ ಸಿದ್ದಾಪುರದ ಕೆಎಫ್‍ಸಿ ತಂಡವು ಜಯಗಳಿಸುವದರ ಮೂಲಕ ಪ್ರಶಸ್ತಿ ಮತ್ತು ರೂ. 20,019 ನಗದು ಬಹುಮಾನವನ್ನು ತನ್ನ ಮುಡಿಗೇರಿಸಿ ಕೊಂಡಿತು.
ಮೂರ್ನಾಡಿನ ಹರ್ಷ ಫ್ರೆಂಡ್ಸ್ ತಂಡವು ರನ್ನರ್ಸ್ ಪ್ರಶಸ್ತಿಯೊಂದಿಗೆ ರೂ. 12,019 ನಗದನ್ನು ತಮ್ಮದಾಗಿಸಿ ಕೊಂಡಿತು. ಡಿ. 31 ರ ಸಂಜೆ 7 ಗಂಟೆಗೆ ಆರಂಭಗೊಂಡ ಪಂದ್ಯಾಟ ವನ್ನು ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರಹಿಮಾನ್ ಉದ್ಘಾಟಿಸಿದರು. ಪಂದ್ಯಾಟದಲ್ಲಿ 40 ತಂಡಗಳು ಭಾಗವಹಿಸಿದ್ದವು. ತಾ. 1 ರಂದು ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡೆಕ್ಕನ್ ಯೂತ್ ಕ್ಲಬ್ ಅಧ್ಯಕ್ಷ ಎಂ.ಎ. ಮನ್ಸೂರ್ ಅಲಿ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರತಿಭೆಗಳಿದ್ದು, ತರಬೇತಿದಾರರ ಕೊರತೆ ಮತ್ತು ಸೂಕ್ತ ಅವಕಾಶಗಳಿಲ್ಲದ ಕಾರಣ ಅವರು ಎಲೆಮರೆ ಕಾಯಿಯಂತೆ ಬದುಕುತ್ತಿ ದ್ದಾರೆ. ಗ್ರಾಮೀಣ ಪ್ರದೇಶದಲ್ಲಿಯೂ ಕ್ರೀಡಾ ಪ್ರತಿಭೆಗಳಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ವೇದಿಕೆಯಲ್ಲಿ ಹಳೇ ತಾಲೂಕು ಜಮಾಅತ್ ಅಧ್ಯಕ್ಷ ಎಂ.ಎಸ್. ಮಹಮ್ಮದ್ ಅಲಿ, ಯೂತ್ ಕಾಂಗ್ರೆಸ್ ಮುಖಂಡ ಮೈಸಿ ಕತ್ತಣಿರ, ಸುರಾನ್, ನಾಚಿ ಇದ್ದರು.