ಮಡಿಕೇರಿ, ಜ. 1: ನಾಪೋಕ್ಲುವಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕವಿತೆ, ಕಥೆ, ವಿಚಾರ ಮಂಡನೆ ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ನಡೆದವು. ಇದಕ್ಕಾಗಿ ದುಡಿದವರು ಅನೇಕರು ಆದರೇ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರೋವರ್ಸ್ ಮತ್ತು ರೇಂಜರ್ಸ್ ಗಳು ಯಾವ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಮಾಡಿ ಎಲ್ಲಾ ಕನ್ನಡ ಮನಸ್ಸುಗಳ ಮನ ಗೆದ್ದಿತು. ಊಟ ಬಡಿಸುವದು, ಸ್ವಚ್ಛತೆ, ವೇದಿಕೆ ತಯಾರಿ, ಅತಿಥಿ ಆಹ್ವಾನ, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಅನೇಕ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸ್ಕೌಟ್ಸ್ ಗೈಡ್ ಜಿಲ್ಲಾ ಸಂಘಟಕಿ ದಮಯಂತಿ ನೇತೃತ್ವದಲ್ಲಿ ಕಾರ್ಯನಿರ್ವಹಿಸಿದೆ. ಪ್ರಧಾನ ಆಯುಕ್ತ ಕಂಬಿರಂಡ ಕಿಟ್ಟು ಕಾಳಪ್ಪ ಮಾರ್ಗದರ್ಶನದಲ್ಲಿ 9 ರೋವರ್ಸ್, 18 ರೇಂಜರ್ಸ್‍ಗಳು ಭಾಗವಹಿಸಿದ್ದರು.