ಮಡಿಕೇರಿ, ಜ. 2: ನಗರದ ಗ್ರೀನ್ ಟ್ರಸ್ಟ್ ವತಿಯಿಂದ ಚಳಿಯಲ್ಲಿ ಮಲಗಲು ಜಾಗವಿಲ್ಲದೆ, ತಿನ್ನಲು ಊಟವಿಲ್ಲದೆ, ತನ್ನವರು ಯಾರು ಇಲ್ಲದೆ, ಯಾರಾದರೂ ಕೊಟ್ಟರೆ ತಿಂದು, ಮಡಿಕೇರಿಗೆ ಬರುವ ಪ್ರವಾಸಿಗರನ್ನು ನೋಡುತ್ತಾ ಸಿಕ್ಕ ಸಿಕ್ಕ ಹಾಗೆ ರಸ್ತೆ ದಾಟುತ್ತಿದ್ದ ಮಾನಸಿಕ ಅಸ್ವಸ್ಥನೋರ್ವನನ್ನು ಮೈಸೂರಿನ ಮಾನಸಧಾಮ ಆರೈಕೆ ಕೇಂದ್ರಕ್ಕೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಟ್ರಸ್ಟ್‍ನ ಜಿಲ್ಲಾ ಸಂಯೋಜಕ ಸಿ.ವಿ. ವಿಶ್ವನಾಥ್ ತಿಳಿಸಿದ್ದಾರೆ.