ಚೆಟ್ಟಳ್ಳಿ, ಜ. 2: ಸಿದ್ದಾಪುರ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ನೂತನ ಅಧ್ಯಕ್ಷರಾಗಿ ರಜಾಕ್ ಸಹದಿ, ಪ್ರಧಾನ ಕಾರ್ಯದರ್ಶಿಯಾಗಿ ನಿಜಾಮುದ್ದೀನ್ ಕಂಡಕರೆ, ಕೋಶಾಧಿಕಾರಿಯಾಗಿ ಸಿದ್ದೀಕ್ ಹಾಗೂ ಕ್ಯಾಂಪಸ್ ಕಾರ್ಯದರ್ಶಿಯಾಗಿ ರಿಯಾಜ್ ಆಯ್ಕೆಯಾಗಿದ್ದಾರೆ.

ವಾರ್ಷಿಕ ಮಹಾ ಸಭೆಯು ಮಾಜಿ ಅಧ್ಯಕ್ಷ ನೌಫಲ್ ಮಲ್‍ಹರಿ ಅಧ್ಯಕ್ಷತೆಯಲ್ಲಿ ನಡೆಯಿತು. ವೀರಾಜಪೇಟೆ ಡಿವಿಷನ್ ಅಧ್ಯಕ್ಷ ಜುಬೈರ್ ಸಹದಿ, ಪ್ರಧಾನ ಕಾರ್ಯದರ್ಶಿ ಜುನೈದ್, ಹಸೈನಾರ್ ಸಖಾಫಿ, ನಿಜಾಮ್ ಇದ್ದರು.