ಮಡಿಕೇರಿ, ಜ. 2: ಕೊಡಗು ಜಿಲ್ಲಾ ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ತಾ. 15 ರಂದು ಕೊಡಗು ಜಿಲ್ಲಾ ಮಟ್ಟದ ಬ್ಯಾರಿ ಸಮಾವೇಶವನ್ನು ಏರ್ಪಡಿಸಲಾಗಿದೆ. ಈ ಸಮಾವೇಶದ ಅಂಗವಾಗಿ ತಾ. 6 ರಂದು ಮಡಿಕೇರಿ ಕ್ರೆಸೆಂಟ್ ಶಾಲಾ ಆವರಣದಲ್ಲಿ ಬ್ಯಾರಿ ಸಮುದಾಯದ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಶಾಲಾಪೂರ್ವ ಮಕ್ಕಳಿಗೆ ಕಪ್ಪೆ ಜಿಗಿತ, ಕಾಳು ಹೆಕ್ಕುವದು, ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವದು (1ರಿಂದ 10ನೇ ತರಗತಿ) ಕಪ್ಪೆ ಜಿಗಿತ, ಬಲೂನ್ ಒಡೆಯುವದು, ನಾಲ್ಕು ಕಾಲೋಟ, ನೆನಪು ಶಕ್ತಿ, ತಲೆಯಲ್ಲಿ ಪುಸ್ತಕ ಹೊತ್ತು ಓಡುವದು, ಪಿಯುಸಿ ಮತ್ತೆ ಮೇಲಿನ ತರಗತಿ ವಿದ್ಯಾರ್ಥಿಗಳಿಗೆ ಕನ್ನಡದಿಂದ ಬ್ಯಾರಿಗೆ ಅನುವಾಸ, ಬ್ಯಾರಿ ಆಶುಭಾಷಣ, ಸಾರ್ವಜನಿಕರಿಗೆ ಕನ್ನಡದಿಂದ ಬ್ಯಾರಿಗೆ ಅನುವಾದ, ಬ್ಯಾರಿ ಆಶುಭಾಷಣ, ಬ್ಯಾರಿ ಹಾಡುಗಾರಿಕೆ, ರಸಪ್ರಶ್ನೆ ಮಹಿಳೆಯರಿಗೆ ಕನ್ನಡದಿಂದ ಬ್ಯಾರಿಗೆ ಅನುವಾದ, ಬ್ಯಾರಿ ಆಶುಭಾಷಣ, ಬ್ಯಾರಿ ಹಾಡುಗಾರಿಕೆ, ರಸಪ್ರಶ್ನೆ, ಪದ ಸೇರಿಸುವದು, ಮದರಂಗಿ ಹಾಕುವದು ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕೊಡಗು ಜಿಲ್ಲೆಯ ಬ್ಯಾರಿ ವಿದ್ಯಾರ್ಥಿಗಳಲ್ಲಿ 2017-18ರ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ತಲಾ 15 ಮಂದಿಗೆ ನಗದು ಪುರಸ್ಕಾರ ನೀಡಲಾಗುವದು. ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಹಾಗೂ ಭಾವಚಿತ್ರದೊಂದಿಗೆ ಕಲೀಮ್ ಅಹ್ಮದ್ (9113609071) ಜಿಇಸಿ ಫರ್ನೀಚರ್, ಚೌಕಿ ಬಳಿ, ಮಡಿಕೇರಿ ಈ ವಿಳಾಸಕ್ಕೆ 10ರ ಒಳಗಾಗಿ ಕಳುಹಿಸಿಕೊಡಬೇಕು.
ಸಮಾವೇಶದ ಅಂಗವಾಗಿ ತಾ. 12 ಮತ್ತು 13 ರಂದು ಮಡಿಕೇರಿ ಮ್ಯಾನ್ಸ್ ಕಾಂಪೌಂಡ್ನಲ್ಲಿ ಬ್ಯಾರಿ ಸಮುದಾಯದ ಕ್ರಿಕೆಟ್ ಟೂರ್ನ್ಮೆಂಟ್ ಅನ್ನು ಕೂಡ ಏರ್ಪಡಿಸಲಾಗಿದ್ದು, ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಗುವದು. ತಂಡಗಳ ಹೆಸರುಗಳನ್ನು ತಾ. 5ರ ಒಳಗಾಗಿ ನೋಂದಾಯಿಸಿಕೊಳ್ಳಬೇಕು. ಪಂದ್ಯದ ವಿವರಗಳನ್ನು 9663973704 ಅಥವಾ 9483496676 ದೂರವಾಣಿ ಮೂಲಕ ಪಡೆಯಬಹುದು. ಹೆಚ್ಚಿನ ವಿವರಗಳನ್ನು 9480083264, 9886181613, 9008065622 ಅಥವಾ 9008142052 ಈ ಮೊಬೈಲ್ಗಳನ್ನು ಸಂಪರ್ಕಿಸಿ ಪಡೆಯಬಹುದು ಎಂದು ಕಾರ್ಯದರ್ಶಿ ಎಂ. ಅಬ್ದುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.