ಶನಿವಾರಸಂತೆ, ಜ. 1: ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಬೀಟಿಕಟ್ಟೆ ಗ್ರಾಮದಲ್ಲಿ ಮತಿಭ್ರಮಣೆಗೊಳಗಾಗಿ ಅಲೆದಾಡುತ್ತಿದ್ದ ಸುಮಾರು 30 ವರ್ಷದ ಅನಾಥ ಮಹಿಳೆಯನ್ನು ಗ್ರಾಮದ ಮಹಿಳೆಯರ ಸಹಕಾರದಿಂದ ಕರವೇ ಪದಾಧಿಕಾರಿಗಳು ಕುಶಾಲನಗರ ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.
ಗ್ರಾಮದ ಲೀನಾ, ಜೆಸಿಂತಾ ರೋಡ್ರಿಗಸ್ ಮತ್ತಿತರರು ಅನಾಥ ಮಹಿಳೆಯ ಬಗ್ಗೆ ಕರವೇ ಅಧ್ಯಕ್ಷ ಪ್ರಾನ್ಸಿಸ್ ಡಿಸೋಜ ಹಾಗೂ ಕಾರ್ಯದರ್ಶಿ ರಾಮನಳ್ಳಿ ಪ್ರವೀಣ್ ಅವರಿಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಾಂತ್ವಾನ ಕೇಂದ್ರದ ಅಧಿಕಾರಿ ಕುಮಾರಿ ಗ್ರಾಮಕ್ಕೆ ಭೇಟಿ ನೀಡಿ ಅನಾಥ ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ. ಮಹಿಳೆಗೆ ಚಿಕಿತ್ಸೆ ಕೊಡಿಸಿ ಕುಟುಂಬದವರ ಸುಳಿವು ಸಿಕ್ಕಿದರೆ ಒಪ್ಪಿಸುತ್ತೇವೆ ಎಂದು ಅಧಿಕಾರಿ ಕುಮಾರಿ ತಿಳಿಸಿದ್ದಾರೆ.