ಕೂಡಿಗೆ,ಜ. 1: ಬುಡಕಟ್ಟು ಜನಾಂಗದ ವಿಶಿಷ್ಟ ಕಲೆ ಮತ್ತು ಸಂಸ್ಕೃತಿಗಳನ್ನು ಪ್ರಪಂಚದಾದ್ಯಂತ ಬಿಂಬಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ನಟ ಚೇತನ್ ಹೇಳಿದ್ದಾರೆ.
ಇಲ್ಲಿಯ ಬ್ಯಾಡಗೊಟ್ಟದ ದಿಡ್ಡಳ್ಳಿಯ ಪುನರ್ವಸತಿ ಕೇಂದ್ರದಲ್ಲಿ ರುವ ನಿರಾಶ್ರಿತ ಕುಟುಂಬದವರೊಂದಿಗೆ 2019ರ ಹೊಸವರ್ಷದ ಆಚರಣೆ ಕಲೆಯು ಈ ತಲೆಮಾರಿಗೆ ನಶಿಸಿ ಹೋಗದೆ ಮುಂದಿನ ಯುವ ಪೀಳಿಗೆಗೆ ಒಯ್ಯುವದು ಅತಿಮುಖ್ಯವಾಗಿದೆ ಎಂದರು. ವಿದ್ಯಾಭ್ಯಾಸ ಮತ್ತು ಆರೋಗ್ಯದ ದೃಷ್ಟಿಯಿಂದ ಈ ವ್ಯಾಪ್ತಿಯಲ್ಲಿಯೇ ವಿದ್ಯಾಸಂಸ್ಥೆಗಳನ್ನು ಹಾಗೂ ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು. ಬದುಕಿನಲ್ಲಿ ಸಂಸ್ಕ್ರತಿ ಉಳಿಸಿಕೊಳ್ಳಲು ಇಂತಹ ಸಾಂಸ್ಕೃತಿಕ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ದರ ಜೊತೆಗೆ ಸಮಾಜದಲ್ಲಿ ವೈವಿಧ್ಯತೆ ಉಳಿಯಬೇಕಾಗಿದೆ ಎಂದರು.
ದಿಡ್ಡಳ್ಳಿಯಲ್ಲಿ ನಡೆದ ಹೋರಾಟಕ್ಕೆ ನಮ್ಮ ತಂಡ ಬೆಂಬಲವಾಗಿತ್ತು. ಅದೇ ಮಾದರಿಯಲ್ಲಿ ಬುಡಕಟ್ಟು ಜನರ ಅಭಿವೃದ್ಧಿಗೆ ಶ್ರಮಿಸುವದಾಗಿ ತಿಳಿಸಿದರು.ಈ ಸಂದರ್ಭ ನಟ ಚೇತನ್ ತಾಯಿ ಯುವ ಕರ್ನಾಟಕ ತಂಡದ 25 ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಬಸವನಹಳ್ಳಿ, ಬ್ಯಾಡಗೊಟ್ಟ ಹಾಡಿಯ ಪ್ರಮುಖರು ಇದ್ದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನು ಹಾಗೂ ಬ್ಯಾಗುಗಳನ್ನು ವಿತರಿಸಿದರು. ನಮ್ಮ ಕೊಡಗು ತಂಡದವರು ಹಾಜರಿದ್ದರು.