ಚೆಟ್ಟಳ್ಳಿ, ಜ. 1: ದುಬಾರೆಯ ಸಾಕಾನೆ ಶಿಬಿರದಲ್ಲಿ ಮುಂಜಾನೆ ಸಾಕಾನೆಗಳನ್ನು ನಿತ್ಯವೂ ಒಂದರ ನಂತರ ಒಂದರಂತೆ ಹೊಳೆಗೆ ಸ್ನಾನಕ್ಕೆ ಮಾವುತರು ಕರೆದೊಯ್ಯುವರು. ನೀರಿಗಿಳಿದ ಎರಡು ಗಂಡಾನೆಗಳು ತಮ್ಮ ಸೊಂಡಿಲಿನಲ್ಲಿ ಪ್ರೀತಿಯಿಂದ ಆಲಂಗಿಸಿ ಹೊಸ ವರ್ಷದ ಶುಭ ಕೋರುವಂತೆ ಕಂಡು ಬಂದ ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಯಿತು. -ಕರುಣ್ ಕಾಳಯ್ಯ