ಮಡಿಕೇರಿ, ಡಿ. 30: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಯಾವದೇ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಸೂಕ್ತ ನಿಗಾವಹಿಸಲಿದೆ ಎಂದು ಎಸ್‍ಪಿ ಡಾ. ಸುಮನ್ ಡಿ.ಪಿ. ಅವರು ತಿಳಿಸಿದ್ದಾರೆ. ತಾ. 31 ರಂದು (ಇಂದು) ತಡರಾತ್ರಿಯ ತನಕ ಹೊಸವರ್ಷಾಚರಣೆಯ ಕಾತರದಲ್ಲಿ ಜನತೆ ಇರುತ್ತಾರೆ.
(ಮೊದಲ ಪುಟದಿಂದ) ಈ ಸಂದರ್ಭದಲ್ಲಿ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು ಅಲ್ಲಲ್ಲಿ ಗಸ್ತು ನಡೆಸುತ್ತಿರುತ್ತಾರೆ. ಜಿಲ್ಲೆಯಲ್ಲಿ ಪ್ರಸ್ತುತ ಚಳಿಯ ವಾತಾವರಣವಿದ್ದು, ಬಹುತೇಕ ಕಟ್ಟಡಗಳ ಒಳಭಾಗದಲ್ಲೇ ಆಚರಿಸಲ್ಪಡುತ್ತದೆ. ಇಂತಹ ಸಾರ್ವಜನಿಕ ಕಡೆಗಳಲ್ಲಿ ಸಮಯ ಪಾಲನೆಯನ್ನು ಅನುಸರಿಸಬೇಕು. ಯಾವದೇ ರೀತಿಯ ಪುಕಾರುಗಳು ಎದುರಾದಲ್ಲಿ ಇಲಾಖೆ ಸೂಕ್ತ ಕ್ರಮ ಜರುಗಿಸಲಿದೆ ಎಂದು ಸುಮನ್ ಪಣ್ಣೇಕರ್ ‘ಶಕ್ತಿ’ ಮೂಲಕ ತಿಳಿಸಿದ್ದಾರೆ. ಜಿಲ್ಲೆಯ ಗಡಿ ಭಾಗಗಳಲ್ಲೂ ಇಲಾಖೆ ಸೂಕ್ತ ಮುಂಜಾಗ್ರತೆ ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.