ನಾಪೋಕ್ಲು, ಡಿ. 30: ಗಾಯತ್ರಿ ಮಂತ್ರವು ಸ್ತುತಿಸುವವರನ್ನು ರಕ್ಷಿಸುತ್ತದೆ. (“ಗಾಯಂತಂ ತ್ರಾಯಸೇ ಯಸ್ಮಾತ್” ಎಂಬ ವಾಕ್ಯದಂತೆ) ಗಾಯತ್ರಿ ಮಂತ್ರದ ವಿಶೇಷತೆಯೆಂದರೆ ಈ ಮಂತ್ರದಲ್ಲಿ ವೈಯಕ್ತಿಕ ಅಪೇಕ್ಷೆ ಏನೂ ಇರುವದಿಲ್ಲ. ವೈಯಕ್ತಿಕ ಸಾಧನೆಯ ಲೇಪವಿಲ್ಲ. ಸಾರ್ವತ್ರಿಕ ಹಿತದೃಷ್ಟಿ ಮಾತ್ರ ಇರುತ್ತದೆ. ಅಲ್ಲದೆ, ದೇವತೆಗಳ ಸ್ವರೂಪ ಕಲ್ಪನೆಯೂ ಇದರಲ್ಲಿಲ್ಲ. ನಿರ್ಗುಣ, ನಿರಾಕಾರ ಚಿಂತನೆ ಮಾತ್ರ ಇರುತ್ತದೆ ಎಂದು ಶ್ರೀ ಮಠ ಬಾಳೆಕುದ್ರುವಿನ ಶ್ರೀ ನೃಸಿಂಹಾಶ್ರಮ ಸ್ವ್ವಾಮೀಜಿ ವಿಶ್ಲೇóಷಿಸಿದರು. ಇಂದು ಜಿಲ್ಲಾ ಬ್ರಾಹ್ಮಣ ಸಂಘಗಳ ಆಶ್ರಯದಲ್ಲಿ ಬಲಮುರಿಯ ಕಣ್ವ ಶ್ರೀ ಮುನೀಶ್ವರ ಕ್ಷೇತ್ರದಲ್ಲಿ ನಡೆದ ಕೋಟಿ ಗಾಯತ್ರಿ ಪುನ:ಶ್ಚರಣೆ ಯಾಗದ ಸಂದರ್ಭ ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಸ್ವಾಮೀಜಿ ಪ್ರವಚನ ಮಾಡುತ್ತಿದ್ದರು. ಭೂಮಿಗೆ ಸೂರ್ಯನಿಂದಲೇ ಜೀವನ. ಇಂತಹ ಸವಿತಾತ್ಮಕ ಸೂರ್ಯನ ಆರಾಧನೆಯನ್ನೂ ಗಾಯತ್ರಿ ಮಂತ್ರ ಒಳಗೊಂಡಿದೆ. ರಾತ್ರಿ ವೇಳೆ ಭೂಮಿ ಅಂಧಕಾರಮಯವಾಗಿರುತ್ತದೆ. ಬೆಳಗಿನ ವೇಳೆ ಅಂಧಕಾರ ನಾಶ ಮಾಡಿ ಸೂರ್ಯ ಬೆಳಗುತ್ತ ಬರುವಂತೆ ನಿತ್ಯ ಪುನಃಶ್ಚರಣೆ ಮಾಡುವ ಮಂತ್ರಗಳು ಜಪಮಾಡುವವನ ಅಜ್ಞಾನವನ್ನು ನಾಶಗೈದು ಜ್ಞಾನವನ್ನು ನೀಡುತ್ತವೆÉ. ಈ ಮೂಲಕ ಸನ್ಮಾರ್ಗ, ಸಾತ್ವಿಕ ಶಕ್ತಿ ಜಾಗೃತವಾಗುತ್ತದೆ. ಹಾನಿಕಾರಕ ಪ್ರವೃತ್ತಿ ನಾಶವಾಗಿ ಸದ್ಬುದ್ಧಿ ಮೂಡುತ್ತದೆ. ರಾಕ್ಷಸೀ ಮನೋಭಾವ ಮರೆಯಾಗಿ

(ಮೊದಲ ಪುಟದಿಂದ) ದೈವಿಕ ಭಾವನೆ ಉದ್ಭವಿಸುವ ಮೂಲಕ ಸರ್ವರ ಒಳಿತಿನ ಸಚ್ಚಿಂತನೆ ಸತ್ಪ್ರವೃತ್ತಿಗೆ ಪ್ರೇರೇಪಣೆ ನೀಡುತ್ತದೆ ಎಂದು ಸ್ವಾಮೀಜಿ ವಿಮರ್ಶಿಸಿದರು.

ಬಲಮುರಿ ಪುಣ್ಯಕ್ಷೇತ್ರ

ಕಾವೇರಿಯ ಹರಿಯುವಿಕೆ, ಕವೇರಮುನಿ-ಅಗಸ್ತ್ಯರ ಅನುಗ್ರಹ ಹಾಗೂ ಕಣ್ವ ಮಹರ್ಷಿಗಳ ಸಾನ್ನಿಧ್ಯದಿಂದ ಬಲಮುರಿ ಅತ್ಯಂತ ಪುಣ್ಯಕ್ಷೇತ್ರವೆನಿಸಿದೆ ಎಂದು ಸ್ವಾಮೀಜಿ ಭಾವನಾತ್ಮಕವಾಗಿ ನುಡಿದರು. ನಾವು ಬೇರೆ ಕಡೆÀ ಮಾಡಿದ ಪಾಪಗಳು ಇಂತಹ ಪುಣ್ಯಕ್ಷೇತ್ರಗಳಲ್ಲಿ ಮಾಡುವ ಧಾರ್ಮಿಕ ಕಾರ್ಯಗಳಿಂದ ಕಳೆಯಲ್ಪಡುತ್ತದೆ ಎಂದು ನುಡಿದರು. ಇತರ ಪ್ರ್ರಾಣಿಗಳಿಗೆ ಮಾಡಲು ಸಾಧ್ಯವಿಲ್ಲದ ನಿತ್ಯಾನುಷ್ಠಾನಗಳನ್ನು ಮಾಡಲು ಅವಕಾಶವಿರುವದರಿಂದ ಮಾನವರು ದೇವತೆಗಳ ಉತ್ತರಾಧಿಕಾರಿಗಳಿದ್ದಂತೆ ಎಂದರು. ಸನಾತನ ಸಂಸ್ಕøತಿಯಲ್ಲಿ ಋಷಿ ಪರಂಪರೆ ಮೂಲಕ ವಸುಧೈವ ಕುಟುಂಬಕಂ ಎಂಬ ವಿಶಾಲ ತತ್ತ್ವ ಅಡಗಿದೆ. ಈ ಸಂಸ್ಕøತಿಯ ಮೂಲ ಭಾರತ ದೇಶವಾಗಿದ್ದು ಅವತಾರ ಪುರುಷರು ಭಾರತದಲ್ಲಿ ಜನ್ಮವೆತ್ತಲು ಸಾಧ್ಯ ಮಾಡಿದೆ. ಇದರಿಂದಾಗಿ ವಿಶ್ವದಲ್ಲಿ ಭಾರತ ದೇಶ “ಗರ್ಭಗುಡಿ” ಯಂತಿದೆ ಎಂದರು. ಮಾನವನು ಸಾಮಾಜಿಕ ಹಿತದೃಷ್ಟಿಯಿಂದ ಪ್ರಕೃತಿಯನ್ನು ನಾಶಗೊಳಿಸದೆ ಪ್ರಕೃತಿಯೊಂದಿಗೆÀ ಬೆರೆÀತು ಜೀವನ ನಡೆಸಬೇಕಾಗಿದೆ-ಇದೇ ಸಹಜ ಜೀವನ ಎಂದು ಸ್ವಾಮೀಜಿ ಕರೆಯಿತ್ತರು.

ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಭಟ್ ಸ್ವಾಗತಿಸಿದರು. ಅವರು ‘ಶಕ್ತಿ’ಯೊಂದಿಗೆ ಮಾತನಾಡಿ 2017ರ ಡಿ. 10ರಂದು ಗಣಹೋಮ ಮಾಡುವದರ ಮೂಲಕ ಲೋಕ ಕಲ್ಯಾಣಕ್ಕಾಗಿ ಆರಂಭಿಸಲಾದ ಕೋಟಿ ಗಾಯತ್ರಿ ಪುನಃಶ್ಚರಣೆ ಯಾಗವನ್ನು ಇಂದು ಪೂರ್ಣಾಹುತಿಯೊಂದಿಗೆ ಮುಕ್ತಾಯಗೊಳಿಸಲಾಯಿತು. 2017ರ ಡಿ. 10ರಿಂದ ನಮ್ಮ ಸಂಘದ ಎಲ್ಲರೂ ತುಪ್ಪ ಹಿಡಿದು ಗಾಯತ್ರಿ ಜಪ ಮಾಡುತ್ತಾ ಬಂದಿದ್ದೇವೆ. ಇಂದು ನಡೆದ ಪೂರ್ಣಾಹುತಿಯಲ್ಲಿ ಒಂದು ಪ್ರಧಾನ ಹೋಮ ಕುಂಡ ಸೇರಿದಂತೆ 10 ಹೋಮ ಕುಂಡಗಳಲ್ಲಿ ಐದೈದು ಋತ್ವಿಜರು ಯಾಗದ ಆಹುತಿ ನೀಡಿದರು. ಕಣ್ಣ ಬಲಮುರಿಯ ಪುಣ್ಯ ತೀರ್ಥ ಕ್ಷೇತ್ರ ಕಣ್ವ ಮುನೀಶ್ವರ ಸನ್ನಿಧಿಯಲ್ಲಿ ಕಾರ್ಯಕ್ರಮ ನಡೆಸಿರುವದು ಸಂತಸ ತಂದಿದೆ ಎಂದರು.

ಡಿ. 29ರ ರಾತ್ರಿ 8 ಗಂಟೆಗೆ ಗಣಪತಿ ಪ್ರಾರ್ಥನೆ ಯೊಂದಿಗೆ ಆರಂಭಗೊಂಡ ಕಾರ್ಯ ಕ್ರಮದಲ್ಲಿ ಯಾಗಶಾಲೆ ಪ್ರವೇಶ, ಪುಣ್ಯಃ ಶುದ್ಧಿ, ನಾಂದಿ, ಋತ್ವಿಜ ವರ್ಣನೆ, ಮಹಾ ಸಂಕಲ್ಪ, 30ರ ಪ್ರಾತಃಕಾಲ ಮಹಾಗಣಪತಿ ಹೋಮ, ಕಾವೇರಿ ಪೂಜೆ, ಸವಿತಾರ್ಗೆ, ಯಾಗದ ಅಗ್ನಿ ಸ್ಥಾಪನೆ, ಪೂರ್ಣಾಹುತಿ, ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.ಡಾ. ಕಾವ್ಯ ಕಾಮತ್ ನೇತೃತ್ವದಲ್ಲಿ ಪ್ರಣವ ಸಂಗೀತಾ ಶಾಲೆಯವರಿಂದ ದೇವರ ನಾಮ ಗಾಯನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕೊಡಗು ಬ್ರಾಹ್ಮಣರ ಸಂಘದ ಕಾರ್ಯದರ್ಶಿ ರಾಮ ಭಟ್, ಖಜಾಂಚಿ ಮುರಳಿ, ಗಾಯತ್ರಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಶ್ರೀನಿವಾಸ ಗಿರಿ ಕಣ್ಣರಾಯ, ಸಂಘದ ಎಲ್ಲಾ ಸದಸ್ಯರು, ಸಾರ್ವಜನಿಕರು ಇದ್ದರು.

-ಚಿತ್ರ,ವರದಿ:ಪಿ.ವಿ.ಪ್ರಭಾಕರ್