ಭಾಗಮಂಡಲ, ಡಿ. 30: ನಾಡಿಗೆ ಧಾಳಿಯಿಟ್ಟ ಕಾಡಾನೆಗಳ ಹಿಂಡನ್ನು ಮರಳಿ ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಸಂದರ್ಭ ತಿರುಗಿಬಿದ್ದ ಆನೆಗಳು ಕಾರ್ಯಾಚರ ಣೆಯಲ್ಲಿದ್ದವರನ್ನು ಅಟ್ಟಾಡಿಸಿದ್ದು, ಕಾಡಾನೆಗೆ ಸಿಲುಕಿ ವ್ಯಕ್ತಿಯೋರ್ವರು ಭಾಗಮಂಡಲ, ಡಿ. 30: ನಾಡಿಗೆ ಧಾಳಿಯಿಟ್ಟ ಕಾಡಾನೆಗಳ ಹಿಂಡನ್ನು ಮರಳಿ ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಸಂದರ್ಭ ತಿರುಗಿಬಿದ್ದ ಆನೆಗಳು ಕಾರ್ಯಾಚರ ಣೆಯಲ್ಲಿದ್ದವರನ್ನು ಅಟ್ಟಾಡಿಸಿದ್ದು, ಕಾಡಾನೆಗೆ ಸಿಲುಕಿ ವ್ಯಕ್ತಿಯೋರ್ವರು ಎಂಬಲ್ಲಿ ಕಳೆದ 2-3 ದಿನಗಳಿಂದ ಮರಿಯಾನೆ ಸಹಿತ ಕಾಡಾನೆಗಳ ಹಿಂಡು ತೋಟ- ಗದ್ದೆಗಳಿಗೆ ಧಾಳಿ ಮಾಡಿ ನಷ್ಟಪಡಿಸುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿ ಇಲಾಖೆಯ 3-4 ಸಿಬ್ಬಂದಿಗಳು 2 ದಿನಗಳಿಂದ ಆನೆಗಳನ್ನು ಕಾಡಿಗೆ ಅಟ್ಟಲು ಪ್ರಯತ್ನಿಸುತ್ತಿದ್ದಾರೆ. ಇಂದೂ ಕೂಡ ಯಾವದೇ ಬಂದೂಕು, ಪಟಾಕಿ, ಆಯುಧಗಳಿಲ್ಲದೆ ಕಾರ್ಯಾಚರಣೆಯ ತರಬೇತಿ ಕೂಡ ಇಲ್ಲದ ನಾಲ್ಕು ಮಂದಿ ಸಿಬ್ಬಂದಿಗಳು ಕಾರ್ಯಾಚರಣೆಗೆ ಮುಂದಾಗಿದ್ದು, ಇದರೊಂದಿಗೆ ಗ್ರಾಮಸ್ಥರು ಕೂಡ ಕೈಜೋಡಿಸಿದ್ದಾರೆ.

ತಿರುಗಿಬಿದ್ದ ಗಜಪಡೆ

ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಕಾಡಾನೆಗಳು (ಮೊದಲ ಪುಟದಿಂದ) ಕಾರ್ಯಾಚರಣೆ ತಂಡದ ಮೇಲೆ ತಿರುಗಿಬಿದ್ದಿವೆ. ಧಾಳಿಯಿಂದ ದಿಕ್ಕೆಟ್ಟ ಗ್ರಾಮಸ್ಥರು ಓಡುತ್ತಿರುವಂತೆ ಕುಡಿಯರ ಹರೀಶ್ (38) ಎಂಬವರು ಆನೆ ಧಾಳಿಗೆ ಸಿಲುಕಿ ದ್ದಾರೆ. ಆನೆ ಅವರನ್ನು ತುಳಿ ಯುತ್ತಿದ್ದ ಸಂದರ್ಭ ಜೊತೆಯಲಿ ್ಲದ್ದವರು ಜೋರಾಗಿ ಬೊಬ್ಬಿಟ್ಟು ಕಲ್ಲು- ದೊಣ್ಣೆಗಳನ್ನು ಎಸೆದಿದ್ದರಿಂದ ಆನೆ ಹರೀಶ್‍ನನ್ನು ಅಷ್ಟಕ್ಕೆ ಬಿಟ್ಟು ಹಿಂತೆರಳಿದೆ. ಇತ್ತ ಓಡುವ ರಭಸಕ್ಕೆ ಕೆ.ಎಸ್. ಚೇತನ್ (22) ಎಂಬಾತನ ಕಾಲಿಗೆ ಪೆಟ್ಟಾಗಿದೆ. ಕೆ.ಬಿ. ಈರಪ್ಪ ಎಂಬವರು ಕೂಡ ಎಡವಿಬಿದ್ದು, ಅವರಿಗೂ ಸಣ್ಣ-ಪುಟ್ಟ ಗಾಯ ಗಳಾಗಿವೆ.

ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿರುವ ಹರೀಶ್‍ಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಗಿದೆ. ಚೇತನ್ ಹಾಗೂ ಈರಪ್ಪ ಅವರುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯವರಿತು ಡಿ.ಎಫ್.ಓ. ಜಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

-ವರದಿ : ಸುನಿಲ್ ಕೆ.ಡಿ.

ಚಿತ್ರ : ಲಕ್ಷ್ಮೀಶ್.