ಚೆಟ್ಟಳ್ಳಿ, ಡಿ. 29: ಕೊಡಗು ಜಿಲ್ಲೆಯ ನಿರಾಶ್ರಿತರ ಬೆನ್ನೆಲುಬಾಗಿ ಕಳೆದ ಅನೇಕ ವರ್ಷಗಳಿಂದ ಅವರ ಸಹಾಯಕ್ಕಾಗಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯು.ಎ.ಇ ಸಮಿತಿಯ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಅಬ್ದುಲ್ ಲತೀಫ್ ಅಭಿಪ್ರಾಯಪಟ್ಟರು.

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯು.ಎ.ಇ ಸಮಿತಿ ವತಿಯಿಂದ ನಡೆದ ಹುಬ್ಬುರಸೂಲ್ ಸಮಾವೇಶ ಹಾಗೂ ಪ್ರತಿಭೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸಂಘಟನೆಯ ಸೇವೆಗಳು ಜಿಲ್ಲೆಗೆ ಅತ್ಯವಶ್ಯಕವಾಗಿದೆ. ನಿರಾಶ್ರಿತರಿಗೆ ಸ್ವಾಂತನ ಹಾಗೂ ತಮ್ಮಿಂದಾಗುವ ಸಹಾಯಹಸ್ತ ನೀಡಲು ಮನವಿ ಮಾಡಿದರು. ಸ್ವಾಗತ ಸಮಿತಿ ಚೇರ್ಮೆನ್ ಅರಾಫತ್ ನಾಪೋಕ್ಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಲೀಲ್ ನಿಝಾಮಿ ಎಮ್ಮೆಮಾಡು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಮುಖ್ಯ ಪ್ರಭಾಷಣ ವನ್ನು ಜಲೀಲ್ ಸಖಾಫಿ ಕಡಲುಂಡಿ ಮಾಡಿದರು.

ಜಿಲ್ಲಾ ಪಂಚಾ ಯತ್ ಸದಸ್ಯ ಲತೀಫ್ ಹಾಗೂ ಬಹರೈನ್ ಅಂತ ರಾಷ್ಟ್ರೀಯ ಖುರ್‍ಆನ್ ಸ್ಪರ್ಧೆಯ ವಿಜೇತರಾದ ಹಾಫಿಝ್ ದರ್ವೀಷ್ ಆಲಿ ಇವರುಗಳನ್ನು ಕಾರ್ಯಕ್ರಮ ದಲ್ಲಿ ಸನ್ಮಾನ ಮಾಡಲಾಯಿತು. ವೇದಿಕೆಯಲ್ಲಿ ಉಸ್ಮಾನ್ ಹಾಜಿ ನಾಪೋಕ್ಲು, ಕೆ.ಎಸ್.ಡಬ್ಲೂ.ಎ. ಯು.ಎ.ಇ ಅಧ್ಯಕ್ಷÀ ಅಬೂಬಕರ್ ಹಾಜಿ, ಹಮೀದ್, ಅಹಮ್ಮದ್, ಮುಹಮ್ಮದ್ ಹಾಜಿ, ಇಬ್ರಾಹಿಂ ಫೈಝಿ, ಇನ್ನಿತರರು ಇದ್ದರು. ಇಸ್ಮಾಯಿಲ್ ಮೂರ್ನಾಡು, ಸ್ವಾಗತಿಸಿ ಮಶೂದ್ ವಂದಿಸಿದರು.