ಸುಂಟಿಕೊಪ್ಪ, ಡಿ. 29: ಇಲ್ಲಿನ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ 48ನೇ ವಾರ್ಷಿಕ ಮಂಡಲ ಪೂಜೋತ್ಸವ, ಅನ್ನಸಂತರ್ಪಣೆ ನಡೆಯಿತು.

ಬೆಳಿಗ್ಗೆಯಿಂದಲೇ ಮುಖ್ಯ ಅರ್ಚಕ ಗಣೇಶ್ ಉಪಾಧ್ಯಾಯ ನೇತೃತ್ವದಲ್ಲಿ 12 ತೆಂಗಿನಕಾಯಿಗಳ ಗಣಪತಿ ಹೋಮ, ಪಂಚಾಮೃತಾಭಿಷೇಕ, ಮಧ್ಯಾಹ್ನದ ಪೂಜೆ, ಲಕ್ಷಾರ್ಚಮೆ, ಪಲ್ಲಪೂಜೆ ನಡೆಯಿತು. ಅರ್ಚಕ ಪ್ರಸನ್ನ ಭಟ್ ಪ್ರವಚನ ನೀಡಿದರು. ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಸದಸ್ಯ ಗೋಕುಲ್ ಸ್ವಾಮಿ, ಸುಂಟಿಕೊಪ್ಪ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷ ಧನು ಕಾವೇರಪ್ಪ, ಪ್ರಧಾನ ಕಾರ್ಯದರ್ಶಿ ಸುರೇಶ್ ಗೋಪಿ, ಕಾರ್ಯದರ್ಶಿ ಶಿವಮಣಿ, ಖಜಾಂಚಿ ಎ. ಶ್ರೀಧರನ್, ಉಪಾಧ್ಯಕ್ಷ ಬಿ.ಕೆ. ಪ್ರಶಾಂತ್, ಬಿ.ಎಂ. ಸುರೇಶ್, ಅಣ್ಣು ಶೇಖರ್, ವಿ.ಎ. ಸಂತೋಷ್, ವಿನೋದ್, ಬಾಲಕೃಷ್ಣ, ಮುತ್ತಯ್ಯ, ಆರ್.ಟಿ. ಮೋಹನ, ಟಿ.ಟಿ. ರಾಧಾಕೃಷ್ಣ ಹಾಗೂ ಸಮಿತಿ ಸದಸ್ಯರು ಇದ್ದರು.