ಗೋಣಿಕೊಪ್ಪಲು, ಡಿ. 29: ಜನಾಂಗವು ಸಮಸ್ಯೆಗಳನ್ನು ನಿವಾರಿಸು ವಲ್ಲಿ ಒಗ್ಗಟ್ಟಿನಿಂದ ಹೋರಾಡು ವಂತಾಗಬೇಕು. ಜನಾಂಗದ ಅಭಿವೃದ್ಧಿ ಯಲ್ಲಿ ಸಮಾಜ ಪೂರಕವಾಗಿ ಸ್ಪಂದಿಸು ವಂತಾಗಬೇಕು. ಪ್ರೀತಿ ವಿಶ್ವಾಸದಿಂದ ಚಿಂತನೆಯನ್ನು ನಡೆಸಿ ಕಾರ್ಯ ಕೈಗೊಳ್ಳುವಂತಗಾಬೇಕೆಂದು ರಾಜ್ಯ ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ಕಾರ್ಯದರ್ಶಿ ಬಬ್ಬೀರ ಸರಸ್ವತಿ ಸಲಹೆ ನೀಡಿದರು.

ಕಾವಾಡಿ ಮಹಿಳಾ ಸಮಾಜದ ಕಟ್ಟಡದಲ್ಲಿ ಸಮಾಜದ ಅಧ್ಯಕ್ಷ ಪಿ.ಜಿ.ಸೋಮಯ್ಯ ಅಧ್ಯಕ್ಷತೆಯಲ್ಲಿ ಜರುಗಿದ ಪಣಿಕ ಸಮಾಜದ 5ನೇ ವಾರ್ಷಿಕ ಮಹಾಸಭೆಯನ್ನು ಜ್ಯೋತಿ ಬೆಳಗಿಸುವದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಒಗ್ಗಟ್ಟಾಗಿ ಸಮಾಜ ಹೋರಾಡುವಂತಾಗಬೇಕೆಂದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಮಾತನಾಡುತ್ತಾ ಜನಾಂಗದ ಸದಸ್ಯರು ತನ್ನ ಕಸುಬನ್ನು ವೃತ್ತಿಯಾಗಿ ಮುನ್ನಡೆಸದೆ ಬದುಕಿಗಾಗಿ ಕೃಷಿಯೊಂದಿಗೆ ಇನ್ನಿತರ ಸರ್ಕಾರಿ ಉದ್ಯೋಗವನ್ನು ಪಡೆಯಲು ಶ್ರಮಿಸಬೇಕು. ಹಿರಿಯರು ಕಲಿಸಿಕೊಟ್ಟ ಸಂಪ್ರದಾಯ ಪದ್ದತಿ ಪರಂಪರೆಗಳನ್ನು ಉಳಿಸಿ ಬೆಳೆಸಿಕೊಂಡು ಮುನ್ನೆಡೆಸು ವಂತಾಗಬೇಕೆಂದರು. ವೇದಿಕೆಯಲ್ಲಿ ಸಮಾಜದ ಮಾಜಿ ಅಧ್ಯಕ್ಷ ದೇವಮಕ್ಕಡ ಗೀಣಿ ಪೂಣಚ್ಚ, ಹಿರಿಯವರಾದ ಪಡುವಂಡ ದಮಯಂತಿ, ಪಾನಂದಿರ ರಂಜು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದಲ್ಲಿ ಗಣನೀಯ ವಾಗಿ ಸೇವೆ ಸಲ್ಲಿಸಿದ ಸಾಧಕರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ ಪ್ರತಿಭೆಯನ್ನು ತೋರಿದ ಜನಾಂಗೀಯ ವಿದ್ಯಾರ್ಥಿ ಗಳಿಗೆ ಹಾಗೂ ಎಸ್‍ಎಸ್‍ಎಲ್‍ಸಿ, ಪಿಯುಸಿ ಹಾಗೂ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡಿ ಅತೀ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೂ ಸಮಾಜದ ವತಿಯಿಂದ ಗೌರವಿಸಲಾ ಯಿತು. ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ನಿರ್ಣಯಗಳು: ಜನಾಂಗದ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸಮಾಜದ ವತಿಯಿಂದ ಒಟ್ಟಾಗಿ ಹೋರಾಟ ಮಾಡುವದು. ಸಮಾಜದ ಅಭಿವೃದ್ಧಿಯ ದೃಷ್ಟಿಯಿಂದ ಹೋರಾ ಡುವಂತಹ ಸಂಘ ಸಂಸ್ಥೆಗಳಿಗೆ ಪೂರಕವಾಗಿ ಸಹಕಾರ ನೀಡುವದು. ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜನಾಂಗ ಕಾರಡ ಒಕ್ಕೂಟಕ್ಕೆ ಸಂಪೂರ್ಣ ಬೆಂಬಲ ನೀಡುವದು.

ಭವ್ಯ, ಶೃತಿ, ಕೃತಿ, ಸಂಗಡಿಗರು ಪ್ರಾರ್ಥಿಸಿದರು. ಸಲಹೆಗಾರ ಪಾನಂದಿರ ಹನಿ ಚಿಂತು ಸ್ವಾಗತಿಸಿದರು. ಸಮಾಜದ ಉಪಾಧ್ಯಕ್ಷೆ ಚೀಯಮ್ಮಂಡ ಪುಷ್ಪ ಕಾವೇರಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೊನ್ನಜೀರ ಕಿಶು, ಭರತ್ ವಾರ್ಷಿಕ ವರದಿ ವಾಚಿಸಿದರು, ಪಾನಂದಿರ ಜಯಂತಿ ಕಾರ್ಯಕ್ರಮ ನಿರೂಪಿಸಿ ಪೊನ್ನಂಗಡ ಶ್ರೀಜಾ ಉದಯ ವಂದಿಸಿದರು. ಸದಸ್ಯರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

-ಹೆಚ್.ಕೆ.ಜಗದೀಶ್