ಚೆಟ್ಟಳ್ಳಿ, ಡಿ. 29: ಪ್ರವಾದಿಯವರನ್ನು ಸುದ್ದಿವಾಹಿನಿಯ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ಅವರು ವಾಹಿನಿಯಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ನಿಂದನೆ ಮಾಡಿದ್ದಾರೆ ಎಂದು ವೀರಾಜಪೇಟೆ ಡಿವಿಷನ್ ಎಸ್.ಎಸ್.ಎಫ್. ವತಿಯಿಂದ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕರ್ನಾಟಕ ರಾಜ್ಯ ಎಸ್.ಎಸ್.ಕ್ಯಾಂಪಸ್ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ಜಿಲ್ಲಾ ಎಸ್.ಎಸ್.ಎಫ್ ಸಹ ಕಾರ್ಯದರ್ಶಿ ಶಾಕೀರ್, ಮುಜೀಬ್ ಕೊಂಡಂಗೇರಿ, ಇಬ್ರಾಹಿಂ ಮಾಸ್ಟರ್, ಜುಬೈರ್ ಸಹದಿ, ಯೂಸುಫ್ ಝೈನಿ ಜಲೀಲ್ ಅಮಾನಿ, ಮತಿತ್ತರರು ದೂರು ನೀಡಿದ್ದಾರೆ.