ಮಡಿಕೇರಿ, ಡಿ.29 : ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜ. 2 ರಿಂದ 12ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮ ನಡೆಯಲಿದ್ದು, ಅದರಂತೆ ರಾಜ್ಯದಲ್ಲಿ ಅತೀ ಕಡಿಮೆ ಕ್ಷಯರೋಗಿ ಗಳನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿಯೂ ಆಂದೋಲನಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿ ಕಾರಿ ಡಾ.ಎ.ಸಿ. ಶಿವಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ಪೂರ್ಣ ಪ್ರಮಾಣದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಕಾರ್ಯಕ್ರಮ ನಡೆಯಲಿದ್ದು, ತಾಲೂಕಿನ 1,72,431 ಮಂದಿಯ ಸರ್ವೇ ಕಾರ್ಯ ನಡೆಯಲಿದೆ. ವೀರಾಜಪೇಟೆ ತಾಲೂಕಿನಲ್ಲಿ 45,199 ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 64,227 ಮಂದಿಯನ್ನು ಸರ್ವೇಗೆ ಒಳಪಡಿಸಲಾಗಿತ್ತದೆ. ಒಟ್ಟಾಗಿ ಜಿಲ್ಲೆಯಲ್ಲಿ 62 ಸಾವಿರ ಮನೆಗಳ 2,81,857 ಮಂದಿಯನ್ನು ಸರ್ವೇಗೆ ಒಳಪಡಿಸಲಾಗುತ್ತದೆಂದು ವಿವರಿಸಿದರು.
ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿ ಗಳು, ಕಿರಿಯ ಮತ್ತು ಹಿರಿಯ ಆರೋಗ್ಯ ಸಹಾಯಕಿಯರಿಗೆ ಈ ಬಗ್ಗೆ ಈಗಾಗಲೇ ತಾಲೂಕುವಾರು ತರಬೇತಿ ನೀಡಲಾಗಿದ್ದು, ತಲಾ ಇಬ್ಬರು ಸದಸ್ಯರು ಗಳನ್ನು ಒಳಗೊಂಡ 318 ತಂಡಗಳಲ್ಲಿ ಮನೆ ಮನೆಗೆ ಭೇಟಿ ನೀಡಿ, ಕ್ಷಯರೋಗದ ಲಕ್ಷಣ, ಚಿಕಿತ್ಸೆ ಬಗ್ಗೆ ಸಮಾಲೋಚನೆ ನಡೆಸಿ, ಅಗತ್ಯವಿರುವ ರೋಗಿಗಳ ಕಫದ ಮಾದರಿಯನ್ನು ಸ್ಥಳದಲ್ಲೇ ಸಂಗ್ರಹಿಸಲಿದ್ದಾರೆ ಮತ್ತು ಸಮೀಪದ ನಿಯೋಜಿತ ಕಫ ಪರೀಕ್ಷಾ ಕೇಂದ್ರಗಳಿಗೆ ಸಾಗಿಸಿ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಒಂದು ವೇಳೆ ಕಫದಲ್ಲಿ ಕ್ಷಯರೋಗದ ಲಕ್ಷಣಗಳು ಕಂಡು ಬಂದಲ್ಲಿ ಅಂತಹ ವ್ಯಕ್ತಿಗಳನ್ನು ಇಲಾಖೆಯ ಮೂಲಕವೇ ಆಸ್ಪತ್ರೆಗೆ ಕರೆದೊಯ್ದು ಕ್ಷ-ಕಿರಣ ಪರೀಕ್ಷೆ ನಡೆಸಲಾಗುತ್ತದೆ ಮತ್ತು ಅಗತ್ಯ ವಿರುವವರಿಗೆ ಜೀನ್ ಎಕ್ಸ್‍ಪರ್ಟ್ ಮೆಷಿನ್ ಮೂಲಕವೂ ಪರೀಕ್ಷೆಯನ್ನು ನಡೆಸಿ ಕ್ಷಯ ರೋಗ ಇರುವದನ್ನು ಖಚಿತಪಡಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಆರಂಭಿಸ ಲಾಗುತ್ತದೆಂದರು.
ಕಳೆದ ಜುಲೈ ತಿಂಗಳಿನಲ್ಲಿ ಜಿಲ್ಲೆಯಲ್ಲಿ ನಡೆಸಲಾದ ಪ್ರಥಮ ಹಂತದ ಆಂದೋಲನದಲ್ಲಿ 12 ಪ್ರಕರಣಗಳು ಪತ್ತೆಯಾಗಿರುವದಾಗಿ ತಿಳಿಸಿದ ಡಾ. ಶಿವಕುಮಾರ್, ಕ್ಷಯರೋಗ ದೃಢ ಪಟ್ಟ ರೋಗಿಗಳಿಗೆ 2018ರ ಏಪ್ರಿಲ್‍ನಿಂದ ಅನ್ವಯವಾಗು ವಂತೆ ಪೌಷ್ಠಿಕ ಆಹಾರ ಖರೀದಿಗಾಗಿ ಮಾಸಿಕ 500 ರೂ.ಗಳ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಈ ಯೋಜನೆಯಡಿ ಈಗಾಗಲೇ ಜಿಲ್ಲೆಯಲ್ಲಿರುವ ಒಟ್ಟು 478 ಅರ್ಹ ಫಲಾನುಭವಿಗಳ ಪೈಕಿ 178 ಮಂದಿಗೆ 1.78 ಲಕ್ಷ ರೂ. ನೆರವನ್ನು ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದ್ದು, ಉಳಿದವರಿಗೆ 9,77,500 ರೂ.ಗಳನ್ನು ಡಿಸೆಂಬರ್ ಅಂತ್ಯದ ಒಳಗಾಗಿ ಜಮಾ ಮಾಡಲಾಗುತ್ತದೆಂದು ನುಡಿದರು.
ವಿಶ್ವ ಸಂಸ್ಥೆಯು 2035ಕ್ಕೆ ವಿಶ್ವದಾದ್ಯಂತ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಆದರೆ, ಪ್ರಧಾನಿ ಮೋದಿ ಅವರು ಭಾರತದಲ್ಲಿ 2025ಕ್ಕೆ ಕ್ಷಯರೋಗ ಮುಕ್ತ ಭಾರತ ನಿರ್ಮಾಣದ ಪಣ ತೊಟ್ಟಿದ್ದು, ಅದರಂತೆ ವರ್ಷಕ್ಕೆ ಎರಡು ಬಾರಿ ಈ ಆಂದೋಲನವನ್ನು ನಡೆಸಲಾಗು ತ್ತಿದೆ ಎಂದ ಶಿವಕುಮಾರ್ ಅವರು, ಈ ಆಂದೋಲನವನ್ನು ಯಶಸ್ವಿಗೊಳಿ ಸುವ ನಿಟ್ಟಿನಲ್ಲಿ ಜಿಲ್ಲೆಯ ಸಾರ್ವ ಜನಿಕರು ಇಲಾಖೆಯೊಂದಿಗೆ ಸಹಕರಿಸ ಬೇಕೆಂದು ಮನವಿ ಮಾಡಿದರು.