ಮಡಿಕೇರಿ, ಡಿ. 27: ನಗರದ ಹೊಸಬಡಾವಣೆಯ ಶ್ರೀ ಪಸನ್ನ ಗಣಪತಿ ದೇವಾಲಯದ 18ನೇ ವಾರ್ಷಿಕೋತ್ಸವ ತಾ. 29ರಂದು (ನಾಳೆ) ನಡೆಯಲಿದೆ. ಈ ಪ್ರಯುಕ್ತ ಬೆಳಿಗ್ಗೆ 7 ಗಂಟೆಯಿಂದಲೇ ವಿವಿಧ ಪೂಜಾ ಕೈಂಕರ್ಯದೊಂದಿಗೆ ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ ಬಳಿಕ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7 ಗಂಟೆಗೆ ರಂಗಪೂಜೆ, 7.30 ಗಂಟೆಗೆ ಮಹಾಪೂಜೆ ಹಾಗೂ 8 ಗಂಟೆಗೆ ಪ್ರಸಾದ ವಿತರಣೆ ನೆರವೇರಲಿದೆ. ಸಂಜೆ 6.30 ಗಂಟೆಗೆ ರಾಮಾಂಜನೇಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.