ಸಿದ್ದಾಪುರ, ಡಿ. 27: ಗ್ರಾ.ಪಂ. ಕಚೇರಿ ಎದುರು ಮಾಜಿ ಟ್ರ್ಯಾಕ್ಟರ್ ಚಾಲಕನೋರ್ವನು ಕೆಲಸ ನೀಡುವಂತೆ ಒತ್ತಾಯಿಸಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಬೆದರಿಕೆ ಒಡ್ಡಿರುವ ಬಗ್ಗೆ ಪಿ.ಡಿ.ಓ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಿದ್ದಾಪುರದ ಗ್ರಾ.ಪಂ. ಯಲ್ಲಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಗಣೇಶ ಎಂಬಾತ ಬುಧವಾರದಂದು ಪಂ. ಕಚೇರಿಗೆ ಆಗಮಿಸಿ ಪಂಚಾಯಿತಿಯ ಆಡಳಿತ ಮಂಡಳಿ ಮತ್ತು ಅಧ್ಯಕ್ಷರಿಗೆ ಅವಾಚ್ಯ ಶಬ್ಧದೊಂದಿಗೆ ನಿಂಧಿಸಿ ವಿಷದ ಬಾಟಲಿ ಹಿಡಿದು ಆತ್ಮಹತ್ಯೆ ಮಾಡಿ ಕೊಳ್ಳುವದಾಗಿ ಬೆದರಿಕೆ ಒಡ್ಡಿದ್ದಾನೆ, ಮತ್ತು ಚಾಲಕ ಗಣೇಶ ಪಾನಮತ್ತನಾಗಿ ದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ.