ನಾಪೆÇೀಕ್ಲು, ಡಿ. 27: ಪರಿಶ್ರಮದ ಬದುಕನ್ನೇ ಸವಾಲಾಗಿ ಸ್ವೀಕರಿಸಿ, ಹಗಲು ರಾತ್ರಿಯೆನ್ನದೆ ಬೆವರಿ ನಿಂದಲೇ ದೈನಂದಿನ ಬದುಕನ್ನು ಕಟ್ಟಿಕೊಂಡು ಅದರೊಂದಿಗೆ ತಮ್ಮ ಪುರಾತನ ಸಂಸ್ಕøತಿ ಆಚಾರ-ವಿಚಾರಗಳನ್ನು ಕಾಪಾಡಿಕೊಂಡು ಬಂದಿರುವ ಕುಡಿಯ ಜನಾಂಗದ ಮಹಿಳೆಯರು ಮಕ್ಕಳಾದಿಯಾಗಿ ಹಾಡಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ಕ್ಷಣಕ್ಕೆ ತಡಿಯಂಡ ಮೋಳ್ ಬೆಟ್ಟ ಸಾಕ್ಷಿಯಾಯಿತು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ನಾಲ್ನಾಡ್ ಕುಡಿಯ ಮಂದ್ ಸಮಿತಿ ಸಂಯುಕ್ತಾಶ್ರಯದಲ್ಲಿ ಯವಕಪಾಡಿ ಗ್ರಾಮದಲ್ಲಿ ನಡೆದ ಐದನೆ ಕುಡಿಯ ಮಂದ್ ನಮ್ಮೆ ಕಾರ್ಯಕ್ರಮ ಇದಕ್ಕೆ ವೇದಿಕೆಯಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಕಳೆದ ಐದು ವರ್ಷಗಳಿಂದ ಇಲ್ಲಿ ಕುಡಿಯ ಮಂದ್ ನಮ್ಮೆಯನ್ನು ನಡೆಸಲಾಗುತ್ತಿದೆ. ಅದು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿರುವದು ಸಂತಸ ತಂದಿದೆ ಎಂದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕೊಡಗಿನ ಎಲ್ಲಾ ಮೂಲನಿವಾಸಿಗಳನ್ನು ಒಗ್ಗೂಡಿಸಿ ಮುನ್ನಡೆದರೆ ಮುಂದಿನ ಪೀಳಿಗೆಗೆ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗಲಿದೆ ಎಂದರು. ಕುಡಿಯ ಜನಾಂಗದ ಸಂಸ್ಕøತಿ ಕೊಡಗಿಗೆ ಮಾತ್ರವಲ್ಲದೆ ಹೊರ ರಾಜ್ಯದಲ್ಲೂ ಪಸರಿಸಿರುವದು ಸಂತಸ ತಂದಿದೆ ಎಂದರು.
ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ ಮಾತನಾಡಿ ಜನಾಂಗ ಉಳಿಯಬೇಕಾದರೆ ಅವರ ಸಂಸ್ಕøತಿ, ಆಚಾರ - ವಿಚಾರ, ಪದ್ಧತಿ - ಪರಂಪರೆಗಳನ್ನು
(ಮೊದಲ ಪುಟದಿಂದ) ಉಳಿಸಿ ಬೆಳೆಸುವ ಕಾರ್ಯವಾಗಬೇಕಾಗಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೋಲಿಂದ ಮಲೆ ಪೆÇನ್ನಪ್ಪ ಮಾತನಾಡಿ, ದೇಶಕ್ಕೆ ಸೈನಿಕರನ್ನು, ಕ್ರೀಡಾಪಟುಗಳನ್ನು ನೀಡಿದ ಕೀರ್ತಿ ಕೊಡಗಿಗಿದೆ. ಹಿಂದಿನ ಪದ್ಧತಿ - ಪರಂಪರೆ, ಸಂಸ್ಕøತಿಯನ್ನು ಉಳಿಸಿಕೊಳ್ಳುವದು ನಮ್ಮ ಕರ್ತವ್ಯ. ಅದಕ್ಕಾಗಿ ಮಂದ್ ನಮ್ಮೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸಂಚಾಲಕ ತೋರೆರ ಮುದ್ದಯ್ಯ ಮಂದ್ ನಮ್ಮೆ, ರಾಜರ ಕಾಲದಿಂದಲೇ ನಡೆದುಕೊಂಡು ಬರುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೆÇನ್ನಪ್ಪ ವಹಿಸಿದ್ದರು.
ವೇದಿಕೆಯಲ್ಲಿ ಕಕ್ಕಬ್ಬೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಚೋವಂಡ ಪೆÇನ್ನವ್ವ, ಕಣಿಯರ ನಾಣಯ್ಯ, ಬೀಕಂಡ ಬೆಳ್ಯಪ್ಪ, ಆಪಟ್ಟೀರ ಟಾಟು ಮೊಣ್ಣಪ್ಪ, ಹೆಚ್.ಎ. ಗಣಪತಿ, ಉತ್ತುಕುಟ್ಟಡ ತಿಮ್ಮಯ್ಯ, ಜಾನಪದ ಕಲಾವಿದೆ ಗೋಪಮ್ಮ, ಅರಮನೆ ಪಾಲೆರ ಕಾರ್ಯಪ್ಪ, ಕುಡಿಯರ ಬೋಪಯ್ಯ ಇದ್ದರು.
ಬೋಜಕ್ಕಿ ಮತ್ತು ತಂಡದಿಂದ ಪ್ರಾರ್ಥನೆ, ಶರತ್ ಬೆಳ್ಯಪ್ಪ, ದಿಲೀಪ್ ಕುಮಾರ್ ಮತ್ತು ಭರತ್ ಚಂದ್ರ ದೇವಯ್ಯ ನಿರೂಪಿಸಿ, ಕುಡಿಯರ ಮುತ್ತಪ್ಪ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಕೋಲಾಟ್, ಬೊಳ್ಕಾಟ್, ಉಮ್ಮತಾಟ್, ಉರ್ಟಿಕೊಟ್ಟ್ ಆಟ್, ಕತ್ತಿಯಾಟ್, ಪರಿಯಕಳಿ, ಕಪ್ಪೆಯಾಟ್, ಕಥೆ, ಕವನ, ಏಕಪಾತ್ರಾಭಿನಯ ನಡೆಯಿತು.
-ಪಿ.ವಿ. ಪ್ರಭಾಕರ್