ಕೂಡಿಗೆ, ಡಿ. 26: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದ ಸೇವಾಪ್ರತಿನಿಧಿಗಳಿಗೆ 2019ನೇ ವರ್ಷದ ಡೈರಿ ವಿತರಿಸಿದ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಮಾತನಾಡಿ, 2018ನೇ ಸಾಲಿನಲ್ಲಿ ಕೂಡಿಗೆ ವಲಯದ ಸೇವಾಪ್ರತಿನಿಧಿಯಾಗಿ ಕಾರ್ಯಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಗುಣಮಟ್ಟಗಳ ಸುದಾರಣೆಗೆ ಶ್ರಮಿಸಿರುವ ವಲಯದ ಸೇವಾಪ್ರತಿನಿಧಿಗಳ ಶ್ರಮ ಶ್ಲಾಘನೀಯವಾಗಿದೆ.ಹೊಸ ವರ್ಷ 2019 ರಲ್ಲಿಯೂ ಯೋಜನೆಯ ಪಾಲುದಾರ ಕುಟುಂಬದೊಂದಿಗೆ ಉತ್ತಮ ಬಾಂಧವ್ಯದ ಸಂಬಂಧಗಳನ್ನು ಬೆಳೆಸಿಕೊಂಡು ಯೋಜನೆಯ ಕಾರ್ಯಕ್ರಮಗಳನ್ನು ಉತ್ತುಂಗಕ್ಕೇರಿಸುವಲ್ಲಿ ವಲಯದ ಸೇವಾಪ್ರತಿನಿಧಿಯವರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮಾರ್ಕೆಟಿಂಗ್ ಅಧಿಕಾರಿ ಹರೀಶ್ ಅವರು ವಲಯದ ಸೇವಾಪ್ರತಿನಿಧಿಗಳಿಗೆ ಸಿರಿ ಧಾನ್ಯಗಳನ್ನು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನೀಡಿ ಉಪಯೋಗದ ಮಹತ್ವದ ತಿಳುವಳಿಕೆ ನೀಡುವದರಿಂದ ಆರೋಗ್ಯ ವೃದ್ಧಿ ಹೊಂದಲು ಸಾಧ್ಯ. ಕಾರ್ಯಕ್ಷೇತ್ರಗಳಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ ಮುಂತಾದ ಅನಾರೋಗ್ಯದಿಂದ ಬಳಲುತ್ತಿರುವ ಫಲಾನುಭವಿಗಳನ್ನು ಗುರುತಿಸುವ ಮಾಹಿತಿ ನೀಡಬೇಕು.
ಸೇವಾಪ್ರತಿನಿಧಿಗಳಾದ ಸುವರ್ಣ, ನಿರ್ಮಲಾ, ರೇಣುಕಾ, ಶಶಿಕಲಾ, ಹೇಮಲತಾ, ರೇಣುಕಾಶೆಟ್ಟಿ, ಸುನೀತಾ, ಕುಸುಮಾ, ಸುನಂದ ಹಾಗೂ ತಾಂತ್ರಿಕ ತರಬೇತಿ ಸಹಾಯಕರಾದ ಪ್ರಿಯದರ್ಶಿನಿ, ಅನಿತಾ ಉಪಸ್ಥಿತರಿದ್ದರು.