ಕರಿಕೆ, ಡಿ. 26: ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಶಾಲೆಗಳ ಮಕ್ಕಳ ಗ್ರಾಮ ಸಭೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಳ್ಳುಕೊಚ್ಚಿಯಲ್ಲಿ ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಬಾಲಚಂದ್ರ ನಾಯರ್ ವಹಿಸಿದ್ದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಆಟದ ಮೈದಾನ, ಎಲ್ಲಾ ಶಾಲೆಗಳ ಮುಖ್ಯ ರಸ್ತೆಗಳ ಬಳಿಯಲ್ಲಿ ಶಾಲಾ ಸೂಚನಾ ಫಲಕಗಳನ್ನು ಹಾಗೂ ವಿಶೇಷ ತರಗತಿಗಳ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ತರಗತಿಗಳಿಗೆ ತೆರಳಲು ವಾಹನ ಸೌಕರ್ಯವನ್ನು ಒದಗಿಸಿ ಕೊಡುವಂತೆ ಮಕ್ಕಳು ಆಗ್ರಹಿಸಿದರು. ಸಭೆಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಸಿ.ಆರ್.ಪಿ. ಲೋಕಪ್ರಭು ಮಾಹಿತಿ ನೀಡಿದರು. ಭಾರತದ ಸಂವಿಧಾನದ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ರಮಾನಾಥ ಬೇಕಲ್ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಸರಕಾರಿ ಪ್ರೌಢಶಾಲಾ ನಾಯಕ ಹೆಚ್.ಆರ್. ಕಿರಣಕುಮಾರ್, ನಾಯಕಿ ಶ್ರೀಷ್ಮಾ, ಪ್ರಾಥಮಿಕ ಶಾಲೆಯ ಅಭಿಷೇಕ, ವಿಷ್ಣು, ತಾಲೂಕು ಪಂಚಾಯಿತಿ ಸದಸ್ಯೆ ಸಂಧ್ಯಾ, ಪಂಚಾಯಿತಿ ಉಪಾಧ್ಯಕ್ಷ ಸೋಲಿ ಜಾರ್ಜ್, ಸರ್ವ ಗ್ರಾಮ ಪಂಚಾಂಯಿತಿ ಸದಸ್ಯರು, ಶಾಲಾ ಆಡಳಿತ ಮಂಡಳಿಯ ಅಧÀ್ಯಕ್ಷರು, ಸದಸ್ಯರು, ಶಿಕ್ಷಕ ವೃಂದದವರು ಹಾಜರಿದ್ದರು. ಸಭೆಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಜೆ. ಬಿಪಿನ್ ಸ್ವಾಗತಿಸಿ, ವಂದಿಸಿದರು.