ನಾಪೋಕ್ಲು, ಡಿ. 26: ನಾಪೋಕ್ಲು ಲಯನ್ಸ್ ಕ್ಲಬ್‍ಗೆ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮ ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ಜರುಗಿತು. ಸಭೆಯಲ್ಲಿ ವಲಯಾಧ್ಯಕ್ಷ ಎ.ವಿ. ಕೋಟಿ ಉಪಸ್ಥಿತರಿದ್ದು, ಲಯನ್ಸ್ ಕ್ಲಬ್‍ನ ಕಾರ್ಯಚಟುವಟಿಕೆ ಹಾಗೂ ಧ್ಯೇಯೋದ್ದೇಶಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿ, ಸಂಸ್ಥೆಯ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಲಯನ್ಸ್ ಸಂಸ್ಥೆ ಅಧ್ಯಕ್ಷ ಮುಕ್ಕಾಟಿರ ವಿನಯ್ ವಹಿಸಿದ್ದ ವೇದಿಕೆಯಲ್ಲಿ ಜೆ.ಆರ್.ಆರ್. ಕೇಟೋಳಿರ ರತ್ನಾ ಚರ್ಮಣ, ವಲಯ ಅಧ್ಯಕ್ಷರಾದ ಸೋಮವಾರಪೇಟೆಯ ಮಹೇಶ್, ಸ್ಥಳೀಯ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಕನ್ನಂಬೀರ ಸುಧಿ ತಿಮ್ಮಯ್ಯ, ಖಜಾಂಚಿ ಬೊಳ್ಳಂಡ ಶ್ಯಾಂ ಬಿದ್ದಪ್ಪ ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ ಅಧ್ಯಕ್ಷ ಮುಕ್ಕಾಟಿರ ವಿನಯ್ ಸ್ವಾಗತಿಸಿ, ಕನ್ನಂಬೀರ ಸುಧಿ ತಿಮ್ಮಯ್ಯ ವಂದಿಸಿದರು.