ಮಡಿಕೇರಿ, ಡಿ. 26: ನಗರದ ಕೆಳಗಿನ ಕೊಡಗು ಗೌಡ ಸಮಾಜದಲ್ಲಿ 2019 ರ ಜನವರಿ 3 ಮತ್ತು 4 ರಂದು ಮಿಲಿಟರಿ (ಡಿಫೆನ್ಸ್ ಸಿವಿಲಿಯನ್‍ಗಳು ಸೇರಿದಂತೆ) ಪಿಂಚಣಿಗೆ ಸಂಬಂಧಿಸಿದ ಯಾವದೇ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಒದಗಿಸಲು ರಕ್ಷಾ (ಲೇಖಾ) ಪ್ರಾಧಾನ ನಿಯಂತ್ರಣ (ಪಿಂಚಣಿ) ಕಾರ್ಯಾಲಯ ಅಲ್ಲಹಾಬಾದ್ ಅವರು ಪಿಂಚಣಿ ಅದಾಲತ್ ಆಯೋಜಿಸಿದ್ದಾರೆ.

ಮಡಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರು ಇದರ ಸದುಪಯೋಗವನ್ನು ಪಡೆಯಲು ಮುಂಚಿತವಾಗಿ ತಮ್ಮ ಅಹವಾಲುಗಳನ್ನು ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಬರೆದು (ದ್ವಿಪ್ರತಿಯಲ್ಲಿ) ಎಸ್.ಕೆ. ಶರ್ಮ ಪಿಂಚಣಿ ಅದಾಲತ್ ಅಧಿಕಾರಿ ರಕ್ಷ ಲೇಖಾ ಪ್ರಧಾನ ನಿಯಂತ್ರಕ (ಪಿಂಚಣಿ) ದ್ರೌಪದೀ ಘಾಟ್

ಅಲಹಬಾದ್-211014 ಇವರಿಗೆ ತಮ್ಮ ಮಿಲಿಟರಿ ನಂಬರ್ ರ್ಯಾಂಕ್, ವೃಂದ (ಗ್ರೂಪ್) ಪಿ.ಪಿ.ಒ ನಂಬರ್ ಬ್ಯಾಂಕ್/ಖಜಾನೆ ಖಾತೆಗಳ ಸಂಪೂರ್ಣ ವಿವರ ಮತ್ತು ಅಭಿಲೇಖ ಕಾರ್ಯಾಲಯದ ಸಂಪೂರ್ಣ ವಿಳಾಸ ಅಲ್ಲದೇ ಸೇವೆಗೆ ಸೇರಿದ ಮತ್ತು ನಿವೃತ್ತಿ ಹೊಂದಿದ ದಿನಾಂಕಗಳನ್ನು ಸರಿಯಾಗಿ ನಮೂದಿಸಿ ತ್ವರಿತವಾಗಿ ಅರ್ಜಿ ಕಳುಹಿಸಿಕೊಡತಕ್ಕದ್ದು. ಅರ್ಜಿಯಲ್ಲಿ ತಮ್ಮ ವಿಳಾಸ ಮತ್ತು ದೂರವಾಣಿ, ಮೊಬೈಲ್ ಸಂಖ್ಯೆಯನ್ನು ನಮೂದಿಸಿರಬೇಕು.

ಅಲ್ಲದೇ ತಮ್ಮ ಸಮಸ್ಯೆಗಳ ಬಗ್ಗೆ ಮಿಂಚಂಚೆ/ವೆಬ್‍ಸೈಟ್ ಛಿಜಚಿ-ಚಿಟbಜ@.ಟಿiಛಿ.iಟಿ, Peಟಿsioಟಿಚಿಜಚಿಟಚಿಣ.ಜಚಿಜ@ಟಿiಛಿ.iಟಿ, ತಿeb-siಣe-hಣಣಠಿ://ಠಿಛಿಜಚಿಠಿeಟಿsioಟಿ.ಟಿiಛಿ.iಟಿ ಬಳಸಿಕೊಳ್ಳಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕಿ ಗೀತಾ ತಿಳಿಸಿದ್ದಾರೆ.