ಮಡಿಕೇರಿ, ಡಿ. 26: 2018-19ನೇ ಸಾಲಿನ 14 ಮತ್ತು 17 ವಯಸ್ಸಿನ ಬಾಲಕರ ಮತ್ತು ಬಾಲಕಿ ಯರ ಜಿಲ್ಲಾಮಟ್ಟದ ವಿಶೇಷ ಚೇತನರ ಕ್ರೀಡಾಕೂಟ ಆ. 27 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಮ್ಯಾನ್ಸ್ ಕಾಂಪೌಂಡ್ ಮಡಿಕೇರಿಯಲ್ಲಿ ನಡೆಯಲಿದೆ. ಬುದ್ಧಿಮಾಂದ್ಯತೆಯುಳ್ಳ ಮಕ್ಕಳ ಹೊರತುಪಡಿಸಿ, ಉಳಿದೆಲ್ಲಾ 14 ಮತ್ತು 17 ವಯಸ್ಸಿನ ವಿಶೇಷ ಚೇತನ ಮಕ್ಕಳು ಭಾಗವಹಿಸ ಬಹುದಾಗಿದೆ. ಕ್ರೀಡಾಕೂಟಕ್ಕೆ ಭಾಗವಹಿಸುವ ಕ್ರೀಡಾಪಟುಗಳು ವಿಶೇಷ ಚೇತನರ ಪ್ರಮಾಣ ಪತ್ರಗಳನ್ನು ಹೊಂದಿರತಕ್ಕದ್ದು. ಒಬ್ಬ ವಿದ್ಯಾರ್ಥಿ 2 ಕ್ರೀಡೆಗಳಲ್ಲಿ ಭಾಗವಹಿಸಬಹುದು. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಅವಕಾಶವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.