ಶ್ರೀಮಂಗಲ, ಡಿ. 26: ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾ ಸಂಸ್ಥೆಯಲ್ಲಿ ಯುಕೋ ಸಂಘಟನೆಯ ಕೊಡವ ಸಾಂಸ್ಕøತಿಕ ಸಮ್ಮಿಲನದ ಕೊಡವ ಮಂದ್ ನಮ್ಮೆಯಲ್ಲಿ ನಡೆದ ಸಾಂಸ್ಕøತಿಕ ಹಾಗೂ ಜಾನಪದ ಕಲಾ ಪೈಪೋಟಿಯಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಮಂದ್ ತಂಡ ಗಟ್ಟಿ ಮಂದ್ ಪ್ರಶಸ್ತಿಗೆ ಆಯ್ಕೆ ಯಾಗುವದರ ಮೂಲಕ ರೂ. 25 ಸಾವಿರ ನಗದು ಹಾಗೂ ಪಾರಿತೋಷ ಕವನ್ನು ತನ್ನದಾಗಿಸಿಕೊಂಡಿತು.
ಕಾರ್ಯಕ್ರಮದಲ್ಲಿ ಕೊಡವ ಸಂಸ್ಕøತಿಯಲ್ಲಿ ಪುರುಷರ ಮೀಸೆಗೆ ಹಾಗೂ ಮಹಿಳೆರ ಜಡೆ ಬಿಡುವ ಸಂಸ್ಕøತಿಗೆ ಬಹಳಷ್ಟು ಪ್ರಾಮುಖ್ಯತೆ ಇದ್ದು ಇದು ಸಂಸ್ಕøತಿಯ ದ್ಯೋತಕ ವಾಗಿದೆ. ಇದನ್ನು ಪ್ರೋತ್ಸಾಯಿಸುವ ನಿಟ್ಟಿನಲ್ಲಿ ಪುರುಷರಿಗೆ ‘ಕೊಂಬೋ ಮೀಸೆರ ಬಂಬೋ’ ಹಾಗೂ ಮಹಿಳೆಯರಿಗೆ ‘ಬೋಜಿ ಜಡೆರ ಬೋಜಕ್ಕ’ ಮತ್ತು ಯುವತಿಯರಿಗೆ ‘ಬೋಜಿ ಜಡೆರ ಜೋಜಿ ಮೋವ’ ಸ್ಪರ್ಧೆ ಗಮನ ಸೆಳೆಯಿತು. ಪುರುಷರು ತಮ್ಮ ಪೌರುಷದ ಸಂಕೇತವಾದ ಮೀಸೆಯನ್ನು ತೀರುವುತ್ತಾ ಸ್ಪರ್ಧೆಯಲ್ಲಿ ಹೆಮ್ಮೆಯಿಂದ ಪಾಲ್ಗೊಂಡರು. ಮಹಿಳೆಯರು ಮತ್ತು ಯುವತಿಯರು ತಮ್ಮ ಸೌಂದರ್ಯದ ಪ್ರತೀಕವಾದ ನೀಳಜಡೆಯನ್ನು ಸ್ಪರ್ಧೆಯಲ್ಲಿ ಪ್ರದರ್ಶಿಸಿ ಗಮನ ಸೆಳೆದರು.
ಕೊಂಬೋ ಮೀಸೆ ಬಂಬೋ ಸ್ಪರ್ದೆಯಲ್ಲಿ: ಪ್ರಥಮ ಸ್ಥಾನವನ್ನು ಕಾಯಪಂಡ ಅಪ್ಪಣ್ಣ, ದ್ವಿತೀಯ ಚೆಪ್ಪುಡಿರ ಸುಜುಕರುಂಬಯ್ಯ, ತೃತಿಯ ತೀತಿರ ಕುಟ್ಟಪ್ಪ ಪಡೆದರು.
ಬೋಜಿಜಡೆಯ ಬೋಜಕ್ಕ ಸ್ಪರ್ದೆಯಲ್ಲಿ : ಬೊಟ್ಟೋಳಂಡ ನಳಿನಿ (ಪ್ರ), ಮಲ್ಲಮಾಡ ಶ್ಯಾಮಲ (ದ್ವಿ), ಮಲಚೀರ ಚೋಂದಮ್ಮ (ತೃ) ಬಹುಮಾನ ಪಡೆದರು.
ಬೋಜಿ ಜಡೆರ ಬೋಜಿ ಮೋವ: ಕೊಳುವಂಡ ತೇಜು ಚಿಣ್ಣಪ್ಪ (ಪ್ರ), ನಾಮೆರ ಯಜ್ಞ (ದ್ವಿ), ಕಂಬಿರಂಡ ಸ್ನೇಹ (ತೃ) ಪಡೆದುಕೊಂಡರು.
ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ದೆಯಲ್ಲಿ: ಪುರುಷರ ವಿಭಾಗದಲ್ಲಿ ಕುಪ್ಪುಡಿರ ಪ್ರಖ್ಯಾತ್ ಚಿಣ್ಣಪ್ಪ (ಪ್ರ), ಕನ್ನಿಕಂಡ ಶ್ಯಾಂ (ದ್ವಿ), ಬಡುವಂಡ ಮುತ್ತಪ್ಪ(ತೃ) ಸ್ಥಾನ ಪಡೆದರು. ಮಹಿಳೆರ ವಿಭಾಗದಲ್ಲಿ: ಸಹೋದರಿಯರಾದ ಮಣವಟ್ಟಿರ ನಿಲೀಮ (ಪ್ರ), ಮಣವಟ್ಟಿರ ನಿಲ್ಕಾ (ದ್ವಿ), ಸ್ಥಾನ ಪಡೆಯುವ ಮೂಲಕ ಗಮನ ಸೆಳೆದರು. ಕಳೆದ ವರ್ಷದ ಮಂದ್ ನಮ್ಮೆಯಲ್ಲಿಯೂ ಇವರು ಪ್ರಥಮ 2 ಸ್ಥಾನ ಪಡೆದಿದ್ದರು. ಚೆಟ್ಟಿಮಾಡ ಪೂರ್ಣಿಮ (ತೃ) ಬಹುಮಾನ ಪಡೆದರು.
ಬಾಳೋಪಾಟ್: ಮಕ್ಕಂದೂರು ಉಮ್ಮೇಟಿ ಮಂದ್ (ಪ್ರ), ನಾಪೋಕ್ಲು ನೂರಂಬಡ ಬಿದ್ದಾಂಟಡ ವಾಡೆ(ದ್ವಿ).
ಪುತ್ತರಿ ಕೋಲಾಟ್: ಪೊನ್ನಂಪೇಟೆ ಕೊಡವ ಸಮಾಜ ಮಂದ್ (ಪ್ರ), ಹುದಿಕೇರಿಯ ಮಡಕೋಡ್ ಮಂದ್ (ದ್ವಿ), ನಾಪೋಕ್ಲು ನೂರಂಬಡ ಬಿದ್ದಾಟಂಡ ವಾಡೆ (ತೃ).
ಬೊಳಕಾಟ್:ಮಕ್ಕಂದೂರು ಉಮ್ಮೇಟಿ ಮಂದ್ (ಪ್ರ), ಹುದಿಕೇರಿಯ ಮಡಕೋಡ್ ಮಂದ್ (ದ್ವಿ), ಹೈಸೂಡ್ಲೂರು ಪಯ್ಯಡ ಮಂದ್ (ತೃ).
ಉಮ್ಮತ್ತಾಟ್: ಪೊನ್ನಂಪೇಟೆ ಕೊಡವ ಸಮಾಜ ಮಂದ್ (ಪ್ರ),ಮಡಿಕೇರಿಯ ಕೊಡವ ಸಮಾಜ ಮಂದ್(ದ್ವಿ), ಹೈಸೂಡ್ಲೂರು ಪಯ್ಯಡ ಮಂದ್(ತೃ).
ಪರೆಯಕಳಿ: ನಾಪೋಕ್ಲು ನೂರಂಬಡ ಬಿದ್ದಾಟಂಡ ವಾಡೆ (ದ್ವಿ), ಆರ್ಜಿ ಊರ್ ಮಂದ್ ಮತ್ತು ಸಾಯಿ ಶಂಕರ ಮಂದ್ ಜಂಟಿಯಾಗಿ ತೃತೀಯ ಸ್ಥಾನವನ್ನು ಹಂಚಿ ಕೊಂಡರು.
ವಾಲಗತ್ತಾಟ್ ಬಾಲಕಿಯರ ವಿಭಾಗದಲ್ಲಿ: ಅಯ್ಯಕುಟ್ಟಿರ ಶರ್ಮಅಪ್ಪಣ್ಣ (ಪ್ರ) ಅಜ್ಜಮಕ್ಕಡ ಕಾವೇರಮ್ಮ (ದ್ವಿ), ಅಜ್ಜಮಕ್ಕಡ ಪೂವಮ್ಮ (ತೃ),
ಮಹಿಳೆಯರ ವಿಭಾಗ: ಸೋಮೆಯಂಡ ಮೋಕ್ಷ ಗಣಪತಿ (ಪ್ರ), ಮಂಡೇಪಂಡ ದಿವ್ಯಜೀವನ್ (ದ್ವಿ). ಮುಕ್ಕಾಟಿರ ದೇವಿಕಪ್ರಭು (ತೃ).
ಬಾಲಕರ ವಿಭಾಗ: ಪಳೆಯಂಡ ಮೊಣ್ಣಪ್ಪ (ದ್ವಿ), ಕುಟ್ಟಂಡಅಯ್ಯಪ್ಪ (ತೃ)
ಪುರುಷರ ವಿಭಾಗದಲ್ಲಿ: ಕಬ್ಬಚ್ಚಿರ ಮಾಚಯ್ಯ (ಪ್ರ), ಕೊಣಿಯಂಡ ಮಾದಯ್ಯ (ದ್ವಿ), ಚಂಗುಲಂಡ ಬಿದ್ದಪ್ಪ (ತೃ) ಸ್ಥಾನ ಪಡೆದುಕೊಂಡರು.
ಕಪ್ಪೆಯಾಟ್: ಕುಪ್ಪಣಮಾಡ ನಿರನ್ ಕಾವೇರಪ್ಪ (ಪ್ರ), ಅಯ್ಯಕುಟ್ಟಿರ ಅಶೋಕ್‍ತಿಮ್ಮಯ್ಯ (ದ್ವಿ), ಕರ್ತಮಾಡ ಅನೂಪ್ ಅಯ್ಯಪ್ಪ (ತೃ).
ವಿಜೇತರಿಗೆ ಪಾರಿತೋಷಕ ಹಾಗೂ ನಗದು ಬಹುಮಾನವನ್ನು ಅರ್ಜುನ ಪ್ರಶಸ್ತಿ ಪುರಸ್ಕøತ ಅಂತರಾಷ್ಟ್ರೀಯ ಅಥ್ಲೀಟ್ ತೀತಮಾಡ ಅರ್ಜುನ್ ದೇವಯ್ಯ, ಸಾಯಿಶಂಕರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೋಳೆರ ಝರುಗಣಪತಿ, ಕಿರ್‍ನಾಲ್‍ನಾಡ್ ನಾಡ್ ತಕ್ಕರಾದ ಚೆಪ್ಪುಡಿರ ಪೊನ್ನಪ್ಪ, ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ, ದಾನಿಗಳಾದ ಕೊಂಡಿರ ಪ್ರಥ್ವೀ ಮುತ್ತಣ್ಣ, ಕೊಂಡಿರ ನಾಣಯ್ಯ, ಕೊಂಡಿರ ದಮಯಂತಿ, ಅರಮಣಮಾಡ ಸತೀಶ್ ದೇವಯ್ಯ ಅವರು ವಿತರಿಸಿದರು.