ಸುಂಟಿಕೊಪ್ಪ, ಡಿ. 26: ಕೆಲವು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದವನು ಎನ್ನಲಾದ ಬೀಫ್‍ಲಾಲ್ ಲಾಮ ಎಂಬಾತ ಸುಂಟಿಕೊಪ್ಪ ನಗರದ ತಾಜ್ ಹೊಟೇಲ್‍ನಲ್ಲಿ ಕಾರ್ಮಿಕನಾಗಿ ದುಡಿಯುತ್ತ್ತಿದ್ದನು. ನಂತರದ ದಿನಗಳಲ್ಲಿ ಹೊಟೇಲ್ ಮುಚ್ಚಲ್ಪಟ್ಟಿತು. ಇದರಿಂದ ಕೆಲಸವಿಲ್ಲದ ಈತ ಕುಡಿತಕ್ಕೆ ದಾಸನಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತ ಮಾರುಕಟ್ಟೆಯಲ್ಲಿ ವಾಸವಾಗಿದ್ದ. ಈ ಮಾರುಕಟ್ಟೆಯಲ್ಲಿ ಕಳೆದ ರಾತ್ರಿ ಸಾವನ್ನಪ್ಪಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಯಾರು ವಾರಸುದಾರರು ಇಲ್ಲದ ಕಾರಣ ಗ್ರಾಮ ಪಂಚಾಯಿತಿಯವರು ಸಾರ್ವಜನಿಕರು ಸೇರಿ ಈತನ ಶವ ಸಂಸ್ಕಾರವನ್ನು ಮಾದಾಪುರ ರಸ್ತೆಯ ಮುಕ್ತಿ ಧಾಮದಲ್ಲಿ ನೆರವೇರಿಸಿದರು. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್. ಗ್ರಾಮಸ್ಥರಾದ ಇಬ್ರಾಹಿಂ (ಬಾಪು) ರಸಾಕ್, ಕೊಳಂಬೆ ಸುಭಾಸ್, ಶಾಜೀರ್, ಸಲೀಂ, ರಫೀಕ್, ಗದ್ದೆಹಳ್ಳ ಬಾವುಕ, ರಶೀದ್, ಆಟೋಚಂದ್ರ, ಕುಂಟಿ, ಶಿವ್‍ಕುಮಾರ್, ರೋಷನ್, ಲೋಡ್ರಸ್‍ಬಾಪು ಮೆಕ್ಯಾನಿಕ್ ಬಾಷ, ಸುಬೇರ್, ರಶೀದ್ ಪಂಪ್ ಹೌಸ್, ಸಲೀಂ,ಆಶಿಫ್, ಸಿ.ಇಬ್ರಾಹಿಂ, ಎಸ್.ಎಮ್. ಅಬ್ದುಲಾ ಹಾಜರಿದ್ದರು.