ಮಡಿಕೇರಿ, ಡಿ. 26: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಮಡಿಕೇರಿ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು 114ನೇ ಜನ್ಮದಿನ ಆಚರಣೆ ಮತ್ತು ವಿಶ್ವಮಾನವ ಸಂದೇಶ ವಿಚಾರವಾಗಿ ಕವಿಗೋಷ್ಠಿಯು ತಾ. 29 ರಂದು ಮಡಿಕೇರಿಯ ಕೊಡಗು ಪತ್ರಿಕಾ ಭವನ ಸಭಾಂಗಣದಲ್ಲಿ ಅಪರಾಹ್ನ 2 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊ.ಜಿ.ಲೇ.ಕ. ಬಳಗದ ಅಧ್ಯಕ್ಷ ಎಂ.ಪಿ. ಕೇಶವಕಾಮತ್, ವಹಿಸಲಿದ್ದು ಕಾರ್ಯಕ್ರಮದ ಉಧ್ಘಾಟನೆಯನ್ನು ಹಿರಿಯ ನಾಗರಿಕ ವೇದಿಕೆಯ ಮಾಜಿ ಅಧ್ಯಕ್ಷ ಜಿ.ಟಿ. ರಾಘವೇಂದ್ರ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಮೆನೇಜಿಂಗ್ ಟ್ರಸ್ಟಿ, ಬಿ.ಎನ್. ಮನುಶೆಣೈ, ಕೊ.ಜಿ.ಲೇ.ಕ. ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫರ್ಡ್ ಕ್ರಾಸ್ತಾ ಪಾಲ್ಗೊಳ್ಳಲಿದ್ದು, ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ ಬಿ.ಎ. ಷಂಶುದ್ದೀನ್, ವಹಿಸಲಿದ್ದಾರೆ. ಕುವೆಂಪು ಬಗ್ಗೆ, ಸೋಮವಾರಪೇಟೆಯ ಸಾಹಿತಿ ಕಾಜೂರು ಸತೀಶ್ ಉಪನ್ಯಾಸ ನೀಡಲಿದ್ದಾರೆ.

ಕವಿಗೋಷ್ಠಿಯಲ್ಲಿ ನಾಗೇಶ್ ಕಾಲೂರು, ಪೂ.ರ. ಶ್ರೀನಿವಾಸ್, ಕಿಗ್ಗಾಲು ಗಿರೀಶ್, ಕೆ. ಜಯಲಕ್ಷ್ಮಿ, ಬಿ.ಆರ್. ಜೋಯಪ್ಪ, ಕೆ.ಆರ್. ವಿದ್ಯಾಧರ್, ಸುಕುಮರ್ ತೊರೆನೂರು, ಎಂ.ಎ. ರುಬೀನಾ, ಎನ್.ಕೆ. ಮಾಲಾದೇವಿ, ಡಾ. ಜೆ. ಸೋಮಣ್ಣ, ಲೀಲಾಕುಮಾರಿ ತೊಡಿಕಾನ, ವಿ.ಎನ್. ರಂಜಿತಾ, ಪುಷ್ಪಲತಾ ಶಿವಪ್ಪ, ವಿಮಲಾ ದಶರಥ್, ನಾ. ಕನ್ನಡಿಗ, ಸುನಿತಾ ಲೋಕೇಶ್, ಸುನಿತಾ ಪ್ರೀತು ಭಾಗವಹಿಸಲಿದ್ದಾರೆ.