ಶನಿವಾರಸಂತೆ, ಡಿ. 26: ಆಲೂರು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಮಾಲಂಬಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ 2 ಲಾರಿಗಳಲ್ಲಿ (ಕೆ.ಎಲ್. 13 ಎಂ. 5193 ಕೆ.ಎಲ್. 58 ಜೆ. 6340) ಸರಕಾರದ ಆದೇಶ ಉಲ್ಲಂಘಿಸಿ ಕೇರಳ ರಾಜ್ಯಕ್ಕೆ ಒಳಹುಲ್ಲು ಸಾಗಾಟ ಮಾಡುತ್ತಿದ್ದಾಗ, ಕಂದಾಯ ಇಲಾಖೆಯ ವಿ.ಆರ್. ತಿಮ್ಮಯ್ಯ, ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಹಾಗೂ ಸಿಬ್ಬಂದಿ ಲಾರಿಗಳನ್ನು, ಚಾಲಕರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.ಚಾಲಕರುಗಳಾದ ಕೇರಳ ರಾಜ್ಯದ ಪಾನೂರು ಗ್ರಾಮದ ಕೆ. ಸೋಮೇಶ್ ಹಾಗೂ ಕೂತುಪರಂಬು ಗ್ರಾಮದ ಪ್ರೇಮರಾಜನ್ ಎಂಬವರುಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಾರ್ಯಾ ಚರಣೆಯಲ್ಲಿ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಸಿಬ್ಬಂದಿಗಳಾದ ಪ್ರದೀಪ್‍ಕುಮಾರ್, ಬೋಪಣ್ಣ, ಹರೀಶ್, ಸಂತೋಷ್, ಶಫೀರ್, ಪ್ರಶಾಂತ್‍ಗೌಡ, ವಿನಯಕುಮಾರ್ ಪಾಲ್ಗೊಂಡಿದ್ದರು.