ವೀರಾಜಪೇಟೆ, ಡಿ. 26: ವೀರಾಜಪೇಟೆ ಪಶು ವೈದ್ಯಕೀಯ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಶಾಸಕ ಕೆ.ಜಿ. ಬೋಪಯ್ಯ ಇಂದು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಸುಮಾರು ರೂ. 27.90 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಆಸ್ಪತ್ರೆಯಲ್ಲಿ ಪಶು ವೈದ್ಯಕೀಯ ತಪಾಸಣಾ ಕೇಂದ್ರ, ಔಷಧಿ ದಾಸ್ತಾನು ಕೊಠಡಿ, ಉಗ್ರಾಣ, ಉಪನಿರ್ದೇಶಕರ ಕೊಠಡಿಗಳು ಸೇರಿವೆ. ಜಿಲ್ಲೆಯಲ್ಲಿ ಅನೇಕ ಪಶು ವೈದ್ಯಕಿಯ ಆಸ್ಪತ್ರೆಗಳು ಶಿಥಿಲಾವಸ್ಥೆಗೆ ತಲಪಿರುವದರಿಂದ ಇಲಾಖೆಗಳ ಮೂಲಕ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. (ಮೊದಲ ಪುಟದಿಂದ) ಈ ಪಶು ವೈದ್ಯಕೀಯ ಆಸ್ಪತ್ರೆಗಳ ನಿರ್ಮಾಣಕ್ಕಾಗಿ 4 ವರ್ಷಗಳ ಹಿಂದೆಯೇ ಯೋಜನಾ ವೆಚ್ಚ ಸಿದ್ಧಪಡಿಸಲಾಗಿತ್ತು. ತಾಲೂಕಿನ ಶ್ರೀಮಂಗಲ, ಬಿರುನಾಣಿ ಮಡಿಕೇರಿ ತಾಲೂಕಿನ ಕರಿಕೆ, ಚೆಂಬು ಗ್ರಾಮಗಳಲ್ಲಿ ನೂತನ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ. ಗೋಣಿಕೊಪ್ಪಲು ಹಾಗೂ ಅಮ್ಮತ್ತಿ ಆಸ್ಪತ್ರೆಗಳ ಕಾವiಗಾರಿ ಬಹುತೇಕ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧಗೊಂಡಿದೆ ಎಂದರು.
ಜಿ.ಪಂ. ಸದಸ್ಯ ಅಚ್ಚಪಂಡ ಮಹೇೀಶ್ ಗಣಪತಿ, ಮೂಕೊಂಡ ಶಶಿ ಸುಬ್ರಮಣಿ, ತಾ.ಪಂ. ಸದಸ್ಯೆ ಸೀತಮ್ಮ, ಪ್ರಮುಖರಾದ ಮಧು ದೇವಯ್ಯ, ಡಾ. ತಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.