ಸುಂಟಿಕೊಪ್ಪ, ಡಿ. 25: ಸಂತ ಅಂತೋಣಿ ದೇವಾಲಯದಲ್ಲಿ ಸಡಗರ ಸಂಭ್ರಮದಿಂದ ಕ್ರೈಸ್ತ ಬಾಂಧವರು ಕ್ರಿಸ್ತ ಜಯಂತಿಯನ್ನು ಆಚರಿಸಿದರು.
ತಾ.24 ರಂದು ಸಂತ ಅಂತೋಣಿ ದೇವಾಲಯದಲ್ಲಿ ಮಧ್ಯರಾತ್ರಿ ಯೇಸುವಿನ ಜನನದ ಸ್ಥಳವಾದ ಗೋದಲಿಯಲ್ಲಿ ಬಾಲಯೇಸುವನ್ನು ಪ್ರತಿಷ್ಠಾಪಿಸಿ ನಂತರ ವಿಶೇಷ ಗಾಯನ ಬಲಿಪೂಜೆಯನ್ನು ಧರ್ಮಗುರು ಎಡ್ವರ್ಡ್ ವಿಲಿಯಂ ಸಾಲ್ಡಾನಾ ಅವರು ನೆರವೇರಿಸಿದರು. ಕ್ರಿಸ್ತಜನ್ಮದಿನದ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಆಗಸ್ಟ್ ತಿಂಗಳಿನಲ್ಲಿ ಕೊಡಗಿನಲ್ಲಿ ಸಂಭವಿಸಿದ ಪಕೃತಿ ವಿಕೋಪದ ನೈಜ ಚಿತ್ರಣವನ್ನು ಸಾಕ್ಷೀಕರಿಸುವ ಗೋದಲಿಗಳನ್ನು ನಿರ್ಮಿಸುವ ಸ್ಪರ್ಧೆಯನ್ನು ವಿವಿಧ ಸಮುದಾಂiÀ ುಗಳಿಗೆ ಏರ್ಪಡಿಸಲಾಗಿದ್ದು, ಅದನ್ನು ದೇವಾಲಯದ ಆವರಣದಲ್ಲಿ ವೀಕ್ಷಣೆಗೆ ಇಡಲಾಗಿದೆ.
ಕೂಡಿಗೆ : ಇಲ್ಲಿನ ಪವಿತ್ರ ತಿರುಕುಟುಂಬ ದೇವಾಲಯದಲ್ಲಿ ಕ್ರಿಸ್‍ಮಸ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಅಂಗವಾಗಿ ರಾತ್ರಿ ಕ್ರಿಸ್‍ಮಸ್ ಗಾಯನ, ಬಲಿಪೊಜೆ ನಡೆದವು. ಹಬ್ಬದಲ್ಲಿ ಕ್ರಿಸ್ಮಸ್ ಸಂದೇಶ ಹಾಗೂ ಅರ್ಶೀವಚನವನ್ನು ಚರ್ಚ್‍ನ ಧರ್ಮಗುರು ಜಾರ್ಜ್ ಡಿ. ಕೊನ್ಸ್ ನೀಡಿದರು.
ಒಡೆಯನಪುರ : ಸಮೀಪದ ಗೋಪಾಲಪುರ ಸಂತ ಅಂಥೋಣಿ ಚರ್ಚ್‍ನಲ್ಲಿ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಗೋಪಾಲಪುರ, ಒಡೆಯನಪುರ, ಶನಿವಾರಸಂತೆ, ಈಚಲಬೀಡು, ಕೊಡ್ಲಿಪೇಟೆ, ಬೀಟೆಕಟ್ಟೆ, ಜಾಗೇನಹಳ್ಳಿ ಮುಂತಾದ ಕಡೆಗಳಲ್ಲಿ ನೆಲೆಸಿರುವ ಕ್ರೈಸ್ತ ಸಮುದಾಯ ಬಾಂಧವರು ಪ್ರಾರ್ಥನಾ ಕೂಟದಲ್ಲಿ ಪಾಲ್ಗೊಂಡಿದ್ದರು. ಸಂಜೆ ರಸಮಂಜರಿ ಕಾರ್ಯಕ್ರಮ, ಪುರುಷ, ಮಹಿಳೆಯರು
ಕೊಡಗು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ತಾ. 22 ರಂದು ಸಂಜೆ ನಗರದ ಪೊಲೀಸ್ ಮೈದಾನದಲ್ಲಿ ಸಂಭ್ರಮದ ತೆರೆ ಬಿದ್ದಿತು. ಕ್ರೀಡೆಯ ನಡುವೆ ಪೊಲೀಸರಿಂದ ಹಾಗೂ ಅವರ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮಗಳೂ ಮೂಡಿ ಬಂದವು. ಇದರ ನಡುವೆ ಕ್ರಿಸ್‍ಮಸ್ ಹಬ್ಬವನ್ನೂ ಸ್ವಾಗತಿಸಲಾಯಿತು. ಸಾಂತಾಕ್ಲಾಸ್ ವೇಷದೊಂದಿಗೆ ಒಂದಿಬ್ಬರು ಪೊಲೀಸರು ನೆರೆದಿದ್ದವರಿಗೆ ಕ್ರಿಸ್‍ಮಸ್‍ನ ಮುದ ನೀಡಿದರು. ಇವರೊಂದಿಗೆ ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರ ಪುತ್ರಿ ಪೆಮ್ಮಚಂಡ ಪೂರ್ಣಾ ಅನೂಪ್ ಹೊಸ ಉಡುಗೆಯೊಂದಿಗೆ ಕೈಯ್ಯಲ್ಲಿ ಗುಲಾಬಿ ಹಿಡಿದು ಜಿಲ್ಲಾಧಿಕಾರಿ ಶ್ರೀವಿದ್ಯಾ, ಐಜಿ ಶರತ್‍ಚಂದ್ರ, ಎಸ್‍ಪಿ ಸುಮನ್ ಡಿ.ಪಿ. ಅವರುಗಳಿಗೆ ಸ್ವಾಗತ ಕೋರಿ ರಂಜಿಸಿದ ಪರಿಯಿದು.(ಮೊದಲ ಪುಟದಿಂದ) ಹಾಗೂ ಮಕ್ಕಳಿಗಾಗಿ ವಿವಿಧ ಮನರಂಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭ ಚರ್ಚ್‍ನ ಧರ್ಮಗುರು ಡೇವಿಡ್ ಸಗಾಯಿ ರಾಜ್ ಇದ್ದರು.
ವೀರಾಜಪೇಟೆ: ಪರಸ್ಪರ ಗೌರವ ಹೊಂದಾಣಿಕೆಯಿಂದ ಜೀವನ ನಡೆಸಿದರೆ ಮಾತ್ರ ಜಗತ್ತಿನಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ ಎಂದು ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ರೆ.ಫಾ. ಮದಲೈ ಮುತ್ತು ಅವರು ತಮ್ಮ ಕ್ರಿಸ್‍ಮಸ್ ಸಂದೇಶದಲ್ಲಿ ಹೇಳಿದರು.
ಸಂತ ಅನ್ನಮ್ಮ ದೇವಾಲಯದಲ್ಲಿ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಮಧ್ಯರಾತ್ರಿ ಯೇಸುವಿನ ಜನನವನ್ನು ಸಾರುವ ಬಾಲಯೇಸುವಿನ ಮೂರ್ತಿಯನ್ನು ಗೋದಲಿಯಲ್ಲಿ ಮಲಗಿಸಿದ ಬಳಿಕ ಅವರು ಕ್ರಿಸ್‍ಮಸ್ ಸಂದೇಶವನ್ನು ನೀಡಿದರು.
ಈ ಸಂದರ್ಭ ಧರ್ಮಗುರು ಗಳಾದ ರೆ.ಫಾ. ಐಸಾಕ್ ರತ್ನಾಕರ್, ರೆ.ಫಾ. ರೋಶನ್ ಬಾಬು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.
ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದಲ್ಲಿ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ನಿನ್ನೆ ದಿನ ರಾತ್ತಿ 11ರಿಂದ 12 ಗಂಟೆಯ ಸಮಯದಲ್ಲಿ ಕ್ರಿಶ್ಚಿಯನ್ ಸಮುದಾಯದವರು ತಂಡೋಪ ತಂಡವಾಗಿ ದೇವಾಲಯಕ್ಕೆ ಆಗಮಿಸಿ ಕರೋಲ್ ಗೀತೆಗಳನ್ನು ಹಾಡುತ್ತಾ ಯೇಸುವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸೋಮವಾರಪೇಟೆ : ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಕ್ರೈಸ್ತ ಮತ ಬಾಂಧವರು ಕ್ರಿಸ್‍ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಇಲ್ಲಿನ ಜಯವೀರ ಮಾತೆ ದೇವಾಲಯದಲ್ಲಿ ನಿನ್ನೆ ರಾತ್ರಿ ಗೋದಲಿಯನ್ನು ನಿರ್ಮಿಸಿ ಬಾಲ ಯೇಸುವಿನ ಮೂರ್ತಿಯನ್ನು ಮಲಗಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಕ್ರೈಸ್ತ ಮತ ಬಾಂಧವರು ದೇವಾಲಯದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಹಬ್ಬದ ಶುಭಾಶಯವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಧರ್ಮಕೇಂದ್ರದ ಗುರುಗಳಾದ ಫಾ. ರಾಯಪ್ಪ, ಟೆನ್ನಿ ಕುರಿಯನ್ ಅವರುಗಳು ಹಬ್ಬದ ಸಂದೇಶ ನೀಡಿದರು. ದೇವಾಲಯ ಆಡಳಿತ ಮಂಡಳಿ ಸದಸ್ಯರುಗಳು ಈ ಸಂದರ್ಭ ಉಪಸ್ಥಿತರಿದ್ದರು.
ಇದರೊಂದಿಗೆ ಅಬ್ಬೂರುಕಟ್ಟೆ, ಹಟ್ಟಿಹೊಳೆ, ಗೋಪಾಲಪುರ ಚರ್ಚ್‍ಗಳಲ್ಲಿಯೂ ಕ್ರಿಸ್‍ಮಸ್ ಅಂಗವಾಗಿ ವಿಶೇಷ ಪ್ರಾರ್ಥನೆ ನಡೆಯಿತು. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿರುವ ಕ್ರೈಸ್ತಬಾಂಧವರು ತಮ್ಮ ಮನೆಗಳ ಮೇಲೆ ‘ಸ್ಟಾರ್’ಗಳನ್ನು ಅಳವಡಿಸಿದ್ದರು. ಮನೆಯ ಮುಂಭಾಗ ಸಣ್ಣ ಗೋದಲಿಗಳನ್ನು ರಚಿಸಿ ಬಾಲ ಯೇಸುವಿನ ಪ್ರಾರ್ಥನೆ ಮಾಡಿದರು. ಕೇಕ್ ಕತ್ತರಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ಕುಶಾಲನಗರ : ಕ್ರಿಸ್ಮಸ್ ಅಂಗವಾಗಿ ಸ್ಥಳೀಯ ಕ್ರೈಸ್ತ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಪಟ್ಟಣದ ಸಂತ ಸೆಬಾಸ್ಟಿಯನ್ ದೇವಾಲಯ ಮತ್ತು ಮೆಡಕ್ ಮೆಮೋರಿಯಲ್ ಚರ್ಚ್‍ನಲ್ಲಿ ಗೋದಲಿ ನಿರ್ಮಿಸಿ ಬಾಲ ಏಸುವಿನ ಆರಾಧನೆ ನಡೆಯಿತು. ದೇವಾಲಯದ ಧರ್ಮಗುರುಗಳು ಭಕ್ತರನ್ನುದ್ದೇಶಿಸಿ ಧಾರ್ಮಿಕ ಪ್ರವಚನ ನೀಡಿದರು.
ಸಂತ ಸೆಬಾಸ್ಟಿಯನ್ನರ ದೇವಾಲಯದ ಧರ್ಮಗುರು ಫಾ.ಮೈಕಲ್ ಮರಿ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿತು. ಸ್ಥಳೀಯ ಮೆಡಕ್ ಮೆಮೋರಿಯಲ್ ಚರ್ಚ್‍ನ ಧರ್ಮಗುರು ಹೇಮಚಂದ್ರ ಅವರು ಪೂಜಾ ಕಾರ್ಯಕ್ರಮ ನಡೆಸಿದರು. ನಂತರ ದಿನದ ಮಹತ್ವ ಸಾರುವ ವಿಶೇಷ ಗೀತಗಾಯನ ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
-ರಾಜು ರೈ, ನಾಗರಾಜಶೆಟ್ಟಿ, ವಿ.ಸಿ.ಸುರೇಶ್ ಒಡೆಯನಪುರ, ಡಿ.ಎಂ. ರಾಜ್‍ಕುಮಾರ್, ವಿಜಯ್‍ಹಾನಗಲ್, ಸಿಂಚು.