ಗೋಣಿಕೊಪ್ಪ ವರದಿ, ಡಿ. 24: ಕಂಗಳತ್ತ್‍ನಾಡ್‍ನ ಮಾಯಮುಡಿಯಲ್ಲಿ ಮೊದಲ ಬಾರಿಗೆ ನಡೆದ ಕೊಡವ ಮೇಳದಲ್ಲಿ ಕೊಡವ ಸಾಂಸ್ಕøತಿಕ ಕಲೆ, ಸಾಹಿತ್ಯಾ, ಅಚಾರ-ವಿಚಾರಗಳು ಅನಾವರಣಗೊಳ್ಳುವ ಮೂಲಕ ಕೊಡವ ಭಾಷಿಕರ ಸಂಗಮವಾಯಿತು. ಒಂದೇ ವೇದಿಕೆಯಲ್ಲಿ ಕೊಡವ ಭಾಷಿಕರು ಒಂದಾಗುವ ಮೂಲಕ ಒಗ್ಗಟ್ಟಿನ ಸಂದೇಶ ಸಾರಿತು. ಕೊಡವ ಸಾಂಪ್ರದಾಯಿಕ ಮೆರವಣಿಗೆ, ಗ್ರಾಮದ ಸೇವಕರಿಗೆ ಸನ್ಮಾನ, ವಿಚಾರ ಮಂಡನೆ, ಸಾಂಸ್ಕøತಿಕ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು. ಕೊಡವ ಸಾಹಿತ್ಯ ಅಕಾಡೆಮಿ, ಕಾವೇರಿ ಅಸೋಸಿಯೇಷನ್, ಗೋಣಿಕೊಪ್ಪ ಕೊಡವ ಸಮಾಜ, ಕಂಗಳತ್ತ್‍ನಾಡ್ ಮಹಿಳಾ ಸಮಾಜ ಹಾಗೂ ಕಂಗಳತ್ತ್‍ನಾಡ್ ಅಮ್ಮ ಕೊಡವ ಸಂಘದ ಸಹಯೋಗದಲ್ಲಿ ಮಾಯಮುಡಿ ಸರ್ಕಾರಿ ಪ್ರಾಥಮಿಕ ಹಾಗೂ ಪೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಕೊಡವ ಸಾಂಸ್ಕøತಿಕ ಮೇಳದಲ್ಲಿ

(ಮೊದಲ ಪುಟದಿಂದ) ಕೊಡವ ಭಾಷಾಭಿ ಮಾನಿಗಳು ಒಂದಾಗಿ ಸೇರಿ, ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಕೊಂಡಾ ಡಿದರು.

ಮಾಯಮುಡಿ ರಾಮಮಂದಿರ ದಿಂದ ಸಾಂಸ್ಕøತಿಕ ಮೆರವಣಿಗೆ ಆರಂಭಗೊಂಡು ಶಾಲಾ ಆವರಣ ದಲ್ಲಿನ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ವೇದಿಕೆವರೆಗೆ ನಡೆಯಿತು. ಕೊಡವ ಉಡುಪಿನಲ್ಲಿ ಪಾಲ್ಗೊಂಡ ಪುರುಷರು ಹಾಗೂ ಮಹಿಳೆಯರು, ಕೊಡವ ಸಂಸ್ಕøತಿಯನ್ನು ಬಿಂಬಿಸಿದರು.

ಮೆರವಣಿಗೆಗೆ ಕಾಪಳ ನೃತ್ಯ, ಕುಡಿಯರ ಕಲಾ ಪ್ರದರ್ಶನ, ಅಜ್ಜಪ್ಪ ತೆರೆ ಮೆರಗು ನೀಡಿದವು. ಶಾಲಾ ಆವರಣದಲ್ಲಿ ಮಾಯಮುಡಿ ಗ್ರಾಮದ ಮಹಿಳೆಯರು ತಳಿಯತಕ್ಕಿ ಬೊಳ್‍ಚದೊಂದಿಗೆ ಸ್ವಾಗತಿಸಿಕೊಂಡು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಮೆರವಣಿಗೆಯಲ್ಲಿದ್ದ ಕಲಾ ತಂಡಗಳು ವೇದಿಕೆಯಲ್ಲಿ ಮತ್ತೊಮ್ಮೆ ಕಲೆ ಪ್ರದರ್ಶಿಸಿದವು. ಗೋಣಿಕೊಪ್ಪ ಕೊಡವ ಸಮಾಜ ಕಾರ್ಯದರ್ಶಿ ಚೊಟ್ಟೆಯಂಡಮಾಡ ಮಾದಪ್ಪ, ರಾಮಮಂದಿರ ದೇವಸ್ಥಾನ ಸಮಿತಿ ಅಧ್ಯಕ್ಷ ಚೆಪ್ಪುಡೀರ ಪ್ರದೀಪ್ ಪೂವಯ್ಯ, ಗ್ರಾಮದ ಹಿರಿಯರು, ಅಮ್ಮಕೊಡವ ಸಂಘದ ಪ್ರತಿನಿಧಿಗಳು, ಕಾವೇರಿ ಅಸೋಸಿಯೇಷನ್ ಪ್ರಮುಖರುಗಳು, ಗೋಣಿಕೊಪ್ಪ ಕೊಡವ ಸಮಾಜ ಪ್ರಮುಖರುಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಸನ್ಮಾನ - ಗೌರವ ಅರ್ಪಣೆ

ಮಾಯಮುಡಿ ಗ್ರಾಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಏಳು ಸೇವಕರುಗಳನ್ನು ಸನ್ಮಾನಿಸ ಲಾಯಿತು. ಕೊಡವ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಚಿರಿಯಪಂಡ ರಾಜಾ ನಂಜಪ್ಪ, ನಿವೃತ್ತ ತಹಶೀಲ್ದಾರ್ ಬಾನಂಡ ಅಪ್ಪಣಮಯ್ಯ, ಸಮಾಜ ಸೇವಕ ಕಾಳಪಂಡ ಟಿಪ್ಪು ಬಿದ್ದಪ್ಪ, ಗ್ರಾಮದ ಹಿರಿಯ ಸೇವಕಿ ಚೆಪ್ಪುಡೀರ ರಾಧ ಅಚ್ಚಯ್ಯ, ಸಮಾಜ ಸೇವಕ ಚೆಪ್ಪುಡೀರ ಕಿಟ್ಟು ಅಯ್ಯಪ್ಪ, ಗ್ರಾಮದ ಮೊದಲ ಇಂಜಿನಿಯರ್ ಮಲ್ಲಂಡ ಪಿ. ದೇವಯ್ಯ, ನಿ.ಸೇನಾಧಿಕಾರಿ ಐಚೆಟಿರ ಪೊನ್ನಪ್ಪ ಇವರುಗಳು ಸನ್ಮಾನ ಸ್ವೀಕರಿಸಿದರು.

‘ಕೊಡವರು, ಕೊಡವ ಭಾಷಿಕರು ಒಂದೇ ದೇಹದಂತೆ’

ಕೊಡವ ಸಂಸ್ಕøತಿರ ಬೊಳ್‍ಚೆಕ್ ಕೊಡವ ಭಾಷಿಗರ ಕೊಡುಗೆ ವಿಷಯದಲ್ಲಿ ವಿಚಾರ ಮಂಡನೆ ಮಾಡಿದ ಹಿರಿಯ ಸಾಹಿತಿ ನಾಗೇಶ್ ಕಾಲೂರು, ಕೊಡವರು ಹಾಗೂ ಕೊಡವ ಭಾಷಿಕÀರು ಒಂದೇ ದೇಹದಂತೆ ತೊಡಗಿಕೊಂಡಿದ್ದಾರೆ ಎಂದರು.

ಕೊಡವ ಭಾಷೆ, ಸಂಸ್ಕøತಿ, ಆಚಾರ-ವಿಚಾರ ಉಳಿಯಬೇಕಾದರೆ ಕೊಡವರ ಪಾತ್ರ ಹೆಚ್ಚಿದೆ. ಕೊಡವ ಹಾಗೂ ಕೊಡವ ಭಾಷಿಕರಿಂದಲೇ ಸಂಸ್ಕøತಿ ಪೋಷಣೆಯಾಗಬೇಕಿದೆ. ಈ ನಿಟ್ಟಿನಲ್ಲಿ ಕೊಡವರೇ ಹಿರಿಯಣ್ಣನ ಸ್ಥಾನದಲ್ಲಿ ನಿಂತು ಪೋಷಣೆಗೆ ಮುಂದಾಗಬೇಕು. ಇಲ್ಲಿ ಜನಸಂಖ್ಯೆ ಆಧಾರದಲ್ಲಿ ಮೇಲು, ಕೀಳು ಎಂಬುದು ಹರಿದಾಡಬಾರದು ಎಂದರು.

ಮಹಿಳೆಯಿಂದಲೇ ಎಲ್ಲಾ ಜನಾಂಗದ ಸಂಸ್ಕøತಿ ಪೋಷಣೆ ಹೆಚ್ಚು ಸಾಧ್ಯ. ಅವರ ಉಡುಗೆ, ತೊಡುಗೆಗಳು ಎಂದಿಗೂ ಸಂಸ್ಕøತಿಯನ್ನು ಬಿಂಬಿಸುತ್ತದೆ. ಕೊಡವರ ಪತ್ತಾಕ್, ಸೀರೆ ಇಂತಹವುಗಳ ಬಳಕೆ ಹೆಚ್ಚಾಗಬೇಕು ಎಂದರು.

ಪುಸ್ತಕ ಬಿಡುಗಡೆ

ಕೊಡವ ಅಕಾಡೆಮಿ ಹೊರತಂದಿರುವ ಉಳುವಂಗಡ ಕಾವೇರಿ ಉದಯ ಬರೆದಿರುವ ಅವರ 8 ನೇ ಕೃತಿಯಾಗಿರುವ ಭೂಲೋಕತ್‍ರ ಜನ್ಮ ಹಾಗೂ ಚೊಟ್ಟೆಯಂಡಮಾಡ ಲಲಿತಾ ಕಾರ್ಯಪ್ಪ ಅವರ 9 ನೇ ಕೃತಿಯಾದ ಒರೇ ಬಳ್ಳಿರ ಪೂ ಪುಸ್ತಕ ಅನಾವರಣಗೊಳಿಸಲಾಯಿತು.

ಕೊಡವ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಮಾತನಾಡಿ, ಕೊಡವ ಭಾಷಿಕರು ಹಿಂದಿನಿಂದಲೇ ಒಂದಾಗಿ ಸಾಗುತ್ತಿದ್ದೇವೆ. ಅಜ್ಜಪ್ಪನ ಕಾಲದಲ್ಲಿ ಕೊಡವರ ಹುಟ್ಟಿನಿಂದ ಸಾವಿನವರೆಗೂ ನಡೆಯುತ್ತಿದ್ದ ಆಚರಣೆಯಲ್ಲಿ ಕೊಡವ ಭಾಷಿಕರ ಪಾತ್ರ ಹೆಚ್ಚಿತ್ತು. ಆದರೆ, ಇಂದು ಕಡಿಮೆಯಾಗಿದೆ. ಅವರವರ ಆಸ್ತಿಯನ್ನು ನಿಭಾಯಿಸಲು ಆಗದಂತಹ ಪರಿಸ್ಥಿತಿಯಲ್ಲಿ ಪರಸ್ಪರ ಹೊಂದಾಣಿಕೆ ಮೂಲಕ ಮುಂದೆ ಸಾಗಬೇಕಿದೆ ಎಂದರು.

ಕೊಯವ ಸಮಾಜ ಅಧ್ಯಕ್ಷ ಜಿಲ್ಲಂಡ ಮೇದಪ್ಪ ಮಾತನಾಡಿ, ಎಲ್ಲಾ ಕೊಡವ ಭಾಷಿಕರಿಗೆ ಅನುಕೂಲವಾಗುವಂತೆ ಕೊಡವ ಅಕಾಡೆಮಿಯಲ್ಲಿ ಅವಕಾಶ ಸಿಗಬೇಕು. ತಪ್ಪಿದಲ್ಲಿ ನಿರಾಸಕ್ತಿಯಿಂದ ಭಾಷೆ, ಸಂಸ್ಕøತಿ ಕುಂಠಿತವಾಗಲಿದೆ ಎಂದರು.

ಕೊಡವ ಭಾಷಿಕರಿಗೆ ಕೃಷಿ, ತೋಟ ನಿರ್ವಹಣೆ, ಮರ ಕಡಿಯುವದರಲ್ಲಿ ಪ್ರತ್ಯೇಕ ಕಾನೂನು ಜಾರಿಗೆ ತರಬೇಕು. ಸೇನೆಗೆ ಹೆಚ್ಚು ಕಾಣಿಕೆ ನೀಡಿರುವ ಭಾಷಿಕÀರಿಗೆ ಸೇನೆಯಲ್ಲಿ ಹುದ್ದೆ ಗಿಟ್ಟಿಸಿಕೊಳ್ಳಲು ಅನುಕೂಲವಾಗುವಂತೆ ಪ್ರತ್ಯೇಕ ಸಂಸ್ಥೆ ಸ್ಥಾಪನೆಯ ಅವಶ್ಯಕತೆ ಇದೆ ಎಂದರು.

ಅಖಿಲ ಅಮ್ಮಕೊಡವ ಸಮಾಜ ಗೌ. ಅಧ್ಯಕ್ಷ ಬಾನಂಡ ಪ್ರಥ್ಯು ಮಾತನಾಡಿ, ಎಲ್ಲಾ ಕೊಡವ ಭಾಷಿಕರು ಒಂದೇ ವೇದಿಕೆಯಲ್ಲಿ ಕಲೆ ಬಿಂಬಿಸುತ್ತಿರುವದು ಉತ್ತಮ ಬೆಳವಣಿಗೆ ಎಂದರು.

ನಾಲ್‍ನಾಡ್ ಕುಡಿಯ ಜನಾಂಗ ಅಧ್ಯಕ್ಷ ಕುಡಿಯರ ಮುತ್ತಪ್ಪ ಮಾತನಾಡಿ, ಕೊಡವರ ಬದುಕಿನಲ್ಲಿ ಕುಡಿಯ ಜನಾಂಗದ ಪಾತ್ರ ಹೆಚ್ಚಿತ್ತು. ಆದರೆ, ಇಂದು ಎಲ್ಲವೂ ಕಣ್ಮರೆಯಾಗಿದೆ. ಮಹಿಳೆಯರು ಉಡುಪುಗಳ ಮೂಲಕ ಇಲ್ಲಿನ ಆಚಾರವನ್ನು ರಕ್ಷಿಸಬೇಕಾಗಿದೆ. ಬಲ್ಯಮನೆಗೆ ಹೆಚ್ಚಿನ ಗೌರವ ನೀಡಬೇಕಾಗಿದೆ ಎಂದರು.

ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಮಾತನಾಡಿ, ಕೊಡವ ಅಕಾಡೆಮಿ ಕಲೆಯನ್ನು ಪೋಷಿಸುವದರೊಂದಿಗೆ ಕೊಡವ ಭಾಷೆಯನ್ನು 8 ನೇ ಪರಿಚ್ಚೇದಕ್ಕೆ ಸೇರಿಸಲು ಒತ್ತಡ ತರುವಂತಹÀ ಕೆಲಸ ಮಾಡಬೇಕು ಎಂದರು.

ಈ ಸಂದರ್ಭ ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸುದೀರ್, ಕಂಗಳತ್ತ್‍ನಾಡ್ ಮಹಿಳಾ ಸಮಾಜ ಅಧ್ಯಕ್ಷೆ ರಾಧಾ ಅಚ್ಚಯ್ಯ, ಗ್ರಾ. ಪಂ. ಅಧ್ಯಕ್ಷೆ ಬಲ್ಯಂಡ ಭವಾನಿ ಮೋಹನ್, ಸವಿತಾ ಸಮಾಜ ಅಧ್ಯಕ್ಷ ವೇದಪಂಡ ಬಿ. ಕಿರಣ್, ಗ್ರಾ. ಪಂ. ಸದಸ್ಯ ಆಪಟೀರ ಎಸ್. ನಾಚಯ್ಯ, ಗೋಣಿಕೊಪ್ಪ ಪೊಲೀಸ್ ಉಪನಿರೀಕ್ಷಕ ಶ್ರೀಧರ್ ಉಪಸ್ಥಿತರಿದ್ದರು.

ಕೊಡವ ಸಾಂಸ್ಕøತಿಕ ಮೇಳ ಸಂಚಾಲಕ ಆಪಟ್ಟೀರ ಟಾಟು ಮೊಣ್ಣಪ್ಪ ಸ್ವಾಗತಿಸಿದರು. ಸದಸ್ಯ ಚಂಗುಲಂಡ ಸೂರಜ್ ವಂದಿಸಿದರು. ಆಂಗೀರ ಕುಸುಮ್, ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.

ಅಕಾಡೆಮಿ ಸದಸ್ಯರುಗಳಾದ ಚಂಗುಲಂಡ ಸೂರಜ್, ಸುಳ್ಳಿಮಾಡ ಭವಾನಿ ಕಾವೇರಪ್ಪ, ಹಂಚೇಟೀರ ಮನು ಮುದ್ದಪ್ಪ, ಹಂಚೇಟೀರ ಫ್ಯಾನ್ಸಿ ಮುತ್ತಣ್ಣ, ಅಜ್ಜಮಾಡ ಪಿ. ಕುಶಾಲಪ್ಪ, ಬೀಕಚಂಡ ಬೆಳ್ಯಪ್ಪ, ತೋರೇರ ಮುದ್ದಯ್ಯ, ಕುಡಿಯರ ಶಾರದ, ಮನ್ನಕಮನೆ ಬಾಲಕೃಷ್ಣ, ಹೆಚ್. ಎ. ಗಣಪತಿ, ಬೊಳ್ಳಜೀರ ಅಯ್ಯಪ್ಪ, ಆಂಗೀರ ಕುಸುಮ್, ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ಪಾಲ್ಗೊಂಡಿದ್ದರು.

ಮುಕ್ಕೋಡ್ಲು ಕಲ್ಚರಲ್ ಅಸೋಸಿಯೇಷನ್ ತಂಡದಿಂದ ಕತ್ತಿಯಾಟ್, ಟಿ. ಶೆಟ್ಟಿಗೇರಿ ಮೂಂದ್‍ನಾಡ್ ಕೊಡವ ಸಮಾಜ ತಂಡದಿಂದ ಉಮ್ಮತ್ತಾಟ್ ಪ್ರದರ್ಶನಗೊಂಡಿತು.

-ಸುದ್ದಿಪುತ್ರ