ಕುಶಾಲನಗರ, ಡಿ. 23: ಕುಶಾಲನಗರ ಸಮೀಪದ ಕ್ರೈಸ್ಟ್ ಶಾಲೆಯಲ್ಲಿ ಕ್ರೀಡಾ ದಿನಾಚರಣೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಪ್ರಾಥಮಿಕ ಹಂತದ ಶಿಕ್ಷಣ ವಿದ್ಯಾರ್ಥಿಗಳ ಶೈಕ್ಷಣಿಕ ಅವಧಿಯ ಪ್ರಮುಖ ಘಟ್ಟವಾಗಿದೆ. ಈ ಅವಧಿಯಲ್ಲಿ ಮಕ್ಕಳನ್ನು ಶಿಸ್ತುಬದ್ದರಾಗಿಸುವದು ಶಿಕ್ಷಣ ಸಂಸ್ಥೆ ಮತ್ತು ಪೋಷಕರ ಆದ್ಯ ಕರ್ತವ್ಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಉದ್ಯಮಿ ಉಮಾ ಶಂಕರ್ ಧ್ವಜಾರೋಹಣ ನೆರವೇರಿ ಸಿದರು. ಅತಿಥಿಗಳಾಗಿ ಕುಶಾಲನಗರ ಪ.ಪಂ. ಸದಸ್ಯೆ ರೂಪಾ ಉಮಾ ಶಂಕರ್, ಶಾಲಾ ಮುಖ್ಯಸ್ಥರಾದ ರಾಖಿ ವಾಸ್, ದೋರ್ತಿವಾಸ್, ಮುಖ್ಯ ಶಿಕ್ಷಕ ಹೆಚ್.ಎಸ್. ಉದಯ ಪ್ರಕಾಶ್ ಇದ್ದರು.

ಶಾಲೆಯ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ, ವಿವಿಧ ರೀತಿಯ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳು ನಡೆಯಿತು. ನಂತರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.