ನಾಪೆÇೀಕ್ಲು, ಡಿ. 23: ತಾ. 22ರಂದು ಬೆಳಿಗ್ಗೆ ನಾಪೆÇೀಕ್ಲು ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಮಡಿಕೇರಿ ತಾಲೂಕು ತಹಶೀಲ್ದಾರ್ ಕುಸುಮ ಅವರು ರಾಷ್ಟ್ರ ಧ್ವಜಾರೋಹಣ ಮಾಡುವದ ರೊಂದಿಗೆ ಆರಂಭಗೊಂಡ 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ವೈವಿಧ್ಯಮಯ ಕಾರ್ಯಕ್ರಮಗ ಳೊಂದಿಗೆ 23 ರಂದು ರಾತ್ರಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ದ್ವಾರಗಳು: ನಾಲ್ಕುನಾಡಿಗೆ ಸಂಬಂಧಪಟ್ಟ, ನಾಡಿಗಾಗಿ ತಮ್ಮ ಸೇವೆಯನ್ನು ಮುಡಿಪಾಗಿಟ್ಟ ಮಹನೀಯರ ಹೆಸರಿನಲ್ಲಿ ಐದು ದ್ವಾರಗಳನ್ನು ನಿರ್ಮಿಸಲಾಗಿತ್ತು. ಹಳೇ ತಾಲೂಕಿನ ಕಕ್ಕಬ್ಬೆ ರಸ್ತೆಯಲ್ಲಿ ಮಹಾಗುರು ಕಲ್ಯಾಟಜ್ಜಪ್ಪ ಅವರ ಹೆಸರಿನಲ್ಲಿ ಕಲ್ಯಾಟಂಡ ಕುಟುಂಬಸ್ಥರು ದ್ವಾರ ನಿರ್ಮಿಸು ವದರ ಮೂಲಕ ತಮ್ಮ ಹಿರಿಯರನ್ನು ನಾಡಿಗೆ ಪರಿಚಯಿಸಿದರೆ, ಭಾಗಮಂಡಲ ರಸ್ತೆಯಲ್ಲಿ ದೇಶಕ್ಕಾಗಿ ವೀರ ಮರಣವನ್ನಪ್ಪಿದ ದಿ. ಬಿ.ಎಂ.ದೇವಪ್ಪ ಅವರ ಹೆಸರಿನಲ್ಲಿ ಅವರ ಸಹೋದರ ಬಿ.ಎಂ.ಪ್ರತೀಪ್, ನಾಪೆÇೀಕ್ಲು ಶ್ರೀ ಮಕ್ಕಿ ಶಾಸ್ತಾವು ಮತ್ತು ತ್ರಿಭಾಷಾ ಸಾಹಿತಿ ದಿ. ಮಂಡೀರ ಜಯಾ ಅಪ್ಪಣ್ಣ ಅವರ ಹೆಸರಿನಲ್ಲಿ ಬೇತು ಗ್ರಾಮದ ಚೋಕಿರ ಸಜಿತ್ ಮತ್ತು ತಂಡ ದ್ವಾರ ನಿರ್ಮಿಸುವದರ ಮೂಲಕ ಕನ್ನಡಾಭಿಮಾನವನ್ನು ಮೆರೆದರು. ಮಡಿಕೇರಿ - ನಾಪೆÇೀಕ್ಲು ರಸ್ತೆಯ ಕೊಟ್ಟಮುಡಿ ಬಳಿ ವಿವಿಧ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೆಸರು ವಾಸಿಯಾಗಿರುವ ಪಿ.ಪಿ ಪೌಂಡೇಶನ್‍ನವರು ತಮ್ಮ ತಾತ ಸಮಾಜ ಸೇವಕ ಪಿ.ಪಿ.ಹಾಜಿ ಅವರ ಹೆಸರಿನಲ್ಲಿ ದ್ವಾರ ನಿರ್ಮಿಸಿ ಬಾತೃತ್ವ ಮೆರೆದರು. ಮುಖ್ಯ ಪ್ರವೇಶ ದ್ವಾರದಲ್ಲಿ ನಾಪೆÇೀಕ್ಲು ಇಂದಿರಾನಗರದ ವಿವೇಕಾನಂದ ಯುವಕ ಸಂಘದವರು ಹರದಾಸ ಅಪ್ಪಚ್ಚಕವಿ ದ್ವಾರವನ್ನು ನಿರ್ಮಿಸುವದರ ಮೂಲಕ ಕನ್ನಡ ಹಬ್ಬಕ್ಕೆ ಬೆಂಬಲವಾಗಿ ನಿಂತರು.
ಮೆರವಣಿಗೆ: ಬೆಳಿಗ್ಗೆ 9 ಗಂಟೆಗೆ ಅಂಕುರ್ ಪಬ್ಲಿಕ್ ಶಾಲೆಯಿಂದ ಆರಂಭಗೊಂಡ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ, ಈ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ತ್ರೀ ಶಕ್ತಿ, ಧರ್ಮಸ್ಥಳ ಸಂಘ, ಮಹಿಳಾ ಸಮಾಜ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಎನ್‍ಸಿಸಿ, ನಾಪೆÇೀಕ್ಲು ಎಸ್.ಎನ್.ಡಿ.ಪಿ ಘಟಕ, ಹಳೇತಾಲೂಕು ಜಮಾಅತ್‍ನ ದಫ್ ತಂಡ, ಡೊಳ್ಳು ಕುಣಿತ, ಗೊಂಬೆ ಕುಣಿತ ತಂಡಗಳು, ನಾಪೆÇೀಕ್ಲುವಿನ ಆಟೋ ಚಾಲಕರ ಮತ್ತು ಮಾಲಿಕರ ಸಂಘದ 100ಕ್ಕೂ ಹೆಚ್ಚು ಆಟೋಗಳು ಪಾಲ್ಗೊಂಡಿದ್ದವು. ಒಂದು ಸಾವಿರ ಅಡಿ ಉದ್ದದ ಕನ್ನಡ ಬಾವುಟವನ್ನು ವಿದ್ಯಾರ್ಥಿಗಳು ಒಟ್ಟಿಗೆ ಹಿಡಿದು ಸಾಗಿದರು. ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಪಿ.ಪಿ. ಫೌಂಡೇಶನ್ ವತಿಯಿಂದ ತಂಪು ಪಾನೀಯ ಮತ್ತು ಅಶ್ರಫ್ ಸಿಹಿ ಹಂಚಿ ಗಮನ ಸೆಳೆದರು.
ಸಾಂಸ್ಕøತಿಕ ಕಾರ್ಯಕ್ರಮ: ಸಭಾ ಕಾರ್ಯಕ್ರಮ, ಕವಿ ಗೋಷ್ಠಿ, ವಿಚಾರ ಗೋಷ್ಠಿ, ಕನ್ನಡ ಭಾವಸಂಗಮ ಕಾವ್ಯ ಕುಂಚಗಾಯನ, ಪುಸ್ತಕ ಅವಲೋಕನ ಜನಪದೋತ್ಸವ, ಜನಪದ ಗೀತೆಗಳು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಕ್ರಮಬದ್ಧವಾಗಿ ನಡೆದವು. ಸಂಜೆ ವಿವಿಧ ಕಲಾವಿದರಿಂದ, ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಊಟೋಪಚಾರ: ಎರಡು ದಿನಗಳು ನಡೆದ ಸಮ್ಮೇಳನದಲ್ಲಿ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಸಂಜೆ ಕಾಫಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಬಂದೋಬಸ್ತ್: ಮೆರವಣಿಗೆ ಮತ್ತಿತರ ಕಾರ್ಯಕ್ರಮಗಳಲ್ಲಿ ಯಾವದೇ ಅಹಿತಕರ ಘಟನೆ ನಡೆಯದಂತೆ ನಾಪೆÇೀಕ್ಲು ಪೆÇಲೀಸ್ ಠಾಣಾಧಿಕಾರಿ ನಂಜುಂಡಸ್ವಾಮಿ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ಮಹಿಳಾ ಗೋಷ್ಠಿ: ಬಸವಣ್ಣನ ಕಾಲದಲ್ಲಿಯೇ ಮಹಿಳೆ ಪುರುಷರಿಗೆ ಸಮಾನವಾದ ಸ್ಥಾನದಲ್ಲಿದ್ದಳು ಎಂದು ನಾಪೆÇೀಕ್ಲು ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲೆ ಪಿ.ಕೆ.ನಳಿನಿ ಹೇಳಿದರು.
ನಾಪೆÇೀಕ್ಲು ಪ್ರೌಢಶಾಲಾ ವಿಭಾಗದಲ್ಲಿ ನಡೆದ ಎರಡನೇ ದಿನದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯಲ್ಲಿ, ಸಮಾಜದಲ್ಲಿ ಮಹಿಳೆಯರ ಪ್ರಸ್ತುತ ತಲ್ಲಣಗಳು ಎಂಬ ಬಗ್ಗೆ ವಿಷಯ ಮಂಡನೆಯಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯದ ನಂತರ ಮಹಿಳೆಯರ ಮೇಲಿನ ಪಿಡುಗುಗಳು ನಿಧಾನವಾಗಿ ಕಡಿಮೆಯಾಗಿದ್ದರೂ, ಇತ್ತೀಚಿನ ವಿದ್ಯಾವಂತ ಆಧುನಿಕ ಯುಗದಲ್ಲಿ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹಗಳು ನಡೆಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಮಡಿಕೇರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಕೋರನ ಸರಸ್ವತಿ ಸಾಮಾಜಿ ವ್ಯವಸ್ಥೆಯ ನಿರ್ವಹಣೆಯಲ್ಲಿ ಉದ್ಯೋಗಸ್ಥ ಮಹಿಳೆಯರ ಪಾತ್ರ ಎಂಬ ಬಗ್ಗೆ ಮಾತನಾಡಿ ಉದ್ಯೋಗಂ ಪುರುಷಂ ಲಕ್ಷಣಂ ಅಲ್ಲ. ಇಂದು ಉದ್ಯೋಗಂ ಸ್ತ್ರೀ ಪುರುಷ ಲಕ್ಷಣಂ ಎಂಬಂತಾಗಿದೆ. ಸ್ತ್ರೀಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎನ್ನುವದು ಪುರುಷರ ವಾದವಾಗಿದೆ. ಮಹಿಳೆ ಜೀವಿತದ ಬಹುಪಾಲು ಅವಧಿಯನ್ನು ಕುಟುಂಬದಲ್ಲಿಯೇ ಕಳೆಯುತ್ತಾಳೆ. ಮಹಿಳೆಯ ಸುರಕ್ಷತೆಗೆ ಸಂಬಂಧಿಸಿದ ಹಕ್ಕುಗಳನ್ನು ತಿಳಿದುಕೊಳ್ಳಬೇಕು ಎಂದರು.
ಸೋಮವಾರಪೇಟೆ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ತಿಲೋತ್ತಮೆ ಕೊಡಗು ಜಿಲ್ಲಾ ಮಹಿಳೆಯರ ಸಾಮಾಜಿಕ ಸಮಸ್ಯೆಗಳು ಎಂಬ ವಿಷಯವಾಗಿ ಮಾತನಾಡಿ ಕೊಡಗಿನಲ್ಲಿ ಭಾಷೆ, ಜಾತಿಯಲ್ಲಿ ಭಿನ್ನತೆಯಿದ್ದರೂ, ನಾಡು, ನುಡಿ ವಿಷಯ ಬಂದಾಗ ನಾವೆಲ್ಲಾ ಒಂದೇ ಎಂದು ಸೇರುತ್ತಿರುವದು ಸಂತಸ ತಂದಿದೆ ಎಂದರು.
ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಕಸ್ತೂರಿ ಗೋವಿಂದ ಮ್ಮಯ್ಯ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಭಾರದ್ವಾಜ್ ಕೆ.ಆನಂದ ತೀರ್ಥ, ವಿಜಯ ವಿಷ್ಣು ಭಟ್, ಪಾಲೇರ ರಾಣಿ ಅಪ್ಪಣ್ಣ, ಕೇಲೇಟಿರ ಚಿತ್ರಾ ನಾಣಯ್ಯ, ಸುನಿತಾ ಲೋಕೇಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಇದ್ದರು.
ಮೂರು ವಿಚಾರ ಸಂಕಿರಣಗಳು
ಇಂದು ಸಾಹಿತ್ಯ ಎಂಬ ಮರದಲ್ಲಿ ಹೊಸ ಹೊಸ ಹಣ್ಣುಗಳು ಉತ್ಪತ್ತಿಯಾಗುತ್ತಿವೆ. ಎಂದು ‘ಶಕ್ತಿ’ ದಿನಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಅಭಿಪ್ರಾಯಪಟ್ಟರು.
ನಾಪೆÇೀಕ್ಲು ಪ್ರೌಢಶಾಲಾ ವಿಭಾಗದಲ್ಲಿ ನಡೆದ ಎರಡನೇ ದಿನದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ಬಗ್ಗೆ ವಿಷಯ ಮಂಡನೆಯಲ್ಲಿ ಅವರು ಮಾತನಾಡಿದರು. ಹಿಂದೆ ಪತ್ರಿಕೆಗಳ ಬೆಳವಣಿಗೆಯಲ್ಲಿ ಸಾಹಿತಿಗಳ ಪಾತ್ರವಿತ್ತು. ಪತ್ರಿಕೆಗಳು ಆರಂಭವಾಗಿದ್ದೆ ಸಾಹಿತಿಗಳಿಂದ ಎಂದರು. ಕೊಡಗು ಜಿಲ್ಲೆಯಲ್ಲಿ ಕೊಡಗು ದೈನಿಕ ಮತ್ತು ಶಕ್ತಿ ಪತ್ರಿಕೆ ಗಳು ಎಲೆ ಮರೆಯ ಕಾಯಿಯಂತಿದ್ದ ಸಾಹಿತಿಗಳು, ಲೇಖಕರಿಗೆ ವೇದಿಕೆ ಕಲ್ಪಿಸಿದ ಪರಿಣಾಮ ಇಂದು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತಿಗಳು, ಬರಹಗಾರರು, ಪತ್ರಕರ್ತರು ಸೃಷ್ಟಿಯಾಗಿದ್ದಾರೆ ಎಂದರು. ಇಲ್ಲಿ ಪತ್ರಿಕೆಗಳಿಂದ, ಮಾಧ್ಯಮಗಳಿಂದ, ಸಂಘಟನೆ ಗಳಿಂದ ಸಾಹಿತಿಗಳನ್ನು ನಿರಂತರ ವಾಗಿ ಬೆಳೆಸುವ ಕೆಲಸವಾಗುತ್ತಿದೆ ಇದನ್ನು ಪುಟಾಣಿಗಳಿಗೂ ಉಣಬಡಿಸಿದರೆ ಅವರಲ್ಲಿಯೂ ಸಾಹಿತ್ಯ ಬೆಳೆಯಲು ಸಾಧ್ಯವಾಗುತ್ತದೆ ಎಂದರು. ಇದಕ್ಕೂ ಮೊದಲು ಆಯೋಜಕರ ವಿನಂತಿಯಂತೆ ಅವರು ಭಾವ ಗೀತೆಯನ್ನು ಹಾಡುವದರ ಮೂಲಕ ಸಭಿಕರ ಮನ ರಂಜಿಸಿದರು.
ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಾಧ್ಯಾಪಕ ಮಾಳೇಟಿರ ಕಾವೇರಪ್ಪ ಕನ್ನಡ ಉಳಿಸುವಲ್ಲಿ ಯುವ ಜನತೆಯ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಿ ಭಾಷೆ ಬದುಕಿನ ಕನ್ನಡಿಯ ಹಾಗೆ. ಮನುಷ್ಯ ಪ್ರಾಣಿಗಳಿಗಿಂತ ಭಿನ್ನವಾಗಿ ಕಾಣಲು ಅವನು ಬಳಸುವ ಭಾಷೆಯೇ ಕಾರಣ ಎಂದರು. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಆದÀ್ಯತೆ ನೀಡಬೇಕು. ಕನ್ನಡ ರಾಜ್ಯದ ಆಡಳಿತ ಭಾಷೆಗೆ ಈಗ ಕುತ್ತು ಬಂದಿರುವ ಬಗ್ಗೆ ವಿಷಾಧ ವ್ಯಕ್ತಪಡಿಸಿದರು. ಬೇರೆ ಭಾಷೆಯವರೊಂದಿಗೆ ನಾವು ಮಾತನಾಡುವಾಗ ಕನ್ನಡ ಬಳಸದೆ ಅವರ ಭಾಷೆಯನ್ನೇ ಪ್ರಯೋಗಿಸುತ್ತಿರುವದು ಕನ್ನಡಕ್ಕೆ ಮಾಡುವ ಅವಮಾನವೆಂದರು.
ಡಾ. ಸದಾಶಿವಯ್ಯ ಪಲ್ಲೇದ್ ಅವರು ಗ್ರಾಮೀಣ ಆಟಗಳಲ್ಲಿ ಸಾಹಿತ್ಯ ಎಂಬ ಬಗ್ಗೆ ಮಾತನಾಡಿ ಗ್ರಾಮೀಣ ಕ್ರೀಡೆಗಳು ಮನುಷ್ಯನ ಹುಟ್ಟಿನಿಂದ ಸಾಯುವವರೆಗೆ ಇರುತ್ತವೆ. ಗ್ರಾಮೀಣ ಆಟಗಳ ಉದ್ದೇಶ ಮನರಂಜನೆ. ಆದರೂ ಅದರಲ್ಲಿ ಅಡಗಿರುವ ಸಾಹಿತ್ಯ ಅದ್ಭುತ ಎಂದರು. ಜಾನಪದ ಹಾಡಿನ ಮೂಲಕ ಗ್ರಾಮ್ಸ ಆಟಗಳು ಇನ್ನೂ ಜೀವಂತವಾಗಿರುವದನ್ನು ಅವರು ಉದಾಹರಿಸಿದರು. ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿದೆ ಎನ್ನುತ್ತಾರೆ. ಆದರೆ ಗ್ರಾಮೀಣ ಕ್ರೀಡಗಳ ಹೊಸ ಆವಿಸ್ಕಾರವನ್ನು ಪಡೆದುಕೊಂಡಿದೆ ಎಂದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ನನಗೆ ಅನ್ನ ನೀಡಿದ್ದು ಕನ್ನಡ. ಭಾರತದಲ್ಲಿ ಎಲ್ಲರ ಆಚಾರ – ವಿಚಾರ, ಪದ್ಧತಿ - ಪರಂಪರೆಗಳನ್ನು ಹೊಂದಿದೆ. ಎಲ್ಲವನ್ನು ಎಲ್ಲರನ್ನು ನಾವು ಗೌರವಿಸಬೇಕು ಎಂದ ಅವರು ಎಲ್ಲಾ ಸಂಸ್ಕøತಿಯನ್ನು ಕುತೂಹಲಭರಿತ ವಾಗಿ ನೋಡಿದಾಗ ಸಂಘರ್ಷ ದ್ವೇಷಗಳು ನಡೆಯುವದಿಲ್ಲ ಎಂದರು.
ಗೋಷ್ಠಿಯ ಅಧ್ಯಕ್ಷತೆವಹಿಸಿದ್ದ ಸಾಹಿತಿ ನಾಗೇಶ್ ಕಾಲೂರು ಮಾತನಾಡಿ ಬದುಕು ಬೇರೆ ಅಲ್ಲ. ಸಾಹಿತ್ಯ ಬೇರೆ ಅಲ್ಲ; ಸಾಹಿತ್ಯ ಒಂದು ಕನ್ನಡಿಯಿದ್ದಂತೆ. ಕೊಡಗಿನಲ್ಲಿ ಸಾಹಿತಿಗಳನ್ನು ಬೆಳೆಸಿದ ಕೀರ್ತಿ ‘ಶಕ್ತಿ’ ಪತ್ರಿಕೆದ್ದಾಗಿದೆ. ಎಲ್ಲರಿಗೂ ಜಾತಿ ಮತ್ತು ಧರ್ಮದ ಮೇಲೆ ಅಭಿಮಾನ ವಿರಬೇಕು; ಹಾಗೆಯೇ ಬೇರೆ ಜಾತಿಯವರನ್ನು ಗೌರವಿಸ ಬೇಕು ಎಂದು ಕಿವಿಮಾತು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಭಾರದ್ವಾಜ್ ಕೆ.ಆನಂದ ತೀರ್ಥ ವಹಿಸಿದ್ದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಟಿ.ಆರ್. ಪ್ರೇಮ್ ಕುಮಾರ್, ಮತ್ತಿತರರು ಇದ್ದರು.
ಸಾಧಕರಿಗೆ ಸನ್ಮಾನ
ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಸಾಹಿತ್ಯ ಕ್ಷೇತ್ರದಲ್ಲಿ ಸ್ಮಿತಾ ಅಮೃತ್ ರಾಜ್, ಶಿಲ್ಪಕಲೆಯಲ್ಲಿ ಮಡಿಕೇರಿಯ ರವಿ, ಚಿತ್ರಕಲೆ: ಕ್ಲಿಫರ್ಡ್ ಗಾಡ್‍ವಿನ್ ಡೆಮೆಲೋ, ಸಮಾಜಸೇವೆ ಶ್ರೀನಿವಾಸ್ ರಾವ್, ಸಂಗೀತದಲ್ಲಿ ಚಕ್ಕೇರ ತ್ಯಾಗರಾಜ್, ನಾಟಕ ಕಲೆ: ಅಡ್ಡಂಡ ಅನಿತಾ ಕಾರ್ಯಪ್ಪ, ವೈದ್ಯಕೀಯ: ಡಾ. ಸುಧಾಕರ್ ಶೆಟ್ಟಿ, ಶಿಕ್ಷಣ: ಪೂಜಾರಿರ ಎಂ. ದೇವಕಿ, ಯುವ ಪ್ರತಿಭೆ: ಕೆ.ಎಸ್.ಪ್ರಗತಿ, ಅಂತರ್ರಾಷ್ಟ್ರೀಯ ಹಾಕಿ ಆಟಗಾರ ಎಸ್.ವಿ.ಸುನಿಲ್, ಹಿರಿಯ ಸಾಧಕ ಬೊಪ್ಪೇರ ಸಿ. ಕಾವೇರಪ್ಪ, ಮಾಧ್ಯಮ ಕ್ಷೇತ್ರ: ನಾಪೆÇೀಕ್ಲುವಿನ ಕೆ.ಎಂ. ರಮೇಶ್, ವಾದ್ಯ ಸಂಗೀತ: ಸತೀಶ್, ಉನ್ನತ ಶಿಕ್ಷಣ: ಹೊಸೋಕ್ಲು ಸಚಿತ್, ಬುಡಕಟ್ಟು ಜಾನಪದ: ಕುಡಿಯರ ಗೋಪಮ್ಮ, ಜಾನಪದ ಸಂಶೋಧನೆ: ನಂಜುಂಡಸ್ವಾಮಿ, ಯಕ್ಷಗಾನ: ಕೆ.ಕೆ. ದೇವಪ್ಪ ಸಂಪಾಜೆ, ಸಾಮಾಜಿಕ ಚಟುವಟಿಕೆ: ಎಂ.ಇ. ಮಹಮ್ಮದ್, ಕೃಷಿ: ಬಿದ್ದಾಟಂಡ ರೋಜಿ ಚಿಣ್ಣಪ್ಪ, ಪೌರ ಕಾರ್ಮಿಕ: ಬಾಲು, ಸಾರ್ವಜನಿಕ ಹಿರಿಯ ಸೇವೆ: ಬಾಬು ಚಂದ್ರ ಉಳ್ಳಾಗಡ್ಡಿ, ನಾಟಿ ವೈದ್ಯೆ: ಸರೋಜಮ್ಮ ಅವರನ್ನು ಸನ್ಮಾನಿಸಲಾಯಿತು. ಅದರಂತೆ ಆಗಸ್ಟ್ ತಿಂಗಳಲ್ಲಿ ಕೊಡಗಿನಲ್ಲಿ ನಡೆದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ ಜಿಲ್ಲೆಯ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಹಾಗೂ ಈ ಸಂದರ್ಭದಲ್ಲಿ ಸೈನಿಕರಂತೆ ಹಗಲು ರಾತ್ರಿ, ಕರ್ತವ್ಯ ನಿರ್ವಹಿಸಿದ ಕೊಡಗಿನ ಎಲ್ಲಾ ಚೆಸ್ಕಾಂ ಶಾಖೆಯ ಓರ್ವ ಮಾರ್ಗದಾಳುಗಳನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮತ್ತಿತರರು ಇದ್ದರು.
ಹಳ್ಳಿಗಳಲ್ಲಿ ಮಾತ್ರ ಕನ್ನಡಮ್ಮನ ದರ್ಶನ ಸಾಧ್ಯ: ವಿಷ್ಣುಭಟ್
ಇಂದು ಕನ್ನಡ ಉಳಿದಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಮಾತ್ರ. ಕನ್ನಡಮ್ಮನ ದರ್ಶನವಾಗಬೇಕಾದರೆ ನಾವು ಹಳ್ಳಿಗಳಿಗೆ ಹೋಗಬೇಕಾಗಿದೆ ಎಂದು ಬೆಂಗಳೂರಿನ ಹಿರಿಯ ಸಾಹಿತಿ ವಿಷ್ಣು ಭಟ್ ಹೇಳಿದರು.
ನಾಪೆÇೀಕ್ಲು ಪ್ರೌಢಶಾಲೆಯ ಮಹಾಭಲೇಶ್ವರ ಭಟ್ ಪ್ರಧಾನ ವೇದಿಕೆಯಲ್ಲಿ ಆಯೋಜಿಸಲಾಗಿದ್ದ 13ನೇ ಜಿಲ್ಲಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸರಕಾರ ಮಾತ್ರ ಕೊಡಗು ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ ಎಂದು ವಿಷಾಧ ವ್ಯಕ್ತ ಪಡಿಸಿದ ಅವರು, ಸರಕಾರ ಕೊಡಗು ಜಿಲ್ಲೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು. ಭಾಷೆ ಎಂಬುದು ಹರಿಯುವ ನೀರಿದ್ದಂತೆ. ಆಂಗ್ಲ ಭಾಷೆಯ ವ್ಯಾಮೋಹ ಬೇಡ. ಭಾಷೆಯ ಜೀವಾಳವೇ ಸಾಹಿತ್ಯ ಎಂದ ಅವರು, ಜಾನಪದ ಸಾಹಿತ್ಯದ ಮೂಲಕ ಬಾಷೆಯನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ಸಾಹಿತಿಗಳಲ್ಲಿ ಒಗ್ಗಟ್ಟಿಲ್ಲ. ಆದುದರಿಂದ ಕನ್ನಡ ಬೆಳೆಯುತ್ತಿಲ್ಲ. ಉಸಿರು ಕನ್ನಡ, ಅನ್ನ ಕನ್ನಡ ಎಂಬ ಶುದ್ಧ ಮನಸ್ಸಿನಿಂದ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ ಕನ್ನಡಮ್ಮನ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಚ್.ಜಿ. ಪ್ರಭಾಕರ್ ಮಾತನಾಡಿ, ಕನ್ನಡ ಒಂದು ಜೀವ, ನುಡಿ, ಹೃದಯಂತರಾಳ, ಶಬ್ದಗಳಲ್ಲಿ ಸುಲಭವಾಗಿ ವರ್ಣಿಸಲು ಸಾಧ್ಯವಿಲ್ಲ. ಕನ್ನಡ ಭಾಷೆಗೆ ಇಂದು ಬಂದೊದಗಿರುವ ಸ್ಥಿತಿಯ ಬಗ್ಗೆ ನಾವೆಲ್ಲರೂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಮಾತನಾಡಿ ಮಾತೃಭಾಷೆ ತಾಯಿ ಇದ್ದಂತೆ ಅದನ್ನು ಯಾರೂ ಮರೆಯಬಾರದು. ಯಾವದೇ ಭಾಷೆ ಯಾದರೂ ನಾವು ಕಲಿಯಬೇಕು. ಬೆಳೆಸಬೇಕು ಎಂದರಲ್ಲದೆ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನಗೆ ನೀಡಿದ ಸನ್ಮಾನವನ್ನು ನಾನು ಜಿಲ್ಲೆಯ ಜನತೆಗೆ ಸಮರ್ಪಿಸುತ್ತೇನೆ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಭಾರಧ್ವಾಜ್ ಕೆ. ಆನಂದ ತೀರ್ಥ, ಮಡಿಕೇರಿ ನಗರಸಭಾ ಸದಸ್ಯ ಚುಮ್ಮಿ ದೇವಯ್ಯ ಮಾತನಾಡಿದರು. ವೇದಿಕೆಯಲ್ಲಿ ನಾಪೆÇೀಕ್ಲು ಸರಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲೆ ಪಿ.ಕೆ.ನಳಿನಿ, ಅಂಕುರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಕೇಟೋಳಿರ ರತ್ನಾ ಚರ್ಮಣ್ಣ, ಜಿಲ್ಲಾ ಸಮಿತಿ ಕಾರ್ಯದರ್ಶಿ ರಮೇಶ್, ಸದಸ್ಯರಾದ ಕೋಡಿ ಚಂದ್ರಶೇಖರ್, ಮುರಳೀಧರ್, ಎಲ್ಲಾ ಸದಸ್ಯರು. ತಾಲೂಕು ಅಧ್ಯಕ್ಷರು, ಸದಸ್ಯರು ಮತ್ತಿತರರಿದ್ದರು.
ಅಂಕುರ್ ಪಬ್ಲಿಕ್ ಶಾಲಾ ವಿದ್ಯಾರ್ಥಿನಿಯರಿಂದ ನಾಡಗೀತೆ. ಅನಿತಾ ದೇವಯ್ಯ ಸ್ವಾಗತ. ಸಮ್ಮೇಳನದ ಕಾರ್ಯದರ್ಶಿ ಉಷಾರಾಣಿ ನಿರೂಪಿಸಿ, ವಂದಿಸಿದರು.
ಜಾನಪದ ಉತ್ಸವ
13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಶ್ರೀ ಮಹಾಬಲೇಶ್ವರ ಭಟ್ ವೇದಿಕೆಯಲ್ಲಿ ನಡೆದ 2ನೇ ದಿನದ ಜನಪದೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಾಹಿತ್ಯ ವಿಷ್ಣುಭಟ್ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಬೆಸೂರು ಶಾಂತೇಶ್ ಜಾನಪದ ಗೀತೆ ಹಾಡುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ನಾಪೆÇೀಕ್ಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಂದ, ಗೀತಾ ಗಿರೀಶ್ ಇದ್ದರು.
ಕಾರ್ಯಕ್ರಮದಲ್ಲಿ ವೀರಾಜಪೇಟೆಯ ನಾಟ್ಯಾಂಜಲಿ ನೃತ್ಯ ಶಾಲೆಯ ವಿದ್ಯಾರ್ಥಿನಿಯರಿಂದ ನೃತ್ಯ ಪ್ರದರ್ಶನ, ಕರಿಕೆ ಸರಕಾರಿ ಪ್ರಾಥಮಿಕ ಶಾಲೆಯ ವಿಜಯ ಕುಮಾರ್, ಮಣವಟ್ಟಿರ ದಯಾ ಚಿಣ್ಣಪ್ಪ, ವಿ.ಟಿ. ಶ್ರೀನಿವಾಸ್, ಬರ್ಮಣ್ಣ ಮತ್ತು ತಂಡ, ಪಿ.ಪಿ. ಶ್ರೀರಕ್ಷಾ, ಶ್ರೀ ರಾಮ ಟ್ರಸ್ಟ್ ಶಿಕ್ಷಕಿ ಸುಬ್ಬಮ್ಮ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು.
ವರದಿ: ಪಿ.ವಿ. ಪ್ರಭಾಕರ್