ಹೆಬ್ಬಾಲೆ, ಡಿ. 23: ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯದ ವತಿಯಿಂದ ವಲಯದ ಸದಸ್ಯರಿಗೆ ಗೃಹೋಪ ಯೋಗಿ ವಸ್ತುಗಳನ್ನು ವಿತರಣೆ ಮಾಡಲಾಯಿತು.
ವಿತರಣೆ ಮಾಡಿದ ವಲಯದ ಮೇಲ್ವಿಚಾರಕ ವಿನೋದಕುಮಾರ್ ಮಾತನಾಡಿ, ಯೋಜನೆಯ ಫಲಾನುಭವಿಗಳು ಅದರ ಪ್ರಯೋಜನವನ್ನು ಪಡೆದುಕೊಂಡು ತಮ್ಮ ಭವಿಷ್ಯವನ್ನು ಉತ್ತಮ ಪಡಿಸಿಕೊಳ್ಳಲು ಸಹಾಯಕವಾಗುವದು.
ಯೋಜನೆಯ ಮೂಲಕ ಅನೇಕ ಕಾರ್ಯಕ್ರಮ ಹಮ್ಮಿಕೊಂಡ ಗ್ರಾಮಗಳ ಪ್ರಗತಿಗೆ ಎಲ್ಲರೂ ಕೈಜೋಡಿಸಬೇಕು ಎಂದರು. ಈ ಸಂದರ್ಭ ದರ್ಶನ, ತೇಜಾವತಿ, ಸೇವಾಪ್ರತಿನಿಧಿ ಪ್ರಮೀಳಾ, ಕಲ್ಪನಾ ಇದ್ದರು.